ಕುಡಿಯುವ ನೀರು ಪರಿಶೀಲಿಸಲು ತೆರಳಿದ್ದ ಇಓ ಮೇಲೆ ಗ್ರಾಮಸ್ಥರಿಂದ ಹಲ್ಲೆ…!

ಕುಡಿಯುವ ನೀರಿನ ಬಾವಿಗೆ ಚರಂಡಿ ನೀರು ಹೋಗುವುದನ್ನ ಪರಿಶೀಲಿಸಲು ತೆರಳಿದ್ದ ತಾಲೂಕು ಪಂಚಾಯಿತಿ ಇಓ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕುಪ್ಪನಮಕ್ಕಿ ಗ್ರಾಮದಲ್ಲಿ ನಡೆದಿದೆ.

ಕೊಪ್ಪ ಇ ಓ ನವೀನ್ ಕುಮಾರ್ ಶಾನುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಪ್ಪನಮಕ್ಕಿ ಗ್ರಾಮದಲ್ಲಿ ಕುಡಿಯುವ ನೀರಿನ ಬಾವಿಗೆ ಚರಂಡಿ ನೀರು ಹೋಗುತ್ತಿದ್ದನ್ನು ಪರಿಶೀಲಿಸಲು ತೆರಳಿದ್ದಾಗ ಇ.ಓ. ಮೇಲೆ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು ಏಕವಚನದಲ್ಲಿ ನಿಂದಿಸಿ, ಹಲ್ಲೆಗೆ ಯತ್ನ ನಡೆಸಿದ್ದಾರೆ ಎಂದು ಇ.ಓ ಆರೋಪ ಮಾಡಿದ್ದಾರೆ.

ಗ್ರಾಮಸ್ಥರಾದ ಶಿವಕರ್ ಶೆಟ್ಟಿ, ಸುರೇಶ್, ಮತ್ತು ಉಮೇಶ್ ಎಂಬುವವರು ಹಲ್ಲೆ ನಡೆಸಲು‌ ಮುಂದಾಗಿ ಏಕಚವನದಲ್ಲಿ ನಿಂದಿಸಿರುವ ಬಗ್ಗೆ ಹರಿಹರಪುರ ಪೊಲೀಸ್ ಠಾಣೆಗೆ ಇ ಓ ನವೀನ್ ಕುಮಾರ್ ದೂರು ನೀಡಿದ್ದಾರೆ. ದೂರು ಸಂಬಂಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.