ಪ್ರಯೋಜನವಾಯ್ತಾ 30 ದಿನಗಳ ಲಾಕ್‍ಡೌನ್..? ಕೊರೊನಾ ಪ್ರಕರಣಗಳ ಅಂಕಿ-ಅಂಶ ಇಲ್ಲಿದೆ…

ಕೊರೊನಾ ತಡೆಗೆ ದೇಶದೆಲ್ಲೆಡೆ ಲಾಕ್ವ ಡೌನ್ ಜಾರಿಯಾಗಿ ಒಂದು ತಿಂಗಳು ಕಳೆದಿದೆ. ಆದರೆ ಲಾಕ್ ಡೌನ್ ಜಾರಿಯಾದಾಗಿನಿಂದ ಕಡಿಮೆಯಾಗಬೇಕಿದ್ದ ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.

ಹೌದು… ದೇಶದಲ್ಲಿ ಇಪ್ಪತ್ತು ಸಾವಿರ ಗಡಿದಾಟಿದ ಹೆಮ್ಮಾರಿ ಒಂದು ವೇಳೆ ಲಾಕ್ ಡೌನ್ ಮಾಡದಿದ್ದರೆ ಅದೆಷ್ಟು ಅನಾಹುತವನ್ನ ಸೃಷ್ಟಿಮಾಡ್ತಾಯಿತ್ತೋ ಏನೋ..? ಸಮಯಕ್ಕೆ ಸರಿಯಾಗಿ ದೇಶದಲ್ಲಿ ಲಾಕ್ ಡೌನ್ ಕೈಗೊಂಡು ಕೊರೊನಾ ನಿಯಂತ್ರಣಕ್ಕೆ ತರುವಲ್ಲಿ ಮೋದಿ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಕೊರೊನಾ ನಿರ್ವಹಣೆಯಲ್ಲಿ ಮೋದಿ ನಂಬರ್ ಒನ್ ಎನಿಸಿಕೊಂಡಿದ್ದಾರೆ. ಹಾಗಾದ್ರೆ ಈ 30 ದಿನದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದಿಯಾ..? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಮಾರ್ಚ್ 24 ರಾತ್ರಿ ಮಾತನಾಡಿದ ಮೋದಿ ಇಡೀ ದೇಶದಲ್ಲಿ 21 ದಿನಗಳ ವರೆಗೂ ಲಾಕ್ ಡೌನ್ ಘೋಷಣೆ ಮಾಡಿದ್ರು. ಪುನ: ಏಪ್ರಿಲ್ 14ರಿಂದ ಮೇ 3ರವರೆಗೆ ಲಾಕ್ ಡೌನ್ ಮುಂದುವರೆಸಿದರು. ಹೀಗೆ 30 ದಿನಗಳು ಕಳೆದಿವೆ. ಚೀನಾ ಹಾಗೂ ಬೇರೆ ದೇಶದಲ್ಲಿ ಕೊರೊನಾ ಅಬ್ಬರಿಸಿದ ಪರಿ ನೋಡಿದ ಮೋದಿ ಕೊರೊನಾ ವಿರುದ್ಧ ಹೋರಾಡಲು 130 ಕೋಟಿ ಜನರಿಗೆ ಕರೆ ನೀಡಿದ್ದರು. ಮೋದಿ ಕೊಟ್ಟ ಕರೆಯನ್ನು ಸ್ವೀಕರಿಸಿದ ಜನ ಮೂವತ್ತು ದಿನಗಳಿಂದ ಮನೆಯಲ್ಲೇ ಇದ್ದಾರೆ. ಹಾಗಾದ್ರೆ ಕೊರೊನಾ ಕಡಿಮೆಯಾಗಿದಿಯಾ..? ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಲಾಕ್‍ಡೌನ್ ಘೋಷಣೆಯಾದ ದಿನ ಅಂದರೆ ಮಾರ್ಚ್ 24 ರಂದು ದೇಶದಲ್ಲಿ 519 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು, 10 ಮಂದಿ ಸಾವನ್ನಪ್ಪಿದ್ದರು.
* ಮಾರ್ಚ್ 30ರ ವೇಳೆಗೆ 1251 ಕ್ಕೆ ತಲುಪಿ 32 ಮಂದಿ ಕೊರೊನಾಗೆ ಬಲಿಯಾಗಿದ್ದರು.
* ಎಪ್ರಿಲ್ 6ಕ್ಕೆ ದೇಶದಲ್ಲಿ ಸೋಂಕು ಹರಡುವಿಕೆ ಪ್ರಮಾಣ 20% ಏರಿಕೆಯಾಗಿ 4,281 ಪ್ರಕರಣಗಳು ದಾಖಲಾಗಿ 111 ಮಂದಿ ಅಸುನೀಗಿದ್ದರು.
* ಎಪ್ರಿಲ್ 12 ರಂದು 8,447 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು 273 ಮಂದಿ ಕೊರೊನಾ ಮಾರಿಗೆ ಉಸಿರು ಚೆಲ್ಲಿದ್ದರು.
* ಲಾಕ್‍ಡೌನ್ ವಿಸ್ತರಣೆಯಾದ ಬಳಿಕ ಎಪ್ರಿಲ್ 18ಕ್ಕೆ ದೇಶದಲ್ಲಿ 14,792 ಮಂದಿಯಲ್ಲಿ ಕೊರೊನಾ ಕಾಣಸಿಕೊಂಡಿದಲ್ಲದೇ 488 ಬಲಿ ಪಡೆದುಕೊಂಡಿತ್ತು.
* ಇನ್ನು ನಿನ್ನೆ ಅಂಕಿಅಂಶಗಳನ್ನು ನೋಡಿದ್ರೆ ಒಟ್ಟು 20,471 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 652 ಮಂದಿ ಸಾವನ್ನಪ್ಪಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಲಾಕ್‍ಡೌನ್ ಬಳಿಕ ಪ್ರತಿನಿತ್ಯ 8% ರಿಂದ 12% ಸೋಂಕು ಹೆಚ್ಚು ಕಂಡು ಬರ್ತಿದೆ ಮತ್ತು ಸಾವನ್ನಪ್ಪಿವವರ ಪ್ರಮಾಣ 8%- 20% ಎಂದು ಹೇಳಿದೆ. ಈ ನಡುವೆ ಲಾಕ್‍ಡೌನ್ ಗಿಂತ ಮುಂಚೆ ಪ್ರತಿ 3-5 ದಿನಕ್ಕೆ ದುಪ್ಪಟ್ಟಾಗುತ್ತಿದ್ದ ಸೋಂಕಿತರ ಸಂಖ್ಯೆ ಈಗ 8-10 ದಿನ ಏರಿಕೆಯಾಗಿದೆಯಂತೆ. ಹೀಗಾಗಿ ಲಾಕ್‍ಡೌನ್ ಭಾರತದಲ್ಲಿ ಉತ್ತಮವಾಗಿದ್ದು, ಸೋಂಕು ಹತೋಟಿಯಲ್ಲಿದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಅಲ್ಲದೇ ಲಾಕ್‍ಡೌನ್ ಮುಂದುವರಿಸುವ ಸಲಹೆ ಕೂಡಾ ನೀಡಿದೆ. ಹೀಗಾಗಿ ಮೇ 3 ಬಳಿಕವೂ ಲಾಕ್ ಡೌನ್ ಮುಂದುವರಿಸುವ ಸಾಧ್ಯತೆ ಎನ್ನಲಾಗುತ್ತಿದೆ.

