TN : ರಾಜಕೀಯಕ್ಕೆ ಧುಮುಕಿದ ರಜನಿಕಾಂತ್, ಇದು ಸಿನೆಮಾ ಸ್ಟಂಟ್ ಅಲ್ಲ ಎಂದ style king..

ನಿರೀಕ್ಷೆಯಂತೆಯೇ ತಮಿಳಿನ ಖ್ಯಾತ ನಟ ರಜನಿಕಾಂತ್ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಚೆನ್ನೈನಲ್ಲಿ ರಾಜಕೀಯ ಆಟದ ಮೊದಲಂಕಕ್ಕೆ ಅವರು ತೆರೆ ಸರಿಸಿದ್ದಾರೆ.  ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ವ್ಯವಸ್ಥೆ ಸರಿಪಡಿಸುವ ಅಗತ್ಯವಿದೆ. ಈಗಿರುವ ರಾಜಕೀಯ ಪಕ್ಷಗಳು ಬಿಸಿನೆಸ್‌ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ರಜಿನಿ ದೂರಿದರು.

ಈ ವ್ಯವಸ್ಥೆ ದೂರವಾಗಬೇಕು. ಜನರಿಗೆ ಸರ್ಕಾರ ಹತ್ತಿರವಾಗಬೇಕು. ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಬೇಕು. ಹೀಗಾಗಿ ತಾವು ರಾಜಕೀಯಕ್ಕೆ ಬರುತ್ತಿರುವುದಾಗಿ ರಜನಿ ಹೇಳಿದ್ದಾರೆ.

ಕೆಲವು ಪಕ್ಷಗಳು ರಾಜಕೀಯವನ್ನು ಬಿಸಿನೆಸ್ ಮಾಡಿಕೊಂಡಿವೆ. ಈ ವ್ಯವಸ್ಥೆ ದೂರವಾಗಬೇಕಿದೆ. ನನಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿಲ್ಲ. ಜನರ ಅಭಿವೃದ್ಧಿಗೆ ದುಡಿಯಬೇಕೆಂಬ ಹಂಬಲವಿದೆ.

ನಮ್ಮ ಪಕ್ಷದಲ್ಲಿ ಶೇಕಡ ೬೫ ರಷ್ಟು ವಿದ್ಯಾವಂತ ಯುವಕರಿಗೆ ಅವಕಾಶ ನೀಡಲಾಗುವುದು. ನಾನು ಕೈಗೊಂಡಿರುವ ನಿರ್ಣಯ ರಾಜಕೀಯ ಸ್ಟಂಟ್ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ತಮಿಳು ರಾಜಕಾರಣದ ಎರಡು ಧ್ರುವಗಳಾದ ಡಿಎಂಕೆ ಹಾಗೂ ಎಡಿಎಂಕೆ, ಎರಡೂ ಪಕ್ಷಗಳಿಂದಲೂ ತಮ್ಮ ಪಕ್ಷ ಸಮಾನ ಅಂತರ ಉಳಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights