ಯಶ್-ಪುನೀತ್ ಅಭಿಮಾನಿಗಳ ಮನಸ್ತಾಪ : ‘ಕೆ.ಜಿ.ಎಫ್​’ಗೆ ಕೊಟ್ಟ ಬೆಂಬಲ ‘ಸಾರ್ವಭೌಮ’ಕ್ಕಿಲ್ಲ

ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಅಭಿಮಾನಿಗಳು ರಾಕಿಂಗ್​ ಸ್ಟಾರ್​ ಯಶ್​ ಅಭಿಮಾನಿಗಳ ಮೇಲೆ ಮುನಿಸಿಕೊಂಡಿದ್ದು, ತಮ್ಮ ಕೋಪವನ್ನು ಸಾಮಾಜಿಕ ಜಾಲತಾಣದಲ್ಲಿ ಹೊರ ಹಾಕಿದ್ದಾರೆ.

ಯಶ್​ ಅಭಿನಯದ ಬಹುನಿರೀಕ್ಷಿತ ಕೆ.ಜಿ.ಎಫ್​. ಚಿತ್ರದ ಟೀಸರ್​, ಟ್ರೇಲರ್​ ಬಿಡುಗಡೆಯಿಂದ ಚಿತ್ರ ಬಿಡುಗಡೆವರೆಗೂ ಪವರ್​ಸ್ಟಾರ್​ ಅಭಿಮಾನಿಗಳು ಯಶ್​ ಚಿತ್ರಕ್ಕೆ ಸಖತ್​ ಬೆಂಬಲ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಯಶ್​ ಚಿತ್ರದ ಪ್ರಮೋಶನ್​ ಮಾಡಿದ್ದರು. ಅಲ್ಲದೆ, ಚಿತ್ರ ಬಿಡುಗಡೆಯಾದಾಗ ಪುನೀತ್​ ಅಭಿಮಾನಿಗಳು ಫ್ಯಾನ್ಸ್​ ಶೋ ಕೂಡ ಏರ್ಪಡಿಸಿದ್ದರು.

ಈಗ ಪುನೀತ್​ ಅಭಿನಯದ ನಟ ಸಾರ್ವಭೌಮ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಫೆ. 7ಕ್ಕೆ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ಆದರೆ, ಟೀಸರ್​ನಿಂದಿಡಿದು ಟ್ರೇಲರ್​ ಬಿಡುಗಡೆಯಾದಾಗಿನಿಂದ ಯಶ್​ ಅಭಿಮಾನಿಗಳು ನಮ್ಮ ಸ್ಟಾರ್​ ಚಿತ್ರಕ್ಕೆ ಒಂದು ಸಣ್ಣ ಬೆಂಬಲವನ್ನು ಸೂಚಿಸಿಲ್ಲ ಎಂದು ಪುನೀತ್​ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಫ್ಯಾನ್ಸ್​ ಶೋ ಏರ್ಪಡಿಸುವುದು ಸುಮ್ನೆ ಅಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆ.ಜಿ.ಎಫ್​. ಚಿತ್ರಕ್ಕೆ ನಾವು ಕೊಟ್ಟಿರುವಷ್ಟು ಬೆಂಬಲವನ್ನು ಬೇರೆ ಯಾರು ಕೊಟ್ಟಿಲ್ಲ. ನಿಯತ್ತು ಇರಲಿ ಎಂದು ಯಶ್​ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ. ಪುನೀತ್​-ಯಶ್​ ಮ್ಯೂಚಲ್​ ಫ್ಯಾನ್ಸ್​ ಪೇಜ್​ ಅನ್ನು ಪುನೀತ್​ ಅಭಿಮಾನಿಗಳು ಅನ್​​ಲೈಕ್​ ಮಾಡಿದ್ದು, ದರ್ಶನ್​ ಅಭಿಮಾನಿಗಳ ಜತೆ ಕೈ ಜೋಡಿಸಿ ಟಾಂಗ್​ ನೀಡಿದ್ದಾರೆ.

Leave a Reply