ಕೆಟ್ಟಿರೋದು ಜನರಲ್ಲ ನಾವು ರಾಜಕಾರಣಿಗಳು ಕೆಟ್ಟಿರೋದು – ಸಿದ್ದರಾಮಯ್ಯ ಖಡಕ್ ಭಾಷಣ

ಜನ್ರು ಕೆಟ್ಟಿದ್ದಾರೆ ಅಂತಾ ನಾನು ಹೇಳೋಲ್ಲಾ ಎಟಿ ರಾಮಸ್ವಾಮಿಯವರೇ ನಾವೇ ಜನ್ರನ್ನ ಕೆಡಿಸಿರೋದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ದೊಡ್ಡಹಳ್ಳಿಯಲ್ಲಿ ಖಡಕ್ ಭಾಷಣ ಮಾಡಿದ್ದಾರೆ.

ಈಗಲೇ ಎಲ್ಲಾ ಪಕ್ಷಗಳೂ ತೀರ್ಮಾನ ಮಾಡಲೀ ನಾವು ಮತದಾರರಿಗೆ ಯಾರಿಗೂ ಓಟು ಹಾಕುವಾಗ ಹಣ ಕೊಡೊಲ್ಲಾ ಅಂತಾ ಹೇಳಲಿ. ಹೇಳ್ತಾರಾ ಈಗಲೇ ತೀರ್ಮಾನ ಮಾಡಲೀ ಎಂದು ಸವಾಲ್. ನಾನು ಹಿಂದೆ ಚುನಾವಣೆಗೆ ನಿಂತಿದ್ದಾಗ 63 ಸಾವಿರ ಮಾತ್ರ ಖರ್ಚಾಯ್ತು. ಆಗ ಜನ್ರು ಹಣ ಕೊಟ್ಟರು ನನಗೆ ಒಂದು ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಯ್ತು. ಆಗ ನಾನು ಚುನಾವಣೆಗೆ ಖರ್ಚು ಮಾಡಿ ಒಂದು ಲಕ್ಷಕ್ಕೂ ಹೆಚ್ಚು ಹಣ ಉಳೀತು. ಆ ಜನ್ರ ಹಣದಿಂದ ಮೈಸೂರು ಮರ್ಚೆಂಟ್ಸ್ ಬ್ಯಾಂಕ್ ನಿಂದ ಸಾಲ ಪಡೆದು ಜನ್ರ ಹಣದಿಂದ ನಾನು ಮನೆ ಕಟ್ಟಿದೆ ಎಂದರು.

ತಮ್ಮ ಹಳೆಯ ನೆನೆಪನ್ನು ನೆನೆದ ಸಿದ್ದರಾಮಯ್ಯ, ರಿಯಲ್ ಎಸ್ಟೇಟ್, ಅಕ್ರಮ ಗಣಿಗಾರಿಕೆ ಬಂದಾಗಿನಿಂದ ವ್ಯವಸ್ಥೆ ಕೆಟ್ಟಿದೆ. ಇಡೀ ದೇಶಾದ್ಯಂತ ಎಲ್ಲಾ ರಾಜಕೀಯ ಪಕ್ಷಗಳು ತೀರ್ಮಾನ ಮಾಡಲಿ ನಾವು ಮತದಾರರಿಗೆ ಹಣ ಕೊಡಲ್ಲಾ ಅಂತಾ. ಜನ್ರು ಕೆಟ್ಟಿದ್ದಾರೆ ಅಂತಾ ನಾವು ಹೇಳೋಕೆ ಆಗಲ್ಲಾ ನಾವು ರಾಜಕಾರಣಿಗಳು ಮೊದಲು ತೀರ್ಮಾನ ಮಾಡ್ಬೇಕು. ಈಗ ಎಷ್ಟು ಹಣ ಚುನಾವಣೆಗೆ ಖರ್ಚು ಮಾಡ್ತಿದ್ದಾರೆ ಅಂತಾ ಹೇಳೊಕೆ ಆಗೊಲ್ಲಾ ಕಾನೂನು ತೊಡಕಿದೆ ಎಂದಿದ್ದಾರೆ.

ಭಾಷಣದ ವೇಳೆ ಹೌದೋ ಹುಲಿಯಾ ಎಂದ ಅಭಿಮಾನಿಗೆ ಸಿದ್ದರಾಮಯ್ಯ ನಾನು ಹುಲಿನೂ ಅಲ್ಲಾ ಸಿಂಹನೂ ಅಲ್ಲಾ ನನ್ನ ಹೆಸರು ಸಿದ್ದರಾಮಯ್ಯ ಅಂತಾ. ಯಾರೋ ಪಾಪ ನಾನು ಕಾಗವಾಡದಲ್ಲಿ ಭಾಷಣ ಮಾಡಿದಾಗ ಹೇಳಿದ. ನನ್ನ ಎಲ್ಲಾ ಜಾತಿ ಎಲ್ಲಾ ಧರ್ಮದವರೂ ನನ್ನನ್ನ ಪ್ರೀತಿಸುತ್ತಾರೆ. ನಾನು ಅಧಿಕಾರದಲ್ಲಿ ಇರಲೀ ಅಧಿಕಾರದಲ್ಲಿ ಇಲ್ಲದಿರಲೀ ಯಾರಿಗೂ ಅಗೌರವವಾಗಿ ನಡೆದುಕೊಳ್ಳಲ್ಲಾ. ಮುಂದೆನೂ ನಡೆದುಕೊಳ್ಳೊಲ್ಲಾ. ನಾನು ಯಾವ ವರ್ಗಾವಣೆ ಅಥವಾ ಯಾವ ಕೆಲಸಕ್ಕೂ ಕೂಡ ಯಾರಿಂದಲೂ ಒಂದು ಪೈಸೆ ಹಣ ಪಡೆದಿಲ್ಲಾ. ಆದ್ರಿಂದ ನನ್ನನ್ನ ಜನ್ರು ಪ್ರೀತಿಸುತ್ತಾರೆ ಎಂದರು.

ಈಶ್ವರಪ್ಪ ದೊಡ್ಡಕೊಪ್ಪಲು ಕಾರ್ಯಕ್ರಮಕ್ಕೆ ಬಂದಿದ್ದಾ. ನನ್ ಕಾರಿನಲ್ಲೇ ಕೂರಿಸಿಕೊಂಡು ಹೋದೆ ಆಗ ಈಶ್ವರಪ್ಪ ಹೇಳಿದಾ ಏನಣ್ಣಾ ಜನ್ರಿಗೆ ಏನು ಮೋಡಿ ಮಾಡಿದ್ಯಾ ಇಷ್ಟೊಂದು ಜನ್ರು ಬರ್ತಾರೆ ಅಂದಾ. ನಾನು ಹೇಳಿದೆ ಪ್ರೀತಿಯಿಂದ ಇದ್ರೆ ಜನ್ರು ಬರ್ತಾರೆ ಅಂತಾ. ಕೆಲವರು ಜನ್ರನ್ನ ಓಲೈಸಿಕೊಳ್ಳಲು ಹೋಮ ಹವನ ಮಾಡಿಸುತ್ತಾರೆ ಆಗಾದ್ರೆ ಜನ ಬರ್ತಾರಾ. ಈ ಊರಿಗೆ ನೀರಾವರಿ ಯೋಜನೆಯನ್ನು ಈ ಹಿಂದೆ ನಮ್ಮ ಸರ್ಕಾರದಲ್ಲಿ ರೂಪಿಸಿದ್ದೆ. ಅವನ್ಯಾವೋನು ನಾರಾಯಣ್ ಗೌಡ ನಿಲ್ಲಿಸಿದ್ದಾನೆ ನಾನು ಕೂಡ ನೀರಾವರಿ ಇಲಾಖೆ ಕಾರ್ಯದರ್ಶಿಗೆ ಮಾತಾಡ್ತೀನಿ ಎಟಿ,ರಾಮಸ್ವಾಮಿಯವರೇ ನೀವು ಮಾತಾಡಿ ಎಂದ ಸಿದ್ದರಾಮಯ್ಯ ಕೇಳಿದರು.

ಜನಕೆಟ್ಟಿದ್ದಾರೆ ಅಂತ ಹೇಳ್ಬೇಡಿ ಜನಕೆಟ್ಟಿಲ್ಲ. ಕೆಟ್ಟಿರೋದು ಜನರಲ್ಲ ನಾವು ರಾಜಕಾರಣಿಗಳು ಕೆಟ್ಟಿರೋದು!! ಚುನಾವಣೆಯಲ್ಲಿ ನಾವು ಯಾವಾಗ ಹಣ ಕೊಡೋದು ನಿಲ್ಲಿಸ್ತೇವು ಆಗ ಎಲ್ಲಾ ಸರಿ ಹೋಗುತ್ತೆ. ಇದು ಕೇವಲ ಒಂದು ಪಕ್ಷಕ್ಕೆ ಸೀಮಿತ ಅಲ್ಲ ಎಲ್ಲಾಪಕ್ಷದ ನಾಯಕರಿಗೂ ಅನ್ವಯವಾಗುತ್ತದೆ. ರಿಯಲ್ ಎಸ್ಟೇಟ್ ಮತ್ತು ಗಣಿಲೂಟಿ ಶುರುವಾದಾಗಲೇ ಚುನಾವಣೆ ನೀತಿ ಹದಗೆಟ್ಟಿದ್ದು. ಬಿಗಿಯಾದ ಕಾನೂನು ತರಬೇಕು ಎಲ್ಲಾ ಪಕ್ಷದ ನಾಯಕರು ಈ ಬಗ್ಗೆ ಯೋಚಿಸಬೇಕು. ರಾಜಕಾರಣಿ ಗಳು ಹಣ ಕೊಡೋದ್ರಿಂದ ಜನ ತಗೋಳ್ತಾರೆ ಇದನ್ನ ನಿಲ್ಲಿಸಬೇಕು. ಉಪಚುನಾವಣೆಯಲ್ಲಿ ಐದು ಕ್ಷೇತ್ರದಲ್ಲಿ 80ರಿಂದ 100 ಕೋಟಿ ಖರ್ಚಾಗಿದೆ ಎಂದರು.

ಇನ್ನೂ ನಾನು ಸಿಎಂ ಆಗಿದ್ದಾಗ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತಂದೆ. ಹೇಯ್ ಎ,ಮಂಜು ನೀನು ನಿಮ್ ಬಿಜೆಪಿ ಮೀಟಿಂಗ್ ನಲ್ಲಿ ಇದನ್ನು ಹೇಳ್ಬೇಕು ಎಂದು ತಾಕೀತು. ಎಂಜಲ ಎಲೆ ಮೇಲೆ ಉರುಳಿದ್ರೆ ಸಮಸ್ಯೆ ನಿವಾರಣೆಯಾಗುತ್ತೆ ಅಂದ್ರೆ ನಿವಾರಣೆಯಾಗುತ್ತಾ?? ಈ‌ಗ ಬಿಜೆಪಿಯವರು ಮೌಢ್ಯ ನಿಷೇಧ ಮಾಡ್ತಿದ್ದಾರೆ. ಈ ಕಾಯ್ದೆ ಜಾರಿಗೆ ತರುವಾಗ ಎ,ಮಂಜು ಕೂಡ ಕ್ಯಾಬಿನೆಟ್ ನಲ್ಲಿದ್ದ. ಈಗಲೂ ನಮ್ ಪರವಾಗಿ ಮಾತನಾಡ್ಬೇಕು ಅವನು. ನಾನು ಸಿಎಂ ಆಗಿದ್ದಾಗ ಪ್ರಚಾರ ಸಿಗಲಿಲ್ಲಾ. ನಾನು ಸಿಎಂ ಆಗಿದ್ದಾಗ ಮಾಡಿದ ಕೆಲಸ ಯಾರೂ ಮಾಡಿಲ್ಲಾ ಅಷ್ಟು ಕೆಲಸ ಮಾಡಿದ್ದೀನಿ. ನಾನು ಜಂಬದಿಂದ ಈ ವಿಷಯ ಹೇಳ್ತಿಲ್ಲಾ. ನಾನು ಮತ್ತೆ ಐದು ವರ್ಷ ಸಿಎಂ ಆಗಿದ್ರೆ ಕರ್ನಾಟಕವನ್ನ ಸುವರ್ಣ ಯುಗ ಮಾಡ್ತಿದ್ದೆ. ಆದ್ರೆ ಅಸೂಯೆಯಿಂದ ನಮ್ಮ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲಿಲ್ಲಾ ಎಂದರು.