ಚಳಿಗಾಲದಲ್ಲಿ ತುಟಿಯ ಆರೈಕೆ ಹೇಗಿರಬೇಕು..? ಡ್ರೈ ಲಿಪ್ ಗಾಗಿ ಇಲ್ಲಿದೆ ಪರಿಹಾರ..

ಚಳಿಗಾಲ ಬಂದ್ರೆ ಸಾಕು ತ್ವಚೆ ಡ್ರೈ ಆಗಲು ಪ್ರಾರಂಭವಾಗುತ್ತದೆ. ಮುಖದ ಆಕರ್ಷಣೆ ಮಾತ್ರವಲ್ಲದೇ ತುಟಿಗಳು ಕೂಡ ಕಾಂತಿ ಕಳೆದುಕೊಂಡು ಬಿರುಕು ಬಿಡುತ್ತದೆ. ಹೀಗಾದರೆ ಚಳಿಗಾಲಕ್ಕೆ ತ್ವಚೆಯ ಆರೈಕೆ ಹೇಗೆ ಮಾಡಬೇಕು..? ಅದರಲ್ಲೂ ತುಟಿಗಳು ಬಿರುಕು ಬಿಡುವುದನ್ನ ತಡೆಯುವುದು ಹೇಗೆ..? ಅನ್ನೋರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್..

ಲೋಳೇರಸ : ಲೋಳೆರಸ ಪ್ರತಿನಿತ್ಯ ತುಟಿಗಳಿಗೆ ಹಾಗೂ ಮುಖಕ್ಕೆ ಹಚ್ಚುವುದರಿಂದ ತ್ವಚೆ ಕಾಂತಿಯುತವಾಗಿ ಕೂಡಿರುತ್ತದೆ.

ಹಾಲಿನ ಕೆನೆ : ಹಾಲಿನ ಕೆನೆ ಹಚ್ಚುವುದರಿಂದ ತುಟಿಗಳು ಒಣಗದೆ ಅಂದವಾಗಿ, ಕೋಮಲವಾಗಿ ಕಾಣಿಸುತ್ತದೆ.

ಜೇನು : ತ್ವಚೆ ಆಕರ್ಷಕವಾಗಿ ಕಾಣಲು ಜೇನು ಉತ್ತಮ ಪರಿಹಾರವಾಗಿದೆ. ಇದನ್ನ ತುಟಿಗಳಿಗೆ ಬಳಕೆ ಮಾಡುವುದರಿಂದ ತುಟಿ ಒಡೆಯದೆ, ಸುಕೋಮಲವಾಗಿರುತ್ತದೆ.

ಪಪ್ಪಾಯ : ಪಪ್ಪಾಯ ಪೇಸ್ಟ್ ಹಚ್ಚಿ ಮಸಾಜ್ ಮಾಡುವುದರಿಂದ ತುಟಿ ಒಣಗುವುದನ್ನ ತಡೆಗಟ್ಟಬಹುದು. ಮುಖಕ್ಕೂ ಇದರಿಂದ ಮಸಾಜ್  ಮಾಡಿಕೊಳ್ಳಬಹುದು. ತ್ವಚೆ ಕಾಂತಿಯುತವಾಗಿರಿಸಲು ಇದು ಸಹಕಾರಿಯಾಗಿದೆ.

ವಿಟಮಿನ್ ಕೊರತೆ ನೀಗಿಸಿಕೊಳ್ಳಿ : ಕ್ಯಾರೆಟ್ ನಂತಹ ತರಕಾರಿ ಹಣ್ಣು ಎಂಥೆಚ್ಚವಾಗಿ ಸೇವಿಸುವುದರಿಂದ ಚರ್ಮ ಒಣಗುವುದು, ವಯಸ್ಸಾದಂತೆ ಕಾಣುವುದನ್ನ ತಪ್ಪಿಸಬಹುದು.

ಕೊಬ್ಬರಿ ಎಣ್ಣೆ : ಕೊಬ್ಬರಿ ಎಣ್ಣೆ ಒಂದು ನೈಸರ್ಕಿಕ ಪರಿಹಾರವಾಗಿದ್ದು, ತುಟಿ ಹಾಗೂ ಮುಖಕ್ಕೆ ಹಚ್ಚುವುದರಿಂದ ತ್ವಚೆ ಮೃದುವಾಗಿರುತ್ತದೆ.

ಸೌತೇಕಾಯಿ : ಹೆಚ್ಚಿದ ಸೌತೇಕಾಯಿ ತುಟಿಯ ಮೇಲೆ ಇಟ್ಟುಕೊಳ್ಳಿ. ಇದು ತಂಪಾದ ಅನುಭವ ನೀಡುತ್ತದೆ. ಇದರಿಂದ ತುಟಿ ತೇವಾಂಶದಿಂದ ಕೂಡಿರುತ್ತದೆ.

ಮೇಕಪ್ ಅವಾಯಿಡ್ ಮಾಡಿಕೊಳ್ಳಿ : ರಾಸಾಯನಿಕ ಅಂಶವಿರುವ ಮೇಕಪ್ ಸಾಮಾಗ್ರಿಗಳು ತುಟಿಗೆ ಹಾಣಿಕಾರಕ. ಜೊತೆಗೆ ಇವುಗಳ ಬಳಕೆ ಕೂಡ ಮಿತಿಯಲ್ಲಿದ್ದರೆ ಒಳ್ಳೆಯದು.

ಚಳಿಗಾಲಕ್ಕೆ ತ್ವಚೆ ಹಾಗೂ ತುಟಿ ಬಿರುಕು ಬಿಡುವುದು ಸಾಮಾನ್ಯವಾಗಿರುತ್ತದೆ. ಇದನ್ನ ನಿರ್ಲಕ್ಷಿಸಿದರೆ ರಕ್ತ ಬರುವ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ಸೂಕ್ತ ಕ್ರೀಮ್ ಬಳಕೆ ಮಾಡಿ ಆದರೆ ಬೀ ಕೇರ್ ಫುಲ್.