ಕಣ್ಮನ ಸೂರೆಗೊಂಡ ಬಾನಂಗಳ- ಜನ ತಲೆ ಎತ್ತಿ ನೋಡುವಂತೆ ಮಾಡಿದ ಶ್ರೀ ಸಿದ್ಧರಾಮೇಶ್ವರ ಜಾತ್ರೆ

ಶ್ರೀ ಸಿದ್ಧೇಶ್ವರ ಜಾತ್ರೆಯ ಅಂಗವಾಗಿ ವಿಜಯಪುರದಲ್ಲಿ ನಡೆದ ಸಿಡಿಮದ್ದು ಪ್ರದರ್ಶನ ಜನಮನ ಸೂರೆಗೊಂಡಿತು.

ವಿಜಯಪುರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಾಣ ಬಿರುಸುಳ ಪ್ರದರ್ಶನ ಬಾನಿನಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿದವು. ವಿಜಯಪುರ ನಗರದ ಪ್ರತಿಷ್ಛಿತ ಶ್ರೀ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಚಿತ್ರ ವಿಚಿತ್ರ ಮದ್ದು ಸುಡುವ ಕಾರ್ಯಕ್ರಮ ನಡೆಯಿತು.

           

ವಿಜಯಪುರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ, ಈ ಕಾರ್ಯಕ್ರಮಕ್ಕೆ ಸಿಎಂ ಬಿ. ಎಸ್. ಯಡಿಯೂರಪ್ಪ ಬರಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಕೊನೆ ಘಳಿಗೆಯಲ್ಲಿ ಅವರ ಭೇಟಿ ರದ್ದಾಯಿತು. ಮುಂಬರುವ ದಿನಗಳಲ್ಲಿ ಸಿಎಂ ರನ್ನು ಕರೆಯಿಸಿ ವಿಜಯಪು ನಗರ ಮತಕ್ಷೇತ್ರದ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಆಕರ್ಷಕ ಚಿತ್ರ ವಿಚಿತ್ರ ಸುಡುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ವೀಕ್ಷಿಸಲು ವಿಜಯಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಸಹಸ್ರಾರು ಜನ ಸೇರಿದ್ದರು. ಬಾನಿಗೆ ನೆಗೆಯುತ್ತಿದ್ದ ಸಿಡಿಮದ್ದುಗಳು ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಮೂಡಿಸಸುತ್ತಿದ್ದರೆ, ಅಲ್ಲಿ ನೆರೆದ ಜನ ಈ ದೃಷ್ಯಗಳನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದು ಕೆಕೆ ಹಾಕುತ್ತಿದ್ದ ದೃಷ್ಯ ಈ ಕಾರ್ಯಕ್ರಮದ ಜನಪ್ರೀಯತೆಗೆ ಸಾಕ್ಷಿಯಾಗಿ್ತತು.

ತರಹೇವಾರಿ ಮಾದರಿಗಳು ರಂಗು ರಂಗೀನ ಬೆಳಕು ಚೆಲ್ಲಿ ಇಡೀ ವಿಜಯಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಬಣ್ಣಬಣ್ಣದ ವಾತಾವರಣ ಸೃಷ್ಠಿಸಿದ್ದು ವಿಶೇಷವಾಗಿತ್ತು. ಓಂ, ಶ್ರೀ ಸಿದ್ಧೇಶ್ವರ ದೇವಸ್ಥಾನ, ಕಮಲ ಸೇರಿದಂತೆ ನಾನಾ ಮಾದರಿಗಳು ಜನಮನ ಸೂರೆಗೊಂಡವು.

ಸುಮಾರು 45 ನಿಮಿಷ ನಡೆದ ಈ ಕಾರ್ಯಕ್ರಮ ಬಾನಂಗಳದಲ್ಲಿ ವಿಸ್ಮಯ ಲೋಕವನ್ನೇ ಸೃಷ್ಠಿಸಿತ್ತು. ಕಳೆದ ಸುಮಾರು ಒಂದು ಶತಮಾನದಿಂದ ಈ ಮದ್ದು ಸುಡುವ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆಂದೆ ಸಹಸ್ರಾರ ಸಂಖೆಯಲ್ಲಿ ಜನ ಆಗಮಿಸುತ್ತಾರೆ. ಪ್ರತಿವರ್ಷ ಮಕರ ಸಂಕ್ರಾಂತಿ ಅಂಗವಾಗಿ ವಿಜಯಪುರ ನಗರದ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನದ ಜಾತ್ರೆ ನಡೆಯುತ್ತದೆ. ಈ ಜಾತ್ರೆ ವಿಜಯಪುರ ನಗರವಷ್ಟೇ ಅಲ್ಲ, ಇಡೀ ಜಿಲ್ಲೆಯ ನಾನಾ ಗ್ರಾಮಗಳು, ನೆರೆಯ ಜಿಲ್ಲೆಗಳ ಜನರೂ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನದ ಜಾತ್ರೆಗೆ ಆಗಮಿಸುತ್ತಾರೆ.

ಈ ಜಾತ್ರೆಯ ಅಂಗವಾಗಿ ನಡೆಯವು ದನಗಳ ಜಾತ್ರೆಯಲ್ಲಿ ಗ್ರಾಮೀಣ ಭಾಗದಿಂದ ರೈತರೇ ಹೆಚ್ಚಿನ ಸಂಖ್ಯೆಲ್ಲಿ ಬರುವುದರಿಂದ ಮದ್ದು ಸುಡುವ ಕಾರ್ಯಕ್ರಮಕ್ಕೂ ಮಣ್ಣಿನ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಈ ಕಾರ್ಯಕ್ರಮಕ್ಕೆ ವಿಶೇಷ ಮಹತ್ವವಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights