ಇರ್ಫಾನ್ ಖಾನ್ ಆರೋಗ್ಯದಲ್ಲಿ ಏರುಪೇರು; ಐಸಿಯುಗೆ ದಾಖಲು

ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಮುಂಬೈನ ಕೋಕಿಲಾಬೇನ್ ದಿರುಭಾಯಿ ಅಂಬಾನಿ ಆಸ್ಪತ್ರೆಯ ತೀವ್ರ ನಿಗಾ ಘಟಕ್ಕೆ ದಾಖಲು ಮಾಡಲಾಗಿದೆ.

ಇರ್ಫಾನ್ ಖಾನ್ ಅವರ ವಕ್ತಾರ ಇದನ್ನು ಧೃಢಪಡಿಸಿದ್ದು “ಹೌದು ಇದು ನಿಜ. ಅವರಿಗೆ ಕೋಲನ್ ಸೋಂಕು ಉಂಟಾಗಿದ್ದು ಅವರನ್ನು ಮುಂಬೈನ ಕೋಕಿಲಾಬೇನ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ಅವರನ್ನು ವೈದ್ಯರು ಗಮನಿಸುತ್ತಿದ್ದರೆ. ಅವರ ಧೃಢ ಶಕ್ತಿ ಅವರನ್ನು ಇಲ್ಲಿಯವರೆಗೂ ಹೋರಾಟದಲ್ಲಿ ಗೆಲ್ಲಿಸಿದೆ. ಅವರ ಧೃಢ ಸಂಕಲ್ಪ ಮತ್ತು ಅವರ ಹಿತೈಷಿಗಳ ಪ್ರಾರ್ಥನೆಯಿಂದ ಅವರು ಶೀಘ್ರ ಗುಣಮುಖರಾಗುವ ಭರವಸೆ ಇದೆ” ಎಂದು ಹೇಳಿರುವುದಾಗಿ ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

2018 ರಲ್ಲಿ ಇರ್ಫಾನ್ ಖಾನ್ ಅವರಿಗೆ ನ್ಯೂರೋಎಂಡೋಕ್ರೇನ್ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಅವರು ಅದಕ್ಕೆ ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇರ್ಫಾನ್ ಖಾನ್ ಅವರು ಇತ್ತೀಚಿಗೆ ಅಂಗ್ರೇಜಿ ಮೀಡಿಯಮ್ ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅನಾರೋಗ್ಯದಿಂದ ಆ ಚಿತ್ರದ ಪ್ರಚಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರ ತಾಯಿ ಸಯೀದ ಬೇಗಂ (95) ಜೈಪುರದಲ್ಲಿ ಶನಿವಾರ ತೀರಿಕೊಂಡಿದ್ದರು. ಇರ್ಫಾನ್ ಅವರಿಗೆ ರಾಷ್ಟ್ರವ್ಯಾಪಿ ಲಾಕ್ ಡೌನ್ ನಿಂದ ತಾಯಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights