FACT CHECK | ಮಿಸ್ಟರ್ ಬೀನ್ ಪಾತ್ರದಾರಿ ರೋವನ್ ಅಟ್ಕಿನ್ಸನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಎಡಿಟೆಡ್ ಫೋಟೊ ಹಂಚಿಕೆ

ಮಿಸ್ಟರ್ ಬೀನ್ ಯಾರಿಗೆ ಗೊತ್ತಿಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು, ವೃದ್ದರು ಸೇರಿದಂತೆ ಹಾಸ್ಯದ ಕಡಲಲ್ಲಿ ತೇಲಿಸಿ ನಗಿಸುವ ಪಾತ್ರ ಅದು. ಈ ಪಾತ್ರವನ್ನು ಮಾಡುತ್ತಿದ್ದ ನಟನ ಹೆಸರು ರೋವನ್ ಅಟ್ಕಿನ್‌ಸನ್. ಈ ನಟನ ಮೂಲ ಹೆಸರಿನ ಬದಲು ಮಿಸ್ಟರ್ ಬೀನ್ ಎಂಬುದೇ ಅನ್ವರ್ಥವಾಗಿದೆ. ಅಷ್ಟರಮಟ್ಟಿಗೆ ಮಿಸ್ಟರ್‌ ಬೀನ್ ಚಿರಪರಿಚಿತ. ಆದರೆ ಈಗ ಅಂತಹ ನಟ ಹಾಸಿಗೆ ಹಿಡಿದ್ದಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ದೈಹಿಕವಾಗಿ ದುರ್ಬಲರಾಗಿರುವ ರೋವನ್ ಅಟ್ಕಿನ್ಸನ್ ಅವರು ಹಾಸಿಗೆ ಹಿಡಿದಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಎರಡು ಚಿತ್ರಗಳ ಕೊಲಾಜ್ ಅನ್ನು ಹಂಚಿಕೊಂಡಿದ್ದಾರೆ, ಒಂದು ಅಟ್ಕಿನ್ಸನ್ ಅವರ ಮಿಸ್ಟರ್ ಬೀನ್ ಪಾತ್ರವನ್ನು ತೋರಿಸುತ್ತದೆ, ಇನ್ನೊಂದು 2024 ರಲ್ಲಿ ಹಾಸಿಗೆ ಹಿಡಿದಿರುವುದನ್ನು ತೋರಿಸುತ್ತದೆ.

ಅಂತಹ ಪೋಸ್ಟ್ ಗಳನ್ನು ಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ನಿಜವಾಗಿಯೂ ನಟ ರೋವನ್ ಅಟ್ಕಿನ್ಸನ್ ಹಾಸಿಗೆ ಹಿಡಿದ್ದಿದ್ದಾರೆ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್ :

ಹಾಸಿಗೆ ಹಿಡಿದಿರುವ ನಟ ರೋವನ್ ಅಟ್ಕಿನ್ಸನ್ ಅವರ ಚಿತ್ರದ ಬಗ್ಗೆ ಗೂಗಲ್ ಲೆನ್ಸ್ ಸರ್ಚ್ ನಡೆಸಿದಾಗ, 30 ಜನವರಿ , 2020 ರ ಮಿರರ್‌ನ ವರದಿಯೊಂದು ಲಭ್ಯವಾಗಿದೆ. ಅದರಲ್ಲಿ “75 ವರ್ಷದ ಬ್ಯಾರಿ ಬಾಲ್ಡರ್ಸ್ಟೋನ್ ರವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಮತ್ತು ಅವರ ಪತ್ನಿ ತಾವು ಕಷ್ಟಪಟ್ಟು ಸಂಪಾದಿಸಿದ ಉಳಿತಾಯವನ್ನು ಅವರ ಆರೈಕೆಯ ಬಿಲ್ ಪಾವತಿಸಲು ಖರ್ಚು ಮಾಡಬೇಕಾಯಿತು” ಎಂದು ವರದಿಯು ವಿವರಿಸಿದೆ.

 

 

 

 

 

 

 

 

 

 

 

 

 

 

 

 

ಮಿರರ್ ವರದಿಯಲ್ಲಿ ಕಾಣಿಸಿಕೊಂಡಿರುವಂತೆ ಅಟ್ಕಿನ್ಸನ್ ಅವರ ಫೋಟೋವನ್ನು ಬಾಲ್ಡರ್ ಸ್ಟೋನ್ ಅವರ ಛಾಯಾಚಿತ್ರದೊಂದಿಗೆ ಹೋಲಿಸಿದಾಗ, ನಟನನ್ನು ಹಾಸಿಗೆ ಹಿಡಿದಿರುವುದನ್ನು ತೋರಿಸುವ ವೈರಲ್ ಚಿತ್ರವನ್ನು ತಿರುಚಲಾಗಿದೆ ಎಂದು ನಾವು ತೀರ್ಮಾನಿಸಬಹುದು.

ಬಾಲ್ಡರ್ ಸ್ಟೋನ್ ಅವರ ಅದೇ ಕರುಣಾಜನಕ ಛಾಯಾಚಿತ್ರಗಳನ್ನು ಹೊತ್ತ ಮ್ಯಾಂಚೆಸ್ಟರ್ ಈವಿನಿಂಗ್ ನ್ಯೂಸ್ ವರದಿ ಮಾಡಿದೆ, “73 ವರ್ಷದ ಮರ್ಲಿನ್ (ಅವರ ಪತ್ನಿ) ತನ್ನ ಪತಿಯ ಆರೋಗ್ಯವು ‘ಹದಗೆಟ್ಟ’ ನಂತರ ಈ ಫೋಟೋವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರೂ, ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.”

ಅನೇಕ ಆನ್ಲೈನ್ ಪ್ಲಾಟ್ಫಾರ್ಮ್‌ಗಳು ಬಳಕೆದಾರರಿಗೆ ಛಾಯಾಚಿತ್ರ ಅಥವಾ ವೀಡಿಯೊದಲ್ಲಿ ವ್ಯಕ್ತಿಯ ಮುಖವನ್ನು ಇನ್ನೊಬ್ಬರ ಮೇಲೆ ಹೇರಲು ಅನುವು ಮಾಡಿಕೊಡುತ್ತದೆ. “ಫೇಸ್ ಸ್ವೈಪಿಂಗ್” ಎಂದು ಕರೆಯಲ್ಪಡುವ ಈ ತಂತ್ರವನ್ನು ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮುಖವನ್ನು ಸಿಗರೇಟ್ ಹೊಂದಿರುವ ಮಹಿಳೆಯನ್ನು ತೋರಿಸುವ ಫೋಟೋದಲ್ಲಿ ಮಾರ್ಫಿಂಗ್ ಮಾಡಲು ಬಳಸಲಾಯಿತು.

ವಯಸ್ಸಾದವರ ಮೂಲ ಛಾಯಾಚಿತ್ರದ ಮೇಲೆ ರೋವನ್ ಅಟ್ಕಿನ್ಸನ್ ಅವರ ಮುಖವನ್ನು ಹೋಲಿಸಲು ನಮ್ಮ ತಂಡವು ಅಂತಹ ಎಐ ಆಧಾರಿತ ಫೇಸ್ ಸ್ವಾಪಿಂಗ್ ಸಾಧನವನ್ನು ಬಳಸಿತು (ಪ್ರದರ್ಶನ ಉದ್ದೇಶಕ್ಕಾಗಿ ಮಾತ್ರ), ಮತ್ತು ಪರಿಣಾಮವಾಗಿ ಚಿತ್ರವು ವ್ಯಾಪಕವಾಗಿ ಪ್ರಸಾರವಾದ ದೃಶ್ಯಕ್ಕೆ ಹೋಲುತ್ತದೆ ಎಂದು ಕಂಡುಕೊಂಡಿದ್ದೇವೆ.

ವಿಶೇಷವೆಂದರೆ, ಮಿಸ್ಟರ್ ಬೀನ್ ನಟ ಇತ್ತೀಚೆಗೆ ಜುಲೈ 7, 2024 ರಂದು ಫಾರ್ಮುಲಾ ಒನ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ನಟನ ಅನೇಕ ಛಾಯಾಚಿತ್ರಗಳು, ಇಲ್ಲಿ ಮತ್ತು ಇಲ್ಲಿ ನೋಡಬಹುದು, ಅವರು ದೈಹಿಕವಾಗಿ ಆರೋಗ್ಯವಾಗಿರುವುದನ್ನು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಮಿಸ್ಟರ್ ಬೀನ್ ನಟ ರೋವನ್ ಅಟ್ಕಿನ್ಸನ್ ಹಾಸಿಗೆ ಹಿಡಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾದ ವೈರಲ್ ಫೋಟೋವನ್ನು ಡಿಜಿಟಲ್ ಆಗಿ ತಿರುಚಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತಾಯಿಯೊಬ್ಬಳು ತನ್ನ ಮಗುವಿಗೆ ಅಮಾನುಷವಾಗಿ ಥಳಿಸುತ್ತಿರುವ ದೃಶ್ಯ ನಿಜವೇ? ಇದು ಕರ್ನಾಟಕದಲ್ಲಿ ನಡೆದಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights