ಶ್ರೀಕೃಷ್ಣ ಜನ್ಮಭೂಮಿ: ಮಥುರಾದಲ್ಲಿ ಮಸೀದಿ ತೆರೆವಿಗಾಗಿನ ಅರ್ಜಿ ವಜಾಗೊಳಿಸಲು ಮನವಿ!

ಶ್ರೀಕೃಷ್ಣನ ಜನ್ಮಸ್ಥಳವೆಂದು ಭಕ್ತರು ನಂಬಿರುವ ಮಥುರಾದ ದೇವಾಲಯದ ಬಳಿ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸುವಂತೆ ಮುಸ್ಲಿಂ ಸಂಘಟನೆಯೊಂದು ಸೋಮವಾರ ಮಥುರಾ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಕತ್ರ ಕೇಶವ್ ದೇವ್ ದೇವಸ್ಥಾನದ 13.37 ಎಕರೆ ಆವರಣದಲ್ಲಿ 17 ನೇ ಶತಮಾನದ ಶಾಹಿ ಇದ್ಗಾ ಮಸೀದಿಯನ್ನು ತೆರವು ಗೊಳಿಸಬೇಕೆಂದು ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಮತ್ತು ಇತರ ನಾಲ್ವರು ಮನವಿ ಸಲ್ಲಿಸಿದ್ದರು.

ಈ ಮನವಿಯನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿ, ಇಂಟಜಾಮಿಯಾ ಶಾಹಿ ಮಸೀದಿ ಸಮಿತಿಯು ಸಿವಿಲ್ ನ್ಯಾಯಾಲಯಕ್ಕೆ ಲಿಖಿತ ಹೇಳಿಕೆಯಲ್ಲಿ ಮನವಿ ಮಾಡಿದ್ದು, ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ 1991 ರ ನಿಬಂಧನೆಗಳ ಅಡಿಯಲ್ಲಿ, ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾಗಿರುವ ಅಥವಾ ಆಗಸ್ಟ್ 15, 1947ಕ್ಕೂ ಮೊದಲಿನಿಂದ ಚಾಲ್ತಿಯಲ್ಲಿದ್ದ ಪೂಜಾ ಸ್ಥಳ  ಧಾರ್ಮಿಕ ಕ್ಷೇತ್ರಗಳನ್ನು ಮರುಪಡೆಯಲು ಮೊಕದ್ದಮೆ ಹೂಡುವುದನ್ನು ನಿಷೇಧಿಸುತ್ತದೆ.

“ಆಗಸ್ಟ್ 15,1947 ರ ಮೊದಲು ಶಾಹಿ ಇದ್ಗಾ ಮಸೀದಿಯನ್ನು ನಿರ್ಮಾಣ ಮಾಡಲಾಗಿದ್ದು, ಈ ಮೊಕದ್ದಮೆ ರದ್ದತಿಗೆ ಅರ್ಹವಾಗಿದೆ” ಎಂದು ಸಮಿತಿ ಸಲ್ಲಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಶವ್ ದೇವ್ ದೇವಸ್ಥಾನದ ಭೂಮಿಯಲ್ಲಿ ಯಾವುದೇ ಮಸೀದಿಯನ್ನು ನಿರ್ಮಿಸಲಾಗಿಲ್ಲ ಅಥವಾ ಶತಮಾನಗಳ ಹಿಂದೆ ನಿರ್ಮಿಸಿದಂತೆ ಪ್ರಸ್ತುತ ಸ್ಥಾನದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗುವುದಿಲ್ಲ ಎಂದು ಮುಸ್ಲಿಂ ಸಮಿತಿಯ ತನ್ನ ಸಲಹೆಗಾರ ನೀರಜ್ ಶರ್ಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಸೀದಿ ಇರುವ ಸ್ಥಳವು ವಕ್ಫ್ ಮಂಡಳಿಯ ಆಸ್ತಿಯಾಗಿದೆ ಮತ್ತು 1669 ರಲ್ಲಿ ಇದನ್ನು ನಿರ್ಮಿಸಲಾಗಿದೆ. ಹಾಗಾಗಿ ದೇವಾಲಯಕ್ಕೆ ಸೇರಿದ ಭೂಮಿಯ ಒಂದು ಭಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿರುವುದು ತಪ್ಪಾಗಿದೆ ಎಂದು 31 ಅಂಶಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 1 ರಂದು ನಡೆಸುವುದುಗಾಗಿ ನ್ಯಾಯಾಲಯ ತಿಳಿಸಿದೆ.

ಇದನ್ನೂ ಓದಿ: ಮಥುರಾ ಶ್ರೀಕೃಷ್ಣ ಜನ್ಮಭೂಮಿ ಬಳಿ ಮಸೀದಿ ತೆರವು ಕೋರಿ ಮೊಕದ್ದಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights