ಐದು ವರ್ಷಗಳ ಹಿಂದೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೊಟ್ಟ ಭರವಸೆಗಳೇನಾದವು…?

ಫೆಬ್ರವರಿ 8ಕ್ಕೆ ವಿಧಾನ ಸಭಾ ಚುನಾವಣೆಯ ದಿನ ಸಮೀಪಿಸುತ್ತಿರುವಂತೆ ಕಣದಲ್ಲಿರುವ ಅಭ್ಯರ್ಥಿಗಳ ಪ್ರಚಾರದ ಅಬ್ಬರ ಜೋರಾಗಿದೆ. ದೆಹಲಿಯ ಆರನೇ ವಿಧಾನಸಭಾ ಚುನಾವಣೆ ಇದಾಗಿದ್ದು ಫೆಬ್ರವರಿ 8ರಂದು ಏಕ ಹಂತದಲ್ಲಿ ಚುನಾವಣೆ ನಡೆಯಲಿದೆ. ಫೆ. 11ರಂದು ಮತ ಎಣಿಕೆ ಆಗಲಿದೆ.

ವಿಧಾನಸಭೆ ಚುನಾವಣೆ ಗೆಲ್ಲಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಮತ್ತು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಈ ಮಧ್ಯೆಯೇ ನವದೆಹಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್ರನ್ನು ಸೋಲಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಹಲವರು ಯತ್ನಿಸುತ್ತಿದ್ಧಾರೆ. ಹಾಗಾಗಿಯೇ ಕೇಜ್ರಿವಾಲ್ ವಿರುದ್ಧ ಚಕ್ ದೇ ಇಂಡಿಯಾ ಖ್ಯಾತಿಯ ನಟ ಸೇರಿದಂತೆ 92 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.

ನವದೆಹಲಿಯ ಕ್ಷೇತ್ರದಿಂದ ಸಿಎಂ ಅರವಿಂದ್ ಕೇಜ್ರಿವಾಲ್ ಎದರು ‘ಚಕ್ ದೇ ಇಂಡಿಯಾ’ ಸಿನಿಮಾ ಖ್ಯಾತಿಯ ಶೈಲೇಂದ್ರ ಸಿಂಗ್ ಶಲ್ಲಿ ಕಣಕ್ಕಿಳಿದಿದ್ದಾರೆ. ಈಗ ಅಂಜಾನ್ ಆದ್ಮಿ ಪಾರ್ಟಿಯ ಸದಸ್ಯ ಎಂದು ಹೇಳಿಕೊಂಡು ಕಣದಲ್ಲಿದ್ದಾರೆ. ಇವರು ಈ ಹಿಂದೆಯೇ 2009ರಲ್ಲಿ ಬಸ್ವೊಂದರಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಪ್ರಯಾಣಿಕನ್ನು ರಕ್ಷಿಸುವ ಮೂಲಕ ಸುದ್ದಿಯಾಗಿದ್ದರು.

ಅಂದಹಾಗೆ ಈ ಬಾರಿ ಅರವಿಂದ್ ಕೇಜ್ರಿವಾಲ್ ಪ್ರಣಾಳಿಕೆ ಬಿಡುಗಡೆ ಮಾಡಿ ಅದನ್ನು ಈಡೇರಿಸುವ ಭರವಸೆ ನೀಡಿದ್ದು ಮತದಾರರನ್ನು ಸೆಳೆಯುವ ತಂತ್ರ ಹೂಡಿದ್ದಾರೆ. ಇದಕ್ಕಿಂತ ಮುಖ್ಯವಾದ ವಿಷಯ ಎಂದರೆ ಪ್ರಣಾಳಿಕೆ ಜೊತೆಗೆ ‘ಗ್ಯಾರೆಂಟಿ ಕಾರ್ಡ್’ ಬಿಡುಗಡೆ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಹೌದು… ಒಂದು ವೇಳೆ ಕೇಜ್ರಿವಾಲ್ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಮಹಿಳೆಯರ ಸುರಕ್ಷತೆಗೆ ಮೊಹಲ್ಲಾ ಮಾರ್ಷಲ್ ಗಳು ನೇಮಕ, ಪ್ರತಿ ವರ್ಷ ದೆಹಲಿಯನ್ನು ಕಾಡುವ ಮಾಲಿನ್ಯವನ್ನು ಶೆ 30 ರಷ್ಟು ತಗ್ಗಿಸುವುದು, 24 ತಾಸು ಕುಡಿಯುವ ನೀರು ಸರಬರಾಜು ಸೇರಿದಂತೆ ಖಂಡಿತವಾಗಿಯೂ ಈಡೇರಿಸುವ 10 ಭರವಸೆಗಳನ್ನು ಒಳಗೊಂಡ ಕಾರ್ಡ್ ವೊಂದನ್ನು ಕೇಜ್ರಿವಾಲ್ ಬಿಡುಗಡೆ ಮಾಡಿದ್ದಾರೆ. ಹೀಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ 5 ವರ್ಷಗಳ ಹಿಂದೆ ನಡೆದ ಚುನಾವಣೆ ವೇಳೆ ಭರವಸೆಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು.

ಆದರೆ 5 ವರ್ಷಗಳ ಹಿಂದೆ ಅರವಿಂದ್ ಕೇಜ್ರಿವಾಲ್ ನೀಡದ ಭರವಸೆಗಳು ಎಷ್ಟು ಪೂರ್ಣಗೊಂಡಿವೆ ಅನ್ನೋದನ್ನ ನಾವು ಇಲ್ಲಿ ಮೆಲುಕು ಹಾಕಲೇಬೇಕು.

