ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಅಳಿವು-ಉಳಿವಿನ ಕ್ಷಣಗಣನೆ ಆರಂಭ: ಡೀಟೇಲ್ಸ್‌

ರಾಜಸ್ಥಾನದ ರಾಜಕೀಯಕ್ಕೆ ಇಂದು ಮಹತ್ವದ ತಿರುವು ಪಡೆಯಲಿದೆ. ಇಂದು ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಅಳಿವು-ಉಳಿವಿನ ಕ್ಷಣಗಣನೆ ಆರಂಭವಾಗಿದೆ. ಇಂದು ಅಧಿವೇಶನ ಆರಂಭವಾಗಿದ್ದು, ಬಿಜೆಪಿಯ ಅವಿಶ್ವಾಸ ನಿರ್ಣಯವನ್ನು ಎದುರಿಸಲು ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜಸ್ಥಾನ ವಿಧಾನಸಭೆಯಲ್ಲಿ ವಿಶ್ವಾಸಾರ್ಹ ನಿರ್ಣಯ ಮಂಡಿಸಲಿದೆ.

ಕಾಂಗ್ರೆಸ್‌ನ ಹೈಕಮಾಂಡ್‌ ಸಚಿನ್ ಗೆಹ್ಲೋಟ್ ಮತ್ತು ಇತರ 18 ಬಂಡಾಯ ಶಾಸಕರನ್ನು ಪಕ್ಷಕ್ಕೆ ಮರಳಿಸುವುದಾಗಿ ಘೋಷಿಸಿದ ಕೆಲವೇ ದಿನಗಳ ನಂತರ ಈ ಅಧಿವೇಶನ ನಡೆಯುತ್ತಿದ್ದು, ಕೌತುಕ ಮೂಢಿಸಿದೆ.

ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಿದ್ದು, ಅಧಿವೇಶದಲ್ಲಿ ಭಾಗಿಯಾಗುವುದಕ್ಕೂ ಮುನ್ನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು, “ಇಂದು ವಿಧಾನಸಭೆ ಅಧಿವೇಶನ ಪ್ರಾರಂಭವಾಗುತ್ತಿದೆ, ಇದು ರಾಜಸ್ಥಾನದ ಜನರ ವಿಜಯ ಮತ್ತು ನಮ್ಮ ಕಾಂಗ್ರೆಸ್ ಶಾಸಕರ ಐಕ್ಯತೆಯಾಗಿರುತ್ತದೆ, ಇದು ಸತ್ಯದ ವಿಜಯವಾಗಲಿದೆ: ಸತ್ಯಮೇವ್ ಜಯತೆ,” ಎಂದು ಟ್ವೀಟ್‌ ಮಾಡಿದ್ದಾರೆ.

“ನಾವು ವಿಶ್ವಾಸ ಮತವನ್ನು ಯಾಚಿಸಲಿದ್ದೇವೆ. ನಮಗೆ ದೊಡ್ಡ ಬಹುಮತವಿದೆ. ನಾವು ಜಯಿಸುತ್ತೇವೆ” ಎಂದು ರಾಜಸ್ಥಾನ ಸಚಿವ ಶಾಂತಿ ಧಾರಿವಾಲ್ ಹೇಳಿದ್ದಾರೆ.

ಗುರುವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್‌ ಪೈಲಟ್‌ ಭೇಟಿ ಮಾಡಿದ್ದು, ವಿಧಾನಸಭೆ ಅಧಿವೇಶನಕ್ಕೆ ಮುಂಚಿತವಾಗಿ ರಾಜ್ಯದ ಎರಡು ಪಕ್ಷದ ಬಣಗಳ ನಡುವಿನ ಹೊಂದಾಣಿಕೆಯನ್ನು ಸಾಧಿಸಲಾಗಿದೆ ಎಂದು ಹೇಳಿಲಾಗಿದ್ದು,  ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದ ಇಬ್ಬರು ಶಾಸಕರಾದ ಭನ್ವರ್ಲಾಲ್ ಶರ್ಮಾ ಮತ್ತು ವಿಶ್ವವೇಂದ್ರ ಸಿಂಗ್ ಅವರ ಅಮಾನತನ್ನು ಕಾಂಗ್ರೆಸ್ ಗುರುವಾರ ರದ್ದುಪಡಿಸಿದ್ದು, ಅವರ ಮತವೂ ಗಣನೆಗೆ ಬರಲಿದೆ.

ಇದೆಲ್ಲದರ ನಡುವೆ, ಬಿಎಸ್‌ಪಿಯ ಆರು ಶಾಸಕರನ್ನು ಕಾಂಗ್ರೆಸ್ ವಿಲೀನಗೊಳಿಸುವುದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಮದನ್ ದಿಲಾವರ್ ಮತ್ತು ಬಿಎಸ್‌ಪಿ ಸಲ್ಲಿಸಿದ್ದ ಅರ್ಜಿಗಳನ್ನು ರಾಜಸ್ಥಾನ್ ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದ್ದು, ವಿಚಾರಣೆಯ ನಂತರದಲ್ಲಿ ಅಧಿವೇಶನ ಆರಂಭಿಸುವ ಉದ್ದೇಶದಿಂದ ಅಧಿವೇಶನವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಲಾಗಿದೆ.

“ಸಚಿನ್ ಪೈಲಟ್ ಮತ್ತು ಅವರ ಬೆಂಬಲಿತ ಬಂಡಾಯ ಶಾಸಕರು ಇಲ್ಲದೆ ನಾವು ಬಹುಮತವನ್ನು ಸಾಬೀತುಪಡಿಸಬಹುದಿತ್ತು. ಆದರೆ, ಅದು ನಮಗೆ ಸಂತೋಷವನ್ನು ನೀಡುತ್ತಿರಲಿಲ್ಲ. ಅವರನ್ನೂ ಒಳಗೊಂಡು ನಾವು ವಿಶ್ವಾಸ ಮತವನ್ನು ಸಾಬೀತು ಪಡಿಸುತ್ತೇವೆ” ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಿಎಲ್‌ಪಿ ಸಭೆಯಲ್ಲಿ ಹೇಳಿದ್ದರು.


ಇದನ್ನೂ ಓದಿ: ರಾಜಸ್ಥಾನ: ವಿಶ್ವಾಸಾರ್ಹ ಮತಕ್ಕಾಗಿ ಅಶೋಕ್ ಗೆಹ್ಲೋಟ್ ಹ್ಯಾಂಡ್‌ ಶೇಕ್‌ನೊಂದಿಗೆ ಒಪ್ಪಂದ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights