ಈ ಪುಣ್ಯಾತ್ಮ ರಾಜ್ಯಕ್ಕೆ ಸಿಎಂ ಆಗಿ ಕಾಲಿಟ್ಟಾಗಿನಿಂದ ರಾಜ್ಯದಲ್ಲಿ ಬರಗಾಲ ಒಕ್ಕರಿಸಿದೆ : ಬಿಎಸ್‌ವೈ

ಬೆೆಂಗಳೂರು : ಶೋಭಾ ಕರಂದ್ಲಾಜೆ ಬಳಸಿದ್ದ ಷಂಡ ಪದ ಬಳಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್‌ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ. ಸಿ.ಎಂ ಸಿದ್ದರಾಮಯ್ಯ ಗೌರವದಿಂದ ನಡೆದುಕೊಂಡರೆ ನಾವೂ ಗೌರವದಿಂದ ನಡೆದುಕೊಳ್ಳುತ್ತೇವೆ ಎಂದಿರುವ ಯಡಿಯೂರಪ್ಪ,  ಹೋದಲೆಲ್ಲ ದಲಿತರನ್ನು ಮದುವೆ ಆಗಿ ಆಗಿ ಅಂತ ಸಿ.ಎಂ ಹೇಳ್ತಾರೆ. ನಾವು ಇನ್ನೊಬ್ಬರ ಬಗ್ಗೆ ಮಾತಾಡುವಾಗ ನಾವು ಏನು ಮಾಡಿದ್ದೇವೆ ಎಂದು ಗೊತ್ತಿರಬೇಕು ಎಂದಿದ್ದಾರೆ. ಇನ್ನು ಶೋಭಾ ಕರಂದ್ಲಾಜೆ ಮತ್ತು ಕಲ್ಲಡ್ಕ ಪ್ರಭಾಕರ್‌ ಭಟ್ ಬೆದರಿಕೆ ವಿಚಾರ ಕುರಿತಂತೆ ಹೇಳಿಕೆ ನೀಡಿರುವ ಯಡಿಯೂರಪ್ಪ, ಕಠಿಣವಾಗಿ ಮಾತನಾಡುವವರನ್ನ ಸಿಎಂ ಟಾರ್ಗೆಟ್ ಮಾಡ್ತಿದ್ದಾರೆ. ಎಲ್ಲರೂ ಶೋಭಾ ಮತ್ತು ಪ್ರಭಾಕರ್‌ರನ್ನು ಟಾರ್ಗೆಟ್ ಮಾಡಿದ್ದಾರೆ. ಸಿಎಂ ಕೆಳಮಟ್ಟಕ್ಕೆ ಇಳಿದರೆ ನಾವು ತಾನೆ ಏನು ಮಾಡಲು ಸಾಧ್ಯ. ದಕ್ಷಿಣ ಕನ್ನಡದಲ್ಕಿ 24ಕೊಲೆಗಳು ಆಗಿವೆ. ಸರ್ಕಾರ ಇನ್ನೂ ಅಪರಾಧಿಗಳನ್ನು ಹಿಡಿದಿಲ್ಲ. ಸಿಎಂಗೆ ಯಾರ ಸಾವಿನ ಬಗ್ಗೆಯೂ ಚಿಂತೆ ಇಲ್ಲ ಎಂದು ಹರಿಹಾಯ್ದಿದ್ದಾರೆ.

ಇಡೀ ವಿಶ್ವವೇ ಪ್ರಧಾನಿ ಮೋದಿ ಅವರ ಸಾಧನೆಯನ್ನು ಕೊಂಡಾಡುತ್ತಿದೆ. ಆದರೆ ರಾಜ್ಯದ ಸಿಎಂ ಮಾತ್ರ, ಮೋದಿ ಸಾಧನೆ ಮತ್ತು ತಮ್ಮ ಸಾಧನೆಯ ಬಗ್ಗೆ ಚರ್ಚೆಗೆ ಬನ್ನಿ ಎನ್ನುವುದು ಮೂರ್ಖತನ. ದೇಶದ ಯಾವುದೇ ಮುಖ್ಯಮಂತ್ರಿ ಕೂಡ ಈ ರೀತಿ ಹೇಳಿಕೆ ನೀಡಿರಲಿಲ್ಲ. ಅವರಿಗೆ ಅಧಿಕಾರದ ಮದವೇರಿದೆ. ಈ ಪುಣ್ಯಾತ್ಮ ರಾಜ್ಯದ ಮುಖ್ಯಮಂತ್ರಿ ಆಗಿ ಕಾಲಿಟ್ಟಾಗಿನಿಂದಲೂ ಭೀಕರ ಬರಗಾಲ ಆವರಿಸಿದೆ. ಮೋದಿ ಹಾಗೂ ನಮಗೆ ಸವಾಲು ಹಾಕಲು ನಿಮಗೆ ನಾಚಿಕೆ ಆಗಬೇಕು. ನಿಜವಾಗಲೂ ನಿಮಗೆ ಧೈರ್ಯವಿದ್ದರೆ, ವಿಧಾನಸೌಧಕ್ಕೆ ಬನ್ನಿ ಎಂದು ಸವಾಲು ಹಾಕಿದ್ದಾರೆ.

 

 

Comments are closed.