WATCH : ಮೋದಿ ಹುಟ್ಟುಹಬ್ಬಕ್ಕೆ ವ್ಯಂಗ್ಯ – ವಿಡಂಬನೆಯ ಉಡುಗೊರೆ

ಸಾಮಾಜಿಕ ಜಾಲಾತಾಣಗಳಲ್ಲಿ ಪ್ರಧಾನಿ ಮೋದಿ ಹಾಗೂ ಅವರು ಕೈಗೊಂಡ ನೋಟ್ ಬ್ಯಾನ್ ನಿರ್ಧಾರದ ಮೇಲೆ ನಿರ್ಮಿಸಿರುವ ಗ್ರೂಪ್ ಸಾಂಗ್ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಹಾಡಿನಲ್ಲಿ ಏಳು ಮಂದಿ ಸ್ಟೇಜ್ ಮೇಲೆ ನಿಂತು ಹಾಡೊಂದನ್ನು ಹಾಡಿದ್ದು, ಇದು ಪ್ರಧಾನಿ ಮೋದಿಯ ವಿದೇಶ ಪ್ರವಾಸದ ಕುರಿತಾದ ಪ್ರಸ್ತಾಪದೊಂದಿಗೆ  ಆರಂಭವಾಗುತ್ತದೆ.’ಈಸ್ಟ್ ಇಂಡಿಯಾ ಕಾಮಿಡಿ’ ಎಂಬ ಚಾನೆಲ್ ಮಾರ್ಚ್ 2ರಂದು ಈ ವಿಡಿಯೊವನ್ನು ಯೂ ಟ್ಯೂಬ್’ಗೆ ಅಪ್ಲೋಡ್ ಮಾಡಿದ್ದು, ವಿಡಿಯೋದಲ್ಲಿ ಹಾಡು ಕೇಳುತ್ತಿರುವ ಪ್ರೇಕ್ಷಕರೂ ಆನಂದಿಸುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಇದು ರಾಜಕೀಯ ವಿಡಂಬನೆಯಾಗಿದ್ದು, ವಾಸ್ತವ ಸಂಗತಿಗಳೊಂದಿಗೆ ವ್ಯಂಗ್ಯದ ನೆಪ ನೀಡಲಾಗಿದೆ.

http://

Comments are closed.