ಶುದ್ಧ ಗಾಳಿಗಾಗಿ ಯಾವೆಲ್ಲಾ ಗಿಡ ಬೆಳೆಸಬೇಕು..? ಇಲ್ಲಿದೆ ಮಾಹಿತಿ…

ಇತ್ತೀಚೆಗೆ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಪ್ರತಿನಿತ್ಯ ಮೂಗಿಗೆ ಮಾಸ್ಕ್ ಹಾಕಿಕೊಂಡೆ ಜನ ಓಡಾಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇದಕ್ಕೆ ಪರಿಹಾರ ಏನು..? ಜೀವನ ಪರಿಯಂತ ಮಾಸ್ಕ್ ಹಾಕಿಕೊಂಡೇ ಇರಬೇಕಾ..? ಎಂದು ಪ್ರಶ್ನೆ ಮಾಡೋರಿಗೆ ಇಲ್ಲಿವೆ ಕೆಲ ಗಿಡಗಳನ್ನ ಬೆಳಸಿ ಶುದ್ಧಗಾಳಿ ಪಡೆಯುವ ವಿಧಾನ. ಹಾಗಾದ್ರೆ ಯಾವೆಲ್ಲಾ ಗಿಡ ಬೆಳೆಯಬೇಕು..? ಯಾವೆಲ್ಲಾ ಗಿಡ ನಮ್ಮ ಸುತ್ತಲು ಇರುವುದರಿಂದ ಶುದ್ಧ ಗಾಳಿ ಸಿಗುತ್ತದೆ..? ಅದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಸ್ಪೈಡರ್ ಪ್ಲಾಂಟ್ – ಸ್ಪೈಡರ್ ಪ್ಲಾಂಟ್  ನೋಡಲು ಸ್ಪೈಡರ್ ನಂತೆ ಕಾಣುತ್ತದೆ. ಆಫೀಸ್ ಟೇಬಲ್, ಮನೆ, ಶಾಲೆಯಲ್ಲೂ ಇದನ್ನ ಬೆಳೆಯಬಹುದು. ಒಣಗಿದ ಎಲೆಗಳನ್ನು ಆಗಾಗ ತೆಗೆಯುವದರಿಂದ ಗಿಡ ಹೆಲ್ದಿಯಾಗಿರುತ್ತದೆ. ಕಡಿಮೆ ಬೆಳಕಿನಲ್ಲೇ ಈ ಗಿಡ ಬೆಳೆಯುತ್ತದೆ. 15 ದಿನಕ್ಕೊಂದು ಬಾರಿ ಸೂರ್ಯನ ಬೆಳಕಿಗೆ ಇಟ್ಟರೆ ಸಾಕು.

ಲೊಳೆರಸ – ತ್ವಚೆಯ , ಕೂದಲು, ಆರೋಗ್ಯ ಸಮಸ್ಯೆಗೆ ಬಳಸಲಾಗುತ್ತದೆ. ಇದರಿಂದ ಶುದ್ಧ ಗಾಳಿ ದೊರೆಯುತ್ತದೆ. ಮನೆಯಲ್ಲಿ 2-4 ದಿನಕ್ಕೊಂದು ಬಾರಿ ನೀರು ಹಾಕಿದರೆ ಸಾಕು ಲೊಳೆರಸ ಗಿಡವನ್ನ ಬೆಳಸಬಹುದು.

ಶತಾವರಿ – ಅನೇಕ ಮದ್ದುಗಳನ್ನು ತಯಾರಿಸಲು  ಶತಾವರಿ ಗಿಡವನ್ನು ಬೆಳೆಸಲಾಗುತ್ತದೆ. ಇದು ಗಾಯ ಶುದ್ದೀಕರಿಸುತ್ತದೆ. ಬ್ಯಾಕ್ಟೀರಿಯಾ ಸೋಂಕು ತರುವ ಹುಳುಗಳನ್ನು ಕೊಲ್ಲುತ್ತೆ. ಗಾಳಿಯನ್ನು ಶುದ್ಧವಾಗಿರಿಸುತ್ತದೆ.

ತುಳಸಿ– ಮನೆಯ ಪರಿಸರದ ಗಾಳಿಯನ್ನು ಶುದ್ಧವಾಗಿರಿಸುತ್ತದೆ. ತುಳಸಿ ಇದ್ದರೆ ಸೊಳ್ಳೆ ಕಾಟ ಇರುವುದಿಲ್ಲ. ಮನೆಯ ವಾತಾವರಣ ವಿಸ್ತಾರವಾಗಿದ್ದರೆ ತುಳಸಿ ಅಲ್ಲಿಡಬಹುದು.

ಜೆರ್ಬಿರಾ ಗಿಡ – ಇದನ್ನ ತುಂಬಾ ನೆರಳಿಗಿಂತ ಸ್ವಲ್ಪ ಬಿಸಿಲಿರುವ ಕಡೆಗೆ ಇಟ್ಟರೆ ಸಾಕಾಗುತ್ತದೆ.

ಸ್ನೇಕ್ ಪ್ಲಾಂಟ್ – ಇದಿದ್ದರೆ ಹಾವು ಕೂಡ ಬರುವುದಿಲ್ಲ. ಕಡಿಮೆ ಬೆಳಕು, ಬೆಡ್ ರೂಮ್, ಬಾತ್ ರೂಮ್ ನಲ್ಲೂ ಇಡಬಹುದು.

ಸೇವಂತಿಗೆ ಹೂ – ಚಿಕ್ಕ ಹೂ ಕುಂಡಕ್ಕೆ ಇದನ್ನ ಇಟ್ಟರೆ ಸಾಕು ಸಿಗರೇಟ್ ಧೂಳು ಹೊರದೂಡಿ ಮನೆಯಲ್ಲಿ ಶುದ್ಧ ಗಾಳಿಯನ್ನು ತರುತ್ತೆ.

ಡ್ರ್ಯಾಗನ್ ಗಿಡ – ಡ್ರ್ಯಾಗನ್ ಗಿಡದಿಂದ ಪೇಂಟ್ ವಾಸನೆ, ವಾಹನದ ಹೊಗೆ, ಇನ್ನಿತರ ಕೆಟ್ಟ ಗಾಳಿಯಿಂದ ಮುಕ್ತಿ ಪಡೆಯಬಹುದು. ಇದಕ್ಕೆ ಹೆಚ್ಚಿನ ಕಾಳಜಿ ಅಗತ್ಯವಿಲ್ಲ.

ಒಟ್ಟಿನಲ್ಲಿ ಶುದ್ಧ ಗಾಳಿಯನ್ನು ಸೇವಸಬೇಕು ಎನ್ನುವ ಮಂದಿಗೆ ಇಂತೆಲ್ಲಾ ಗಿಡಗಳು ಶುದ್ಧಗಾಳಿಯನ್ನು ಒದಗಿಸಿ ಆರೋಗ್ಯವನ್ನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.