ದೇಶದಲ್ಲಿ ಸಂವಿಧಾನ ಉಳಿಯಬೇಕೆಂದ್ರೆ ಬಿಜೆಪಿ ವಿರುದ್ದ ಮತ ಹಾಕಿ – ಕೋಳಿವಾಡ

ದೇಶದಲ್ಲಿ ಸಂವಿಧಾನ ಉಳಿಯಬೇಕೆಂದ್ರೆ ಬಿಜೆಪಿ ವಿರುದ್ದ ಮತ ಹಾಕಿ ಎಂದು ಕೈ ಅಭ್ಯರ್ಥಿ ಕೆ ಬಿ ಕೋಳಿವಾಡ ಹೇಳಿದ್ದಾರೆ.

ರಾಣೆಬೆನ್ನೂರಿನಲ್ಲಿ ಮತಚಲಾವಣೆಯ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ  ಕೆ ಬಿ ಕೋಳಿವಾಡ, ಇಂದು ನನ್ನ ಹುಟ್ಟೂರು ಗುಡಗೂರಲ್ಲಿ ಕುಟುಂಬ ಸಮೇತ ಮತದಾನ ಮಾಡಿದ್ದೇನೆ. ಈ ದೇಶದಲ್ಲಿ ಸಂವಿಧಾನದ ರಕ್ಷಣೆಗಾಗಿ ದೆಶದಲ್ಲಿ ಬಿಜೆಪಿ ವಿರುದ್ದ ಮತ ಚಲಾಯಿಸಿ. ಬಿಜೆಪಿ ಎಕ ಚಕ್ರಾದ್ಯಪತಿ ಕೆಲಸವನ್ನ ಮಾಡುತ್ತಿದೆ. ಬಡವರು ಬಡವರಾಗಿದ್ದಾರೆ, ಶ್ರಿಮಂತರು ಶ್ರಿಮಂತರ ಆಗಿದ್ದಾರೆ. ಕಾಂಗ್ರೆಸ್ ಗೆ ಮತ ಹಾಕಿ ಎಂದು ಮತದಾರರಿಗೆ ಕಿವಿ ಮಾತು ಹೇಳಿದರು.

ಕುಟುಂಬ ಸಮೇತ ಮತದಾನ ಮಾಡಿದ ಕಾಂಗ್ರೇಸ್ ಅಭ್ಯರ್ಥಿ, ಮೊಮ್ಮಕ್ಕಳು ಆಸೆ ಪಡ್ತಾರೆ ಅವರಿಗೂ ಇಂಕ್ ನ್ನ ಹಚ್ಚಿ ಎಂದು ಮತದಾನ ಕೇಂದ್ರದಲ್ಲಿ ಕೋಳಿವಾಡ ಮೊಮ್ಮಕ್ಕಳಿಗೂ ಶಾಹಿ ಹಾಕಿಸಿದರು. ಈ ವೇಳೆ ಕಾಂಗ್ರಸ್ ಅಭಿಮಾನಿಯೊಬ್ಬರು ಮತ ಚಲಾವಣೆಯ ಬಳಿಕ ನಿಂಬೆ ಹಣ್ಣಿನಿಂದ ದೃಷ್ಠಿ ತೆಗೆದರು. ಗೆಲುವು ನಿಮ್ಮದೆ ಎಂದ ಕಾಂಗ್ರೆಸ್ ಕಾರ್ಯಕರ್ತ ಕೈಗೆ ಬಲ ತುಂಬಿದರು.

 

Leave a Reply

Your email address will not be published.