2015ರಲ್ಲಿ ನಡೆದ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಬರೋಬ್ಬರಿ 67 ಸ್ಥಾನಗಳನ್ನು ಗೆದ್ದು ಬಹುತೇಕ ಕ್ಲೀನ್ ಸ್ವೀಪ್ ಮಾಡಿತ್ತು. ಅದಕ್ಕೂ ಹಿಂದೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಬಿಜೆಪಿ 31, ಆಪ್ ಪಕ್ಷ 28 ಹಾಗೂ ಕಾಂಗ್ರೆಸ್ 8 ಸ್ಥಾನ ಗಳಿಸಿದ್ದವು. ಬಿಜೆಪಿ ಸರ್ಕಾರ ರಚಿಸಲು ಮುಂದೆ ಬರಲಿಲ್ಲ. ರಾಷ್ಟ್ರಪತಿ ಆಳ್ವಿಕೆ ಸನ್ನಿಹಿತ ಎಂದನಿಸುತ್ತಿರುವಂತೆಯೇ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಆಮ್ ಆದ್ಮಿ ಅಧಿಕಾರ ರಚಿಸಿತ್ತು. ಕೆಲವೇ ತಿಂಗಳ ಹಿಂದಷ್ಟೇ ಜನ್ಮತಾಳಿದ್ದ ಆಮ್ ಆದ್ಮಿ ಪಕ್ಷ ಒಂದೇ ವರ್ಷದ ಅಂತರದಲ್ಲಿ ರಾಜ್ಯವೊಂದರ ಅಧಿಕಾರ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು. ಅರವಿಂದ್ ಕೇಜ್ರಿವಾಲ್ ದಿಲ್ಲಿ ‘ದೊರೆ’ಯಾದರು. ಈ ವೇಳೆ ತಾವು ಅಧಿಕಾರಕ್ಕೆ ಬಂದರೆ ಕೆಲವು ಭರವಸೆಗಳನ್ನ ಈಡೇರಿಸುವುದಾಗಿ ಆಮ್ ಆದ್ಮಿ ಮಾತು ಕೊಟ್ಟಿತ್ತು.

ಹೊಸ ಶಾಲೆಗಳ ನಿರ್ಮಾಣ, ಯಮುನಾ ನದಿ ಶುದ್ದೀಕರಣಗೊಳಿಸುವುದು, ಬಡವರಿಗೆ ಉಚಿತ ವಿದ್ಯುತ್, ಉಚಿತ ನೀರು ಸರಬರಾಜು ಭರವಸೆ ನೀಡಿದ್ದ ಕೇಜ್ರಿವಾಲ್ ಇದೀಗ ಕೊಟ್ಟ ಮಾತನ್ನೇ ಮರತು ಬಿಟ್ಟಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಹೊಸ ಶಾಲೆ ನಿರ್ಮಾಣ ಮಾಡೋದಿರಲಿ 700 ಶಾಲೆಗಳಲ್ಲಿ ಪ್ರಾಂಶುಪಾಲರೇ ಇಲ್ಲ. ಈಪೈಕಿ ಅದೆಷ್ಟೋ ಶಾಲೆಗಳಲ್ಲಿ ವಿಜ್ಷಾನ ಭಾಗವೇ ಇಲ್ಲ. ಇನ್ನೂ ಸರ್ಕಾರಿ ಶಾಲೆಗಳು 19 ಸಾವಿರ ಶಿಕ್ಷಕರ ಕೊರತೆ ಎದುರಿಸುತ್ತಿವೆ. ಇನ್ನೂ ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಕೆ ಬಗ್ಗೆ ಸರ್ಕಾರ ಭರವಸೆ ನೀಡಿತ್ತು. ಆದರೆ 15 ಲಕ್ಷ ಸಿಸಿ ಕ್ಯಾಮರಾಗಳನ್ನು ಅದೆಲ್ಲಿ ಅಳವಡಿಕೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ದೆಹಲಿ ನಗರ ಸಾರಿಗೆ ಸಂಚಾರಕ್ಕಾಗಿ 5 ಸಾವಿರ ಬಸ್ ಗಳನ್ನು ಸರ್ಕಾರವು ಖರೀಸಿದೆ ಎಂದು ಮಾಃಇತಿ ನೀಡಲಾಗಿದೆ. ಆದರೆ, ಸರ್ಕಾರ ಖರೀದಿಸಿದ್ದೇ ಕೇವಲ 300 ಬಸ್ ಗಳು ಎನ್ನುವ ಆರೋಪಗಳು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮೇಲಿವೆ. ಆದರೂ ತಾವು ಆಸ್ವಾಸನೆ ನೀಡಿದ್ದ 70ಕ್ಕೂ ಹೆಚ್ಚು ಭರವಸೆಗಳನ್ನು ಆಮ್ ಆದ್ಮಿ ಸರ್ಕಾರ ಈಡೇರಿಸಿದೆ ಎಂದು ಎಎಪಿ ಪಕ್ಷ ತಿಳಿಸಿದೆ. ಜೊತೆಗೆ ಮುಂದಿನ 5 ವರ್ಷ ಅಧಿಕಾರ ಒಲಿದರೆ ಉಳಿದ ಹಾಗೂ ಹೊಸ ಭರವಸೆಗಳನ್ನು ಈಡೇರಿಸುವ ಭರವಸೆ ನೀಡಿದೆ. ಈ ಬಗ್ಗೆ ಪ್ರಜ್ಞಾವಂತ ಮತದಾರರು ಎಚ್ಚೆತ್ತುಕೊಳ್ಳಬೇಕು.