ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸತತ 3ನೇ ವರ್ಷ ‘ಗರಿಷ್ಟ ರನ್ ಸ್ಕೋರರ್’ ಎನಿಸಿದ ಕೊಹ್ಲಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಾವೊಬ್ಬ ರನ್ ಮಷಿನ್ ಎಂಬುದನ್ನು ಮತ್ತೊಮ್ಮ ಸಾಬೀತು ಪಡಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಸತತ ಮೂರನೇ ವರ್ಷ ಗರಿಷ್ಟ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. 2018ನೇ ಸಾಲಿನಲ್ಲಿ ವಿರಾಟ್ ಕೊಹ್ಲಿ  ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 2653 ರನ್ ದಾಖಲಿಸಿದ್ದಾರೆ.

2016 ಹಾಗೂ 2017ರಲ್ಲಿಯೂ ಸಹ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಟ ರನ್ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2016ರಲ್ಲಿ ವಿರಾಟ್ ಕೊಹ್ಲಿ 2995 ರನ್ ಹಾಗೂ 2017ರಲ್ಲಿ 2818 ರನ್ ಗಳಿಸಿದ್ದರು.

Leave a Reply