ಫ್ಯಾಕ್ಟ್ ಚೆಕ್: ನಟ ಸುಶಾಂತ್ ಸಿಂಗ್ ಸಾವಿನ ಕೊನೆಯ ಕ್ಷಣದ ಫೋಟೋ ವೈರಲ್?

ಬಾಲಿವುಡ್‌ನ ಪ್ರಸಿದ್ಧ ನಟ, ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅವರ ಸಾವಿನ ಕೊನೆಯ ಕ್ಷಣಗಳದ್ದು ಎಂದು ಪ್ರತಿಪಾದಿಸಿ ಫೇಸ್‌ಬುಕ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋವೊಂದನ್ನು ಭಾರಿ ಪ್ರಮಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

We found out that the image was generated using AI.

ಆರ್‌ಎಸ್‌ ಲೋಧಿ ರಜಪೂತ್ ಎಂಬ ಫೇಸ್‌ಬುಕ್‌ ಖಾತೆದಾರರು ಇದೇ ಸೆಪ್ಟೆಂಬರ್ 18ರಂದು ಹಂಚಿಕೊಂಡಿರುವ ಈ ಚಿತ್ರದಲ್ಲಿ, ಮಲಗುವ ಕೊಠಡಿಯೊಂದರಲ್ಲಿ ಸುಶಾಂತ್ ಸಿಂಗ್ ರಜಪೂತ್ ಮೊಣಕಾಲೂರಿ ಕುಳಿತಿದ್ದು, ಅವರ ಹಿಂದೆ ನಿಂತಿರುವ ಮಹಿಳೆಯೊಬ್ಬರು ಕೈಯನ್ನು ಹಿಡಿದುಕೊಂಡಿದ್ದಾರೆ ಹಾಗೂ ಪಕ್ಕದಲ್ಲೇ ಮತ್ತೊಬ್ಬ ವ್ಯಕ್ತಿ ನಿಂತಿರುವುದು ಕಾಣಿಸುತ್ತದೆ. ಇದು ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಕ್ಷಣದ ರಿಯಲ್ ಫೋಟೊ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ಚಿತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ಲೆನ್ಸ್ (Google Lens) ಬಳಸಿ ರಿವರ್ಸ್ ಇಮೇಜ್ ಸರ್ಚ್ ನಡೆಸಲಾಯಿತು. ಈ ವೇಳೆ ಇದೇ ರೀತಿಯ ತಪ್ಪು ಮತ್ತು ದಾರಿತಪ್ಪಿಸುವ ಶೀರ್ಷಿಕೆಗಳೊಂದಿಗೆ ಹಲವು ಫೇಸ್‌ಬುಕ್ ಹಾಗೂ ಎಕ್ಸ್ (ಟ್ವಿಟರ್) ಬಳಕೆದಾರರು ಫೋಟೋವನ್ನು ಹಂಚಿಕೊಂಡಿರುವುದು ಲಭ್ಯವಾಗಿದೆ.

We found out that the image was generated using AI.

ಆದರೆ, ಈ ಕುರಿತು ಪ್ರಮುಖ ಮಾಧ್ಯಮಗಳಲ್ಲಾಗಲಿ ಅಥವಾ ತನಿಖಾ ಸಂಸ್ಥೆಗಳ ಅಧಿಕೃತ ವರದಿಗಳಲ್ಲಾಗಲಿ ಇಂತಹ ಯಾವುದೇ ಚಿತ್ರ ಪತ್ತೆಯಾಗಿಲ್ಲ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿದ್ದ ವ್ಯಕ್ತಿಗಳ ಶರೀರದ ವಿನ್ಯಾಸ, ಬೆರಳುಗಳು ಹಾಗೂ ಮುಖದ ಭಾವಗಳು ಅಸಹಜವಾಗಿದ್ದವು.

We found out that the image was generated using AI.

ಇದು ಎಐ ನಿರ್ಮಿತ ಫೋಟೋ ಇರಬಹುದು ಎಂಬ ಅನುಮಾನದ ಮೇಲೆ ಪಿಟಿಐ (PTI) ಫ್ಯಾಕ್ಟ್‌ಚೆಕ್ ಟೀಮ್ ಹಾಗೂ ಇತರ ಪರಿಶೀಲನಾ ಉಪಕರಣಗಳಾದ AI or Not, DeepAI, TruthScan ಮತ್ತು Was It AI ಮುಂತಾದ ಕೃತಕ ಬುದ್ಧಿಮತ್ತೆ ಪತ್ತೆ ಹಚ್ಚುವ ಸಾಧನಗಳ ಮೂಲಕ (AI Detection Tools) ತನಿಖೆಗೆ ಒಳಪಡಿಸಲಾಯಿತು. ಈ ಉಪಕರಣಗಳ ವಿಶ್ಲೇಷಣೆಯಲ್ಲಿ ವೈರಲ್ ಆಗಿರುವ ಚಿತ್ರವು ನೂರಕ್ಕೆ ನೂರರಷ್ಟು ‘ಎಐ ಜೆನೆರೇಟೆಡ್’ (AI-generated) ಎಂಬುದು ದೃಢಪಟ್ಟಿದೆ.

We found out that the image was generated using AI.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣಗಳಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಕ್ಷಣದ್ದು ಎಂದು ಬಿಂಬಿಸಲಾಗುತ್ತಿರುವ ಫೋಟೋ ಯಾವುದೇ ನೈಜ ಘಟನೆಯದ್ದಲ್ಲ. ಬದಲಿಗೆ, ಸಾರ್ವಜನಿಕರನ್ನು ದಾರಿತಪ್ಪಿಸಲು ಎಐ (AI) ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾದ ನಕಲಿ ಚಿತ್ರವಾಗಿದೆ. ಇಂತಹ ಅಪಪ್ರಚಾರದ ಪೋಸ್ಟ್‌ಗಳನ್ನು ಹಂಚಿಕೊಳ್ಳಬೇಡಿ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights