FACT CHECK | ಹಸುವಿಗೆ ಚಿತ್ರಹಿಂಸೆ ನೀಡಿದನೆಂದು ಮುಸ್ಲಿಂ ಯುವಕನಿಗೆ ಪೊಲೀಸರಿಂದ ಲಾಠಿ ರುಚಿ? ವೈರಲ್ ವಿಡಿಯೋದ ಅಸಲೀಯತ್ತೇನು?

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಅದರಲ್ಲಿ ” ಈ ವಿಡಿಯೋವನ್ನು ಸರಿಯಾಗಿ ಗಮನವಿಟ್ಟು ನೋಡಿ, ಆ ಯುವಕ ಹಸುವಿಗೆ ಚಿತ್ರಹಿಂಸೆ ನೀಡಿದ್ದಾನೆ, ಇದನ್ನು ವಿಡಿಯೋ ಮಾಡಿ ಹಂಚಿಕೊಂಡು ವಿಕೃತವಾಗಿ ಆನಂದಿಸಿದ್ದಾನೆ. ಆದರೆ ಇದಾದ ಬಳಿಕ ಆತನಿಗೆ ಬಂದ ಪರಿಸ್ಥಿತಿ ಹೇಗಿದೆ ಎಂಬುದನ್ನು ಕೂಡ ನೀವು ಈ ವಿಡಿಯೋದಲ್ಲಿ ನೋಡಬಹುದು, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಇಂತಹ ಕಿಡಿಗೇಡಿಗಳಿಗೆ ಪೊಲೀಸರು ಇದೇ ರೀತಿಯ ಶಿಕ್ಷೆಯನ್ನು ನೀಡಬೇಕು” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಮೂಕ ಪ್ರಾಣಿಗಳಿಗೆ ಏನ್ ಕಾಟ ಕೊಡ್ತಾರೆ ಶಿವ, ಬಹುಮಾನ ಸರಿಯಾಗೇ ಸಿಕ್ತು ಎಂದು ಪ್ರತಿಪಾದಿಸಿ ಅನು ಕುಮಾರ್ ಎಂಬ ಫೇಸ್‌ಬುಕ್ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋದಲ್ಲಿ ಎರಡೂ ವಿಡಿಯೋಗಳ ಕೊಲಾಜ್‌ ಕಂಡು ಬಂದಿದೆ. ಒಂದರಲ್ಲಿ ಯುವಕನೊಬ್ಬ ಹಸುವಿನ ತಲೆಯನ್ನು ತಿರುಗಿಸಿ, ನೆಲಕ್ಕೆ ಬಿಳಿಸಿ ಹಿಂಸಿಸಿದ್ದಾನೆ, ಮತ್ತೊಂದು ವಿಡಿಯೋದಲ್ಲಿ ಪೊಲೀಸರು ವ್ಯಕ್ತಿಯೊಬ್ಬನಿಗೆ ಥಳಿಸುತ್ತಿರುವುದು ಕಂಡು ಬಂದಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌  :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮಾರ್ಚ್ 23, 2022 ರಂದು  Instagram ಬಳಕೆದಾರ tedthestoner ಎಂಬುವವರು ಈ ವೈರಲ್‌ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದು ಲಭ್ಯವಾಗಿದೆ. ಆದರೆ ಈ ಯುವಕನ ಹೆಸರು ಮತ್ತು ವಿಳಾಸ ಮತ್ತು ವೀಡಿಯೊದ ಸ್ಥಳದ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ. ಯುವಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆಯೂ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ, ಸುಮಾರು ಎರಡೂವರೆ ವರ್ಷಗಳಿಂದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ.

 

 

 

 

 

 

 

 

 

 

 

 

 

ಇದರ ನಂತರ, ನಾವು ಎರಡನೇ ವೀಡಿಯೊದ ಕೀಫ್ರೇಮ್ ಅನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ದಕ್ಕೆ ಸಂಬಂಧಿಸಿದ ವೀಡಿಯೊ ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾದ ವೆಬ್‌ಸೈಟ್‌ನಲ್ಲಿ 6 ಮೇ 2021 ರಂದು ಪ್ರಕಟಿಸಲಾಗಿದೆ. ಇದರಲ್ಲಿ ವೈರಲ್ ವಿಡಿಯೋದ ಎರಡನೇ ಭಾಗವನ್ನು ನೋಡಬಹುದು. ಇದರ ಪ್ರಕಾರ, ಚಂದೌಲಿ ಜಿಲ್ಲೆಯ ಬಲುವಾ ಪೊಲೀಸ್ ಠಾಣೆಯ ವಿಷಯವಾಗಿದ್ದು, ಮೊಬೈಲ್ ಕಳ್ಳತನದ ಆರೋಪದ ಮೇಲೆ ಪೊಲೀಸರು ಅಪ್ರಾಪ್ತರನ್ನು ಥಳಿಸಿದ್ದಾರೆ. ವೀಡಿಯೊ ವೈರಲ್ ಆದ ನಂತರ, ಬಲುವಾ ಪೊಲೀಸ್ ಠಾಣೆಯ ಪ್ರಭಾರಿ ಮತ್ತು ಕಾನ್‌ಸ್ಟೆಬಲ್ ಅನ್ನು ಅಮಾನತುಗೊಳಿಸಲಾಗಿದೆ.

 

 

 

 

 

 

 

 

 

 

 

 

 

 

ಮೇ 2, 2021 ರಂದು, ಚಂಡೌಲಿ ಪೊಲೀಸರು ಈ ವೈರಲ್‌ ವಿಡಿಯೋ ಕುರಿತು  ಪೋಸ್ಟ್ ಮಾಡಿ “ಮೊಬೈಲ್ ಅಂಗಡಿಗೆ ಕಳ್ಳತನ ಮಾಡುವ ಉದ್ದೇಶದಿಂದ ಪ್ರವೇಶಿಸಿದ ಮೂವರು ಹುಡುಗರು ಸಿಕ್ಕಿಬಿದ್ದಿದ್ದಾರೆ” ಎಂದು ತಿಳಿಸಿದ್ದರು. “ಅದರಲ್ಲಿ ಒಬ್ಬ ಆರೋಪಿಯನ್ನು ಇಬ್ಬರು ಪೊಲೀಸರು ಥಳಿಸಿದ್ದಾರೆ. ವಿಡಿಯೋ ಹೊರಬಿದ್ದ ನಂತರ ಇಬ್ಬರೂ ಪೊಲೀಸರನ್ನು ಅಮಾನತು ಮಾಡಲಾಗಿದೆ.” ಎಂಬ ಮಾಹಿತಿಯನ್ನು ನೀಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ , ಯುವಕನೊಬ್ಬ ಹಸುವಿಗೆ ಚಿತ್ರಹಿಂಸೆ ನೀಡುತ್ತಿರುವ ಮತ್ತು ಮೊಬೈಲ್ ಕಳ್ಳತನದ ಶಂಕೆಯಲ್ಲಿ ಪೊಲೀಸರು ಅಪ್ರಾಪ್ತ ವಯಸ್ಕನನ್ನು ಥಳಿಸುತ್ತಿರುವ ಎರಡು ಬೇರೆ ಬೇರೆ ಹಳೆಯ ವಿಡಿಯೋಗಳನ್ನು ಎಡಿಟೆಡ್ ಮೂಲಕ ಸೇರಿಸಿ, ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕೊಲೆಯಾದ ಹಿಂದೂ ಕಾರ್ಯಕರ್ತನ ಫೋಟೊ ಎಂದು ರಾಘವೇಂದ್ರ ಶುಕ್ಲಾ ಎಂಬ ಪತ್ರಕರ್ತನ ಫೋಟೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights