ತುಮಕೂರು : ಸರ್ಕಾರ ರಚನೆಯಾಗಿ 6 ತಿಂಗಳು ಕಳೆದರೂ ತೆರೆಯದ ಜಿಲ್ಲಾ ಕಚೇರಿ..!

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ ಜಿ ಪರಮೇಶ್ವರ್ ತುಮಕೂರು ಜಿಲ್ಲೆಯ ಜನತೆಗೆ ನಾಟ್ ರೀಚಬಲ್ ಆಗಿದ್ದಾರಂತೆ…ಈ ಮಾತಿಗೆ ಪುಷ್ಠಿ ನೀಡುವಂತಿದೆ ಅವರ ಜಿಲ್ಲಾ ಕಚೇರಿ…ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದ್ರು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕೊಠಡಿ ತೆರೆದಿಲ್ಲ…ಕೊಠಡಿ ಸಂಖ್ಯೆ 114 ಬಾಗಿಲಲ್ಲಿ ನೇಮ್ ಬೋರ್ಡ್ ನೇತು ಹಾಕಲಾಗಿದೆ.

ಆದ್ರೆ ಕಳೆದ ಆರು ತಿಂಗಳಿಂದಲೂ ಬೀಗ ಹಾಕಿ ಮುಚ್ಚಿದ ಬಾಗಿಲು ಮುಚ್ಚಿದಂತಿದೆ…ಇನ್ನು ತುಮಕೂರು ಗ್ರಾಮಾಂತರ ಕೊರಾ ಹೋಬಳಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ಸೇರುವುದರಿಂದ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿಯೂ ಸಹ ಕೊಠಡಿಯನ್ನು ಮೀಸಲಿರಿಸಲಾಗಿದೆ ಈ ಕೊಠಡಿ ಯಲ್ಲಿ ಪರಮೇಶ್ವರ್ ಕ್ಯಾಬಿನ್ ಗೊಡೌನ್ ಆಗಿದೆ. ಜೇಡ ಬಲೆ ಎಣೆದು ದೂಳು ತುಂಬಿದ ಕಸದ ತೊಟ್ಟಿಯಾಗಿದೆ.

ಉಳಿದ ಜಾಗದಲ್ಲಿ ಅವರ ಹೆಸರಿನಲ್ಲಿ ರಾಜಕೀಯ ಪುಡಾರಿಗಳು ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿಕೊಂಡು ಕಾಲ ಕಳೆಯುತ್ತಾರೆ.ಕೋರಟಗೆರೆಗೆ ಬಂದಾಗಲೆಲ್ಲ ಜನರ ಅಹವಾಲು ಸ್ವೀಕರಿಸುವ ಡಿಸಿಎಂ ಉಳಿದ 9 ತಾಲ್ಲೂಕು ಗಳ ಜನರ ಪಾಲಿಗೆ ನಾಟ್ ರೀಚೆಬಲ್ ಆಗಿದ್ದಾರೆ…

ಈಗಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನ ಭೇಟಿಯಾಗಲು ಜನರು ಪರದಾಡುವಂತಾಗಿದೆ. ಜಿಲ್ಲಾದಿಕಾರಿ ಕಚೇರಿಯಲ್ಲಿರುವ ಅವರ ಕಚೇರಿ ಗೆ ತೆರಳಿದ್ರೆ ಬಾಗಿಲು ಮುಚ್ಚಿರುತ್ತದೆ. ಜಿಲ್ಲೆಯಲ್ಲಿ ಡಿಸಿಎಂ ಜನಸಂಪರ್ಕ ಸಭೆ ನಡೆಸುತ್ತಿಲ್ಲ. ಫೋನ್ ಮಾಡಿದ್ರು ರಿಸಿವ್ ಮಾಡುತ್ತಿಲ್ಲ ನಮ್ಮ ಸಮಸ್ಯೆ ಗಳನ್ನ ಅವರ ಗಮನಕ್ಕೆ ತರುವುದಾದ್ರು ಹೇಗೆ…ಈಗಾಗಿ ಜಿಲ್ಲಾ ಕೇಂದ್ರ ದಲ್ಲಿ ಸಾರ್ವಜನಿಕ ರ ಅನುಕೂಲಕ್ಕಾಗಿ ಜನ ಸಂಪರ್ಕಸಭೆಗಳನ್ನ‌ ನಡೆಸುವಂತೆ ಮನವಿ ಮಾಡಿದ್ದಾರೆ.

Leave a Reply