FACT CHECK | ಎಪಿಜೆ ಅಬ್ದುಲ್ ಕಲಾಂ ಬಾಲ್ಯದ ಫೋಟೊ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ

ಮಹಿಳೆ ಮತ್ತು ಮಗು ಇರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದ್ದು , ಈ ಫೋಟೊವನ್ನು ಹಂಚಿಕೊಂಡ ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಫೋಟೋದಲ್ಲಿ ಇರುವ ಮಗು ಎಪಿಜೆ ಅಬ್ದುಲ್ ಕಲಾಂ, ಅವರ ಬಾಲ್ಯದ ಫೋಟೊ ಎಂದು ಹೇಳಿಕೊಳ್ಳುತ್ತಿದ್ದಾರೆ.

ಬಹಳ ದಿನಗಳ ಪರಿಶ್ರಮದ ನಂತರ ಎಪಿಜೆ ಅಬ್ದುಲ್ ಕಲಾಂ ಅವರ ಈ ಫೋಟೋ ಲಭ್ಯವಾಗಿದೆ ಎಂದು ಹಲವರು ಬರೆದುಕೊಂಡಿದ್ದಾರೆ. ಹೀಗಾಗಿ ಈ ಫೋಟೋ ಸಾಕಷ್ಟು ವೈರಲ್‌ ಕೂಡ ಆಗಿದೆ

 

 

 

 

 

 

 

 

 

 

 

 

 

 

 

 

 

 

 

 

 

 

 

ಸಂಚಲನ ಮೂಡಿಸಿರುವ ಈ ಫೋಟೋ 80-90 ರ ದಶಕದಲ್ಲಿ ತೆಗೆದ ಚಿತ್ರವಾಗಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಮೊದಲ ಬಾರಿಗೆ ಈ ಚಿತ್ರವನ್ನು ನೋಡಿದ ಹಲವರು, ಇದು ನಿಜಕ್ಕೂ ಎಪಿಜೆ ಅಬ್ದುಲ್ ಕಲಾಂ ಅವರ ಬಾಲ್ಯದ ಫೋಟೋ ಎಂದು ನಂಬಿ, ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಫೋಟೋದಲ್ಲಿ ಕೆಲವೊಂದು ಪ್ರಶ್ನೆಗಳು ಮೂಡುತ್ತಿರುವುದರಿಂದ ವೈರಲ್ ಚಿತ್ರ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಹೀಗೆ ಗೊಂದಲ ಉಂಟುಮಾಡಿರುವ ವೈರಲ್ ಚಿತ್ರದ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

 

 

 

 

 

 

 

 

 

 

 

 

 

 

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲಿಸಲು ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ಮರಿಯಾಲ ಶ್ರೀನಿವಾಸ್ ಎಂಬುವರ ಫೇಸ್‌ಬುಕ್‌ ಖಾತೆಯಲ್ಲಿ ವೈರಲ್ ಫೋಟೋವಿನ ಮೂಲ ಚಿತ್ರ ಲಭ್ಯವಾಗಿದೆ. ಈ ಬಗ್ಗೆ ಅವರೇ ಸ್ಪಷ್ಟನೆಯನ್ನು ನೀಡಿದ್ದು, ಇದು ಅಬ್ದುಲ್‌ ಕಲಾಂ ಅವರದ್ದೋ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರದ್ದೋ ಫೊಟೋ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಪೋಸ್ಟ್‌ ಅನ್ನು ಓದುಗರಿಗೆ ನೇರವಾಗಿ ಅರ್ಥವಾಗಬೇಕಾಗಿ ತೆಲುಗಿನಿಂದ ಕನ್ನಡಕ್ಕೆ ಗೂಗಲ್‌ ಮೂಲಕ ನೇರೆ ಟ್ರ್ಯಾನ್ಸ್‌ಲೇಟ್‌ ಮಾಡಲಾಗಿದೆ.

3 ಮೇ 2020 ರಂದು ಈ ಫೊಟೊ ಬಗ್ಗೆ ಮಾಹಿತಿ ನೀಡಿರುವ ಅವರು, ಈ ಚಿತ್ರವು ಅವರ ಕುಟುಂಬಕ್ಕೆ ಸೇರಿದ್ದಾಗಿದ್ದಾಗಿದೆ ಎಂದು ತಿಳಿಸಿದ್ದಾರೆ.ಈ ಚಿತ್ರದಲ್ಲಿ ಅಮ್ಮನ ಪಕ್ಕದಲ್ಲಿ ಬಟ್ಟಲು ಹಿಡಿದುಕೊಂಡು ನಗುತ್ತಿರುವ ಮುದ್ದಾದ ಮಗು ನನ್ನ ಕಿರಿಯ ಸಹೋದರ ಶ್ರೀಧರ್ ಮರಿಯಾಳ”  ಮತ್ತು ಅವರ ಸಹೋದರಿ ತಂದೆಯ ಕುಳಿತಿದ್ದಾರೆ, ಮತ್ತು ಮರಿಯಾಲ ಶ್ರೀನಿವಾಸ್‌ ಸ್ವತಃ ಮಧ್ಯದಲ್ಲಿ ಕುಳಿತಿದ್ದಾರೆ ಎಂದು ಫೋಟೋದೊಂದಿಗೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಮರಿಯಾಲ ಶ್ರೀನಿವಾಸ್ ಕುಟುಂಬ
ಮರಿಯಾಲ ಶ್ರೀನಿವಾಸ್ ಕುಟುಂಬ

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ ಎಪಿಜೆ ಅಬ್ದುಲ್ ಕಲಾಂ ಅವರ ಬಾಲ್ಯದ್ದು ಎಂಬುದು ಸುಳ್ಳು. ಈ ಚಿತ್ರ ಮರಿಯಾಲ ಶ್ರೀನಿವಾಸ್ ಅವರ ಕುಟುಂಬಕ್ಕೆ ಸೇರಿದ್ದಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights