‘Find My Phone’ ಎಂದು ಟೈಪ್ ಮಾಡಿದ್ರೆ ಕಳೆದಿರುವ ಮೊಬೈಲ್ ಸಿಗುತ್ತೆ !!

ಮೊಬೈಲ್ ಒಂದು ಕ್ಷಣ ಕೈನಲ್ಲಿಲ್ಲದಿದ್ದರೆ ಏನೊ ಕಳೆದುಕೊಂಡ ಅನುಭವ. ಇನ್ನು ಯಾವುದೋ ಸ್ಥಳದಲ್ಲಿ ಮೊಬೈಲ್ ಮರೆತು ಕಳೆದೇ ಹೋಯಿತು ಎನ್ನುವ ಕೆಟ್ಟ ಅನುಭವ ಹೇಳಲು ಸಾಧ್ಯ!. ಹೌದು, ನೀವು ಎಲ್ಲೋ ಮೊಬೈಲ್‌ ಮರೆತರೂ ಅಥವಾ ಕಳೆದುಕೊಂಡರೂ ನೀವು ಮತ್ತೆ ಹುಡುಕಲು ಬಹಳಷ್ಟು ಕಷ್ಟಪಡಬೇಕಾಗುತ್ತದೆ. ಹಾಗಾಗಿ ನೀವೆ ನಿಮ್ಮ ಮೊಬೈಲ್ ಹುಡುಕಲು ಸಾಧ್ಯವಾಗುವಂತೆ ಮಾಡಿಕೊಳ್ಳಿ. ಮನೆಯಲ್ಲಿ ಎಲ್ಲಾದರೂ ಮೊಬೈಲ್ ಮರೆತುಬಿಟ್ಟಿದ್ದರೆ ಅಥವಾ ನಿಮ್ಮ ಮೊಬೈಲ್ ಕಳುವಾಗಿ, ಗೂಗಲ್‌ ಅಕೌಂಟ್‌ ಮೂಲಕ ಇತರರು ಆ ಫೋನ್ ಉಪಯೋಗಿಸುತ್ತಿದ್ದರೆ, ಗೂಗಲ್‌ನ “Find My Phone” ಮೂಲಕ ನಿಮ್ಮ ಮೊಬೈಲ್ ಪತ್ತೆ ಹಚ್ಚಬಹುದು.

find-my-phone-pics
Googleಗೆ ಸೈನ್‌ಇನ್‌ ಆಗಿರಿ

ಈ ಮೊದಲು ನಿಮ್ಮ ಮೊಬೈಲ್‌ನಲ್ಲಿ ನೀವು ಹೊಂದಿದ್ದ ಗೂಗಲ್‌ನಲ್ಲಿ ಅಕೌಂಟ್ ಮಾಹಿತಿ ಮೂಲಕ ಇತರ ಡಿವೈಸ್‌ನ ಗೂಗಲ್ ವೆಬ್‌ನಲ್ಲಿ ಸೈನ್‌ಇನ್‌ ಆಗಿರಿ.

Google ‘Find My Phone’ ಸೆಟ್ಟಿಂಗ್ಸ್

ಉತ್ತಮ ಮೊಬೈಲ್‌ಗಳು ಮಾತ್ರ ‘Find My Phone’ ಫೀಚರ್‌ಗೆ ಸಪೋರ್ಟ್ ಮಾಡುತ್ತವೆ. ಹಾಗಾಗಿ ನಿಮ್ಮ ಮೊಬೈಲ್ ಗೂಗಲ್ ‘Find My Phone’ ಸೆಟ್ಟಿಂಗ್ಸ್ ಸಪೋರ್ಟ್ ಮಾಡುತ್ತದೆಯೇ ಎಂದು ನೋಡಿ.

‘Find My Phone’ ಸ್ಟೆಪ್ಸ್ ಫಾಲೊ ಮಾಡಿ.

ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ವೆಬ್ ಓಪನ್ ಮಾಡಿ
ಗೂಗಲ್‌ನಲ್ಲಿ Find My Phone ಎಂದು ಟೈಪ್‌ ಮಾಡಿ. ಗೂಗಲ್‌ಗೆ ಲಾಗಿನ್‌ ಆಗಿರಿ. ನೀವು ಅಕೌಂಟ್ ಹೊಂದಿದ್ದ ಮೊಬೈಲ್ ಯಾವುದು ಎಂದು ಗೂಗಲ್ ತೋರಿಸುತ್ತದೆ. ಅದನ್ನು ಅಲ್ಲಿ ಕ್ಲಿಕ್ಕಿಸಿ. ಆನಂತರ ಗೂಗಲ್ ಮೂಲಕ ನಿಮ್ಮ ಮೊಬೈಲ್‌ಗೆ ಕಾಲ್ ಮಾಡಿ. ಅಥವಾ ಗೂಗಲ್‌ಮ್ಯಾಪ್ ಮೂಲಕ ಮೊಬೈಲ್ ಎಲ್ಲಿದೆ ಎಂದು ಟ್ರಾಕ್ ಮಾಡಿ.

ಉಪಯುಕ್ತ ಸೂಚನೆ

ನೀವು ಸೈಲೆಂಟ್ ಮೋಡ್‌ನಲ್ಲಿ ಮೊಬೈಲ್‌ ಮರೆತಿರುವ ಸಮಯದಲ್ಲಿ ಈ ಸೇವೆ ಹೆಚ್ಚು ಉಪಯೋಗಕಾರಿ. ಮೊಬೈಲ್ ಕಳೆದಿದ್ದರೆ ಗೂಗಲ್ ಮೂಲಕ ನಿಮ್ಮ ಮೊಬೈಲ್‌ಗೆ ಕಾಲ್‌ ಮಾಡಬೇಡಿ. ಗೂಗಲ್ ಮ್ಯಾಪ್ ಮೂಲಕ ನಿಮ್ಮ ಮೊಬೈಲ್ ಎಲ್ಲಿದೆ ಎಂದು ಹುಡುಕಿರಿ. ಕೂಡಲೇ ಅಪ್ಲಿಕೇಷನ್ ಡೌನ್ಲೋಡ್ ಮಾಡಿ ರಿಲೀಫ್ ಆಗಿರಿ.

-ಸುಜಿತ್ ಕಳಸ

Comments are closed.