FACT CHECK | ಬಾಹ್ಯಾಕಾಶದಲ್ಲಿ ಸಿಲುಕಿದ್ದ ಸುನಿತಾ ವಿಲಿಯಮ್ಸ್ ಭೂಮಿಗೆ ಬಂದ್ರಾ ?

ಬಾಹ್ಯಾಕಾಶ ನೌಕೆಯಲ್ಲಿ ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸುನಿತಾ ವಿಲಿಯಮ್ಸ್ 127 ದಿನಗಳನ್ನು ಬಾಹ್ಯಾಕಾಶದಲ್ಲಿ ಪೂರ್ಣಗೊಳಿಸಿದ  ಭೂಮಿಗೆ ಮರಳುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

“127 ದಿನಗಳ ಯಶಸ್ವಿ ಬಾಹ್ಯಾಕಾಶ ಪ್ರವಾಸದ ನಂತರ, ‘ಗಗನಯಾತ್ರಿ ಸುನೀತಾ ವಿಲಿಯಮ್ಸ್’ ಸುರಕ್ಷಿತವಾಗಿ ಭೂಮಿಗೆ ಮರಳುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ ಎಂಬ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 2023ರ ಡಿಸೆಂಬರ್‌ನಲ್ಲಿ ಪ್ರಕಟವಾದ UNILAD ಎಂಬ ಲೇಖನವೊಂದು ಲಭ್ಯವಾಗಿದೆ.

“ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ವಿಶ್ರಾಂತಿಸಲು ವಿಲಕ್ಷಣವಾದ ಮಾರ್ಗವನ್ನು ತೋರಿಸಿದ್ದಾರೆ” ಎಂದು ಈ ಲೇಖನದಲ್ಲಿ ಉಲ್ಲೇಖವಾಗಿದೆ. ಇದು ವಿಲಿಯಮ್ಸ್ ಚಿತ್ರೀಕರಿಸಿದ ಹಳೆಯ ವಿಡಿಯೋ ಆಗಿದೆ. ಆ ವಿಡಿಯೋದಲ್ಲಿ ವಿಲಿಯಮ್ಸ್‌ 2012 ರಲ್ಲಿ ತಮ್ಮ ISS  ಕಾರ್ಯಾಚರಣೆಯ ಅಂತಿಮ ದಿನಗಳ ಕುರಿತು ವಿವರಿಸಿದ್ದಾರೆ. NASA ಕೂಡ 2012ರ ವಿಲಿಯಮ್ಸ್‌ರವರ ಬಾಹ್ಯಾಕಾಶದ ಪ್ರವಾಸವನ್ನು ಕುರಿತು YouTube ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. 2012 ರಲ್ಲಿ ISS ವಿಲಿಯಮ್ಸ್‌ ಬಾಹ್ಯಾಕಾಶ ಭೇಟಿಯ ವಿಡಿಯೋವನ್ನು UNILAD ಲೇಖನದಲ್ಲಿ ಹಂಚಿಕೊಂಡಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಸುನಿತಾ ವಿಲಿಯಮ್ಸ್‌ ಹಾಗೂ ಬ್ಯಾರಿ ವಿಲ್‌ಮೋರ್‌ ಬುಚ್‌ ಅವರು ಇನ್ನೂ 6 ತಿಂಗಳು ಅಲ್ಲಿಯೇ ಇರಬೇಕಿದ್ದು, 2025ರ ಫೆಬ್ರವರಿ ಅಂತ್ಯದ ವೇಳೆಗೆ ಭೂಮಿಗೆ ಬರಲಿದ್ದಾರೆ.

ನಾಸಾ ವಿವರಣೆ :

ಈ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಮಾಹಿತಿ ನೀಡಿದ್ದು, ” ಗಗನನೌಕೆಯಲ್ಲಿ ತಾಂತ್ರಿಕ ದೋಷದಿಂದಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತ್ರಿಶಂಕು ಸ್ಥಿತಿಗೆ ಸಿಲುಕಿರುವ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ ಹಾಗೂ ಬ್ಯಾರಿ ವಿಲ್‌ಮೋರ್‌ ಬುಚ್‌ ಅವರು ಭೂಮಿಗೆ ಮರಳುವುದು ಮತ್ತಷ್ಟು ತಡವಾಗಲಿದೆ. 2025ರ ಫೆಬ್ರವರಿ ಅಂತ್ಯದ ವೇಳೆಗೆ ಅವರು ಭೂಮಿಗೆ ಹಿಂದಿರುಗಲಿದ್ದಾರೆ ” ಎಂದು ಹೇಳಿದೆ.

ಸ್ಟಾರ್‌ಲೈನರ್‌ ಮೂಲಕ 10 ದಿನಗಳ ಮಿಷನ್‌ಗೆ ಜೂನ್‌ 5ರಂದು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಆದರೆ, ಮಿಷನ್‌ ಯಶಸ್ಸಿನ ನಂತರ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿದ ನೌಕೆಯಲ್ಲಿ ಹೀಲಿಯಂ ಸರಣಿ ಸೋರಿಕೆ ದುರಂತದಿಂದಾಗಿ ಪ್ರೊಪಲ್ಷನ್‌ ಸಿಸ್ಟಮ್‌ನಲ್ಲಿ ದೋಷಗಳು ಪತ್ತೆಯಾಗಿತ್ತು. ಇದರಿಂದಾಗಿ ವಿಲ್ಮೋರ್‌ ಮತ್ತು ವಿಲಿಯಮ್ಸ್‌ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿಯುವಂತಾಯಿತು. ಸದ್ಯಕ್ಕೆ ಅವರನ್ನು ಕರೆತರಲು ಯಾವುದೇ ದಾರಿಗಳು ಕಾಣುತ್ತಿಲ್ಲ. ಸ್ಟಾರ್‌ಲೈನರ್‌ ಸಮಸ್ಯೆ ಸರಿಯಾಗದಿದ್ದರೆ ಅವರಿಗೆ ಇರುವ ಏಕೈಕ ದಾರಿಯೆಂದರೆ ‘ಸ್ಪೇಸ್‌ ಎಕ್ಸ್‌ನ ಡ್ರಾಗನ್‌ ಕ್ರ್ಯೂ’ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಹೇಳಿದೆ.

ಒಟ್ಟಾರೆಯಾಗಿ ಹೆಳುವುದಾದರೆ, ಸುನೀತಾ ವಿಲಿಯಮ್ಸ್ ISS ನ ಪ್ರವಾಸವನ್ನು ತೋರಿಸುವ ವಿಡಿಯೋ ಆಕರ್ಷಕವಾಗಿದೆ ನಿಜ, ಆದರೆ ಈ ವಿಡಿಯೋ ಒಂದು ದಶಕದಷ್ಟು ಹಳೆಯದಾಗಿದೆ ಮತ್ತು ಇತ್ತೀಚಿನ ಕಾರ್ಯಾಚರಣೆಗೆ ಸಂಬಂಧಿಸಿಲ್ಲ. ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಪರಿಶೀಲಿಸಿ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನಿತೀಶ್ ಕುಮಾರ್ ಮತ್ತು ರಾಹುಲ್ ಗಾಂಧಿ ಭೇಟಿಯ ಹಳೆಯ ಚಿತ್ರವನ್ನು ಇತ್ತೀಚಿನದ್ದು ಎಂದು ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights