ಇರಾನ್ ನಲ್ಲಿ ಹೆಚ್ಚಿದ ಕೊರೋನ ಸಾಂಕ್ರಾಮಿಕ: ಭಾರತಕ್ಕೆ ವಾಪಸ್ ಕರೆತರಲು ಆಗ್ರಹಿಸಿ ಕಾರ್ಗಿಲ್ ಯಾತ್ರಿಗಳ ಪ್ರತಿಭಟನೆ

ಕರೋನ ವೈರಸ್ ನಿಂದ ರಕ್ಷಿಸಲು ಇರಾನ್ ನಲ್ಲಿ ಇರುವ ಭಾರತೀಯರನ್ನು ಕರೆತರುವ ಕೆಲಸವನ್ನು ಕೇಂದ್ರ ಸರ್ಕಾರ ಭಾನುವಾರವೂ ಮುಂದುವರೆದಸಿದೆ. ಇಲ್ಲಿಯವರೆಗೂ 336 ಜನರನ್ನು ಹಿಂದಕ್ಕೆ ಕರೆತರಲಾಗಿದ್ದರೂ, ಕಾರ್ಗಿಲ್ ನಿಂದ ಸುಮಾರು 850 ಯಾತ್ರಿಕರು ಮತ್ತು ಕಾಶ್ಮೀರದ 400 ವಿದ್ಯಾರ್ಥಿಗಳು ಇನ್ನೂ ಅಲ್ಲೆ ಸಿಲುಕಿಕೊಂಡಿದ್ದಾರೆ. ಚೈನಾ ನಂತರ ಕೊರೋನ ವೈರಸ್ ನಿಂದ ಹೆಚ್ಚು ಪೀಡಿತವಾಗಿರುವ ದೇಶಗಳು ಇಟಲಿ ಮತ್ತು ಇರಾನ್.

ಲಡಾಕಿನ ಕಾರ್ಗಿಲ್ ನಿಂದ ಯಾತ್ರೆಗಾಗಿ ಇರಾನ್ ಗೆ ಬಂದಿರುವವರು ತಮ್ಮನ್ನು ಭಾರತಕ್ಕೆ ಶೀಘ್ರವಾಗಿ ವಾಪಸ್ ಕರೆದೊಯ್ಯಬೇಕೆಂದು ಆಗ್ರಹಿಸಿ ಇರಾನಿನ ಭಾರತೀಯ ರಾಯಭಾರ ಕಚೇರಿಯ ಎದುರು ಪ್ರತಿಭಟನೆ ನಡಿಸಿದ್ದರೆ.ಭಾರತದಿಂದ ಇರಾನ್ ಗೆ ಹೋಗಿರುವ ವೈದ್ಯರು ಈ ಯಾತ್ರಿಕರನ್ನು ಕೊರೋನ ವೈರಸ್ ಸೋಂಕಿಗೆ ಪರೀಕ್ಷಿಸಿದ್ದು. ಹಲವರು ಸೋಂಕಿತರಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಯಾರನ್ನೂ ಇನ್ನೂ ಪ್ರತ್ಯೇಕವಾಗಿ ಸುಷ್ರೂಶೆ ಮಾಡಲಾಗಿಲ್ಲ ಎಂದು ಅಲ್ಲಿನ ಯಾತ್ರಿಕರೊಬ್ಬರು ದೂರಿರುವುದಾಗಿ ದ ಸ್ಕ್ರೋಲ್ ವರದಿ ಮಾಡಿದೆ.

ಭಾರತೀಯ ವೈದ್ಯರು ಕೊರೋನಾಗೆ ಪಾಸಿಟಿವ್ ಎಂದು ಹೇಳಿರುವ ವ್ಯಕ್ತಿಗಳನ್ನು ಇರಾನ್ ಆಸ್ಪತ್ರೆಗಳಲ್ಲಿ ಸೇರಿಸಿಕೊಳ್ಳುತ್ತಿಲ್ಲ ಎಂದು ಕೂಡ ಯಾತ್ರಿಕರೊಬ್ಬರು ದೂರಿದ್ದಾರೆ.

ಮಾರ್ಚ್ 15 ರಂದು ಟ್ವೀಟ್ ಮಾಡಿದ್ದ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ “ಇರಾನ್ ನಲ್ಲಿ ಸಿಲುಕಿಕೊಂಡಿದ್ದ 234 ಜನ ಭಾರತಕ್ಕೆ ಹಿಂದಿರುಗಿದ್ದಾರೆ. ಅವರಲ್ಲಿ 131 ವಿದ್ಯಾರ್ಥಿಗಳು ಮತ್ತು 103 ಜನ ಯಾತ್ರಿಗಳು” ಎಂದು ಬರೆದಿದ್ದರು.

ವಿಶ್ವದಾದ್ಯಂತೆ 1,40,000ಕ್ಕೂ ಹೆಚ್ಚು ಜನಕ್ಕೆ ಕೋರೋನ ಸೋಂಕು ತಗುಲಿದ್ದು 5,000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇರಾನ್ ನಲ್ಲಿ ಸುಮಾರು 724 ಜನ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಪೆಬ್ರವರಿ 27ರಿಂದ ಭಾರತ ಇರಾನ್ ನಿಂದ ಬರುವ ಎಲ್ಲ ವಿಮಾನಗಳನ್ನು ರದ್ದು ಮಾಡಿತ್ತು.