ಗುರಗಾಂವ್ ನಲ್ಲಿ ಮತ್ತೊಂದು ಅತ್ಯಾಚಾರ : 16 ವರ್ಷದ ಬಾಲಕಿ ಮೇಲೆ ರೇಪ್!

ಗುರಗಾಂವ್ ನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಗುರುಗ್ರಾಮ್‌ನ ಸೆಕ್ಟರ್ 45 ರಲ್ಲಿ 16 ವರ್ಷದ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ತಾನು ವಾಶ್ ರೂಂಗೆ ಹೋಗುವಾಗ ಆರೋಪಿ ತನ್ನನ್ನು ಹಿಡಿದುಕೊಂಡಿದ್ದಾನೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಆತ ಬಲವಂತವಾಗಿ ಸಂತ್ರಸ್ತೆಯನ್ನು ತನ್ನ ಕೋಣೆಗೆ ಕರೆದೊಯ್ದು ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿಚಾರ ಬಾಯಿಬಿಟ್ಟರೆ ಆರೋಪಿಗಳು ಅವಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆಂದು ಬಾಲಕಿ ಹೇಳಿಕೊಂಡಿದ್ದಾಳೆ.

ಗುರಗಾಂವ್ ಸೆಕ್ಟರ್ 40 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರಂಭದಲ್ಲಿ ಅತ್ಯಾಚಾರಿಯ ವಿರುದ್ಧ ಎಫ್ಐಆರ್ ದಾಖಲಿಸದಂತೆ ತಡೆಯಲು ಪ್ರಯತ್ನಿಸಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ.

ಸಂತ್ರಸ್ತೆಯ ತಂದೆಯ ಮಾಹಿತಿ ಪ್ರಕಾರ, ‘ಅವರು ಮೊದಲಿಗೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪ್ರಕರಣ ದಾಖಲಿಸಬೇಕಾದರೆ ಪೊಲೀಸರು “ಹುಡುಗಿಯ ಭವಿಷ್ಯ ಹಾಳಾಗುತ್ತದೆ” ಎಂದು ಹೇಳಿದ್ದಾರೆ ಎಂದಿದ್ದಾರೆ.

ಎಫ್ಐಆರ್ ದಾಖಲಿಸಿದರೆ ಈ ಪ್ರಕರಣ ದುಬಾರಿ ಕಾನೂನು ಕ್ರಮಗಳಲ್ಲಿ ಸಿಲುಕಿಕೊಳ್ಳುತ್ತದೆ ಮತ್ತು ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಲು ಪೊಲೀಸರು ತಿಳಿಸಿದ್ದಾರೆ ಎಂದು  ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. ಕಾರ್ಮಿಕನಾಗಿ ಕೆಲಸ ಮಾಡುವ ಸಂತ್ರಸ್ತೆಯ ತಂದೆ ನಂತರ ಇತರರ ಸಹಾಯದಿಂದ ದೂರು ದಾಖಲಿಸಿದ್ದಾರೆ.

ಆದರೂ ದೂರಿನಲ್ಲಿ ಆರಂಭಿಕ ಹೇಳಿಕೆಯಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ನಂತರ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಕರೆ ಬಂತು. ಲೈಂಗಿಕ ದೌರ್ಜನ್ಯದ ದೂರು ಬಂದ ನಂತರ ಕುಟುಂಬವನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಎಚ್‌ಟಿ ವರದಿಯಲ್ಲಿ ತಿಳಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights