ವ್ಯಕ್ತಿಯೋರ್ವನ ಜೀವ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ರಷ್ಯಾದ ಸಚಿವ..!
ವ್ಯಕ್ತಿಯೋರ್ವನ ಜೀವ ಉಳಿಸಲು ಹೋಗಿ ಸಚಿವರೊಬ್ಬರು ಪ್ರಾಣ ಕಳೆದುಕೊಂಡ ಘಟನೆ ರಷ್ಯಾದಲ್ಲಿ ನಡೆದಿದೆ.
ರಷ್ಯಾದ ತುರ್ತು ಸಚಿವ ಯೆವ್ಗೆನಿ ಜಿನಿಚೇವ್ ದುರಂತ ಸಾವನ್ನಪ್ಪಿದ್ದಾರೆ. ಆರ್ಕ್ಟಿಕ್ನಲ್ಲಿ ವ್ಯಾಯಾಮದ ತರಬೇತಿ ವೇಳೆ ಓರ್ವನ ಜೀವವನ್ನು ಉಳಿಸಲು ಹೋಗಿ ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಆರ್ಐಎ ವರದಿ ