ಕಲುಷಿತಗೊಂಡ ಗಂಗಾನದಿ ಪರಿಶುದ್ಧ : ನೀರಲ್ಲಿ ಡಾಲ್ಫಿನ್ ಪ್ರತ್ಯಕ್ಷ …!

ದೇಶದಲ್ಲಿ ಲಾಕ್ ಡೌನ್ ನಿಂದಾಗಿ ವಾತಾವರಣದಲ್ಲಿ  ತುಂಬಾ ಬದಲಾವಣೆಯಾಗಿದ್ದು, ಕಲುಷಿತಗೊಂಡಿದ್ದ ಗಂಗಾನದಿ ಪರಿಶುದ್ಧವಾದ ಸುದ್ದಿ ಹೊರಬಿದ್ದಿತ್ತು. ಈ ಮಧ್ಯ ಇದೇ ಗಂಗೆಯಲ್ಲಿ ಅಳಿವಿನಂಚಿನ ಡಾಲ್ಫಿನ್ ಈಜಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಭಾರತದ ರಾಷ್ಟ್ರೀಯ ಜಲಚರ ಪ್ರಾಣಿಯಾಗಿರುವ ಈ ‘ಗಂಗಾನದಿಯ ಡಾಲ್ಫಿನ್’ ಅಪರೂಪಕ್ಕೆ ಉತ್ತರ ಪ್ರದೇಶದ ಮೇರಠ್ ಸಮೀಪ ಕಾಣಿಸಿಕೊಂಡಿದೆ.

ಅರಣ್ಯಾಧಿಕಾರಿ ಆಕಾಶದೀಪ್ ಬಧ್ವಾನ್ ಎಂಬುವವರು ಇದರ ವಿಡಿಯೋವನ್ನು ಟ್ವೀಟರ್ ಮೂಲಕ ಶೇರ್ ಮಾಡಿದ್ದಾರೆ. ಅದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು,’ ಗಂಗಾನದಿಯ ಹುಲಿ’ ಎಂದೇ ಕರೆಸಿಕೊಳ್ಳುವ ಅಳಿವಿನಂಚಿನ ಈ ಡಾಲ್ಫಿನ್ ಮತ್ತೆ ಪತ್ತೆಯಾಗಿದ್ದಕ್ಕೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ಅರಣ್ಯದ ಆಹಾರ ಸರಪಳಿಯಲ್ಲಿ ಹುಲಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ನದಿ ನೀರಿನಲ್ಲಿ ವಾಸಿಸುವ ಪ್ರಾಣಿಗಳ ಆಹಾರ ಸರಪಳಿಯಲ್ಲಿ ಡಾಲ್ಫಿನ್ ಗೆ ಇದೆ. ನದಿ ನೀರಿನ ಡಾಲ್ಫಿನ್ ಸಾಮಾನ್ಯವಾಗಿ ಭಾತರ, ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಗಂಗಾ ಮತ್ತು ಬ್ರಹ್ಮಪುತ್ರಾ ನದಿ ಮತ್ತು ಇವುಗಳ ಉಪನದಿಯಲ್ಲಿ ಕಾಣಿಸಿಕೊಳ್ಳುತ್ತವೆ. ಮೀನುಗಳನ್ನು ತಿಂದು ಬದುಕುವ ಈ ಜೀವಿಗೆ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ. ಇತ್ತೀಚೆಗೆ ಇವು ಕಾಣಿಸುವುದು ಬಹಳ ಅಪರೂಪವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights