ಹಬ್ಬದ ಆಚರಣೆಗೆ ಕೊರೊನಾ ಕರಿ ನೆರಳು : ದೆಹಲಿಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ನಿಷೇಧ..!

ಗಣೇಶ ಹಬ್ಬದ ಆಚರಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಹತ್ವದ ಆದೇಶವನ್ನು ಹೊರಡಿಸಿದೆ. ಕೋವಿಡ್ -19 ಕಾರಣದಿಂದ ದೆಹಲಿಯಲ್ಲಿ ಗಣೇಶ ಹಬ್ಬದ ಸಾರ್ವಜನಿಕ ಆಚರಣೆಗೆ ಡಿಡಿಎಂಎ ನಿಷೇಧ ಹೇರಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ದೆಹಲಿಯಲ್ಲಿ ಗಣೇಶ ಚತುರ್ಥಿ ಹಬ್ಬದ ಎಲ್ಲಾ ಸಾರ್ವಜನಿಕ ಆಚರಣೆಗಳನ್ನು ನಿಷೇಧಿಸಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಬುಧವಾರ ಆದೇಶ ಹೊರಡಿಸಿದೆ.

“ಗಣೇಶ ಚತುರ್ಥಿ ಆಚರಣೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿಸಲಾಗುವುದಿಲ್ಲ ಮತ್ತು ಜನರು ತಮ್ಮ ಮನೆಯಲ್ಲಿ ಮಾತ್ರ ಹಬ್ಬವನ್ನು ಆಚರಿಸಬಹುದು” ಎಂದು ಡಿಡಿಎಂಎ ಆದೇಶಿದೆ.

ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಗುಂಪು ಸೇರುವಂತಿಲ್ಲ. ಪೆಂಡಲ್‌ಗಳು ಅಥವಾ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿಗಳನ್ನು ಸ್ಥಾಪಿಸದಂತೆ ಮತ್ತು ಮೆರವಣಿಗೆಗಳು ನಡೆಯದಂತೆ ತಡೆಯಲು ಅಧಿಕಾರಿಗಳಿಗೆ ಅಧಿಕಾರ ವಹಿಸಲಾಗಿದೆ. ಹಬ್ಬವನ್ನು ಆಚರಿಸಲು ಇಚ್ಛಿಸುವ ದೆಹಲಿಯ ನಾಗರಿಕರು ತಮ್ಮ ಮನೆಗಳಲ್ಲಿ ಪೂಜೆಗಳನ್ನು ಮಾಡಲು ಅನುಮತಿಸಲಾಗಿದೆ.

ಗಣೇಶ ಚತುರ್ಥಿಯ ಮೊದಲು ಧಾರ್ಮಿಕ ಮತ್ತು ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಪೊಲೀಸ್ ಉಪ ಆಯುಕ್ತರು ಡಿಡಿಎಂಎ ಆದೇಶವನ್ನು ಅನುಸರುವಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಜನಸಾಮಾನ್ಯರು ಕೂಡ ಆದೇಶವನ್ನು ಪಾಲಿಸಿ ಇದರ ಬಗ್ಗೆ ಜಾಗೃತಿ ಮೂಡಿಸಲು ಕೋರಲಾಗಿದೆ.

ಆದೇಶದ ಉಲ್ಲಂಘನೆ ಮಾಡಿದಲ್ಲಿ ದಂಡ ವಿಧಿಸಲು ಆದೇಶಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights