ಹೆಚ್ಚುತ್ತಿದೆ ಬಿಸಿಲಿನ ತಾಪ : ಗಗನಕ್ಕೇರಿದ ತರಕಾರಿ ಬೆಲೆ, ಕಂಗಾಲಾದ ಜನ….

ಬೆಂಗಳೂರು:ಬೇಸಿಗೆ ಆರಂಭವಾಗ್ತಾ ಇದ್ದಂತೆ, ಬಿಸಿಲಿತಾಪದಲ್ಲಿ ಹೆಚ್ಚಳವಾಗುತ್ತಿದ್ದು, ತರಕಾರಿ , ಸೊಪ್ಪಿನ ಬೆಳೆಗೆ ಬಿಸಿಲು ಮಾರಕವಾಗುತ್ತಿದೆ.  ಪರಿಣಾಮ ಸೊಪ್ಪು ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ.  ಮಣ್ಣಿನಲ್ಲಿ ತೇವಾಂಶ ಕುಸಿತದಿಂದಾಗಿ ಗಿಡದಿಂದ ಹೂವು ಉದುರುತ್ತಿದ್ದು, ಮುಂದಿನ ದಿನಗಳಲ್ಲಿ ತರಕಾರಿ ಬೆಲೆಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಇಂದಿನ ಹಾಪ್‌ಕಾಮ್ಸ್‌ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಇಂತಿದೆ. ಮೆಂತೆಸೊಪ್ಪು ಕೆ.ಜಿಗೆ 35 ರೂಪಾಯಿಗಳಾದರೆ, ಹರಿವೆ ಸೊಪ್ಪು, ದಂಟಿನಸೊಪ್ಪು, ಸಬ್ಬಸಿಗೆ ಸೊಪ್ಪಿನ ಬೆಲೆಗಳು ಒಂದು ಕೆ.ಜಿಗೆ ಕ್ರಮವಾಗಿ 28  ರೂಪಾಯಿ, 36 ರೂಪಾಯಿ, 35 ರೂಪಾಯಿ ಮತ್ತು 32 ರೂಪಾಯಿಗಳಾಗಿವೆ.   35 ರೂಪಾಯಿಗಳಿಗೆ 1 ಕೆ.ಜಿ ಕೊತ್ತಂಬರಿ ಸೊಪ್ಪು, ಹಾಗೂ 32 ರೂಪಾಯಿಗೆ 1 ಕೆಜಿ ಬಸಳೆ ಸೊಪ್ಪು ಬೆಲೆ ನಿಗಧಿಯಾದರೆ, ಟೊಮ್ಯಾಟೋ ಬೆಲೆ ಕೆ.ಜಿಗೆ 30 ರೂಪಾಯಿಗಳಿವೆ. ಬೀನ್ಸ್‌ ಬೆಲೆ ಈ ಎಲ್ಲ ತರಕಾರಿಗಳಿಗಿಂತ ಜಾಸ್ತಿ ಇದ್ದು 1 ಕೆ.ಜಿಗೆ 60 ರೂಪಾಯಿಗಳಾಗಿವೆ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ತಿಳಿಸಿದ್ದಾರೆ.
  ಮಾರ್ಚ್‌ ನಲ್ಲಿ ಈ ಪರಿಸ್ಥಿತಿ ಉಂಟಾಗಿದೆ, ಮುಂಬರುಬ ಕಡು ಬೇಸಿಗೆಯಲ್ಲಿ ಬಿಸಿಲಿತಾಪದಲ್ಲಿ ಹೆಚ್ಚಳವಾದಂತೆ ತರಕಾರಿ ಬೆಲೆನೂ ಗಗನಕ್ಕೇರಿಲಿದೆ ಅನ್ನುತ್ತಾರೆ experts.

Comments are closed.