ಕೊರೊನಾ ವೈರಸ್ ನಿಭಾಯಿಸುತ್ತಿರುವ ದೇಶಗಳ ಪೈಕಿ ಜಾಗತಿಕ ಮಟ್ಟದಲ್ಲಿ ಭಾರತ ಬೆಸ್ಟ್ ಎನಿಸಿಕೊಂಡಿದೆ. ಅಲ್ಲದೇ ಕೊರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಪ್ರಧಾನಿ ಅತ್ಯುತ್ತಮ ಎಸಿಕೊಂಡಿದ್ದಾರೆ. ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ, ವಿಶ್ವದ 10 ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.ಈ ಅಂಶವನ್ನು ಹಣಕಾಸು ಸಚಿವ ನಿರ್ಮಲ ಸೀತರಾಮನ್ ಟ್ವೀಟ್ ಮಾಡಿದ್ದಾರೆ.

ಬೋರಿಸ್ ಜಾನ್ಸನ್-ಬ್ರಿಟನ್-35

ಸ್ಕಾಟ್ ಮೊರಿಸನ್ –ಆಸ್ಟ್ರೇಲಿಯಾ-26

ಜಸ್ಟಿನ್ ಟ್ರುಡೆ-ಕೆನಡಾ-21

ಡೊನಾಲ್ಡ್ ಟ್ರಂಪ್-ಅಮೆರಿಕಾ-3

ಇಮ್ಯಾನ್ಯುವೆಲ್ –ಮ್ಯಾಕ್ರಾನ್ ಫ್ರಾನ್ಸ್-25

ಶಿಂಜೋ-ಅಬೆ ಜಪಾನ್-33

https://twitter.com/nsitharaman/status/1252877038324613121

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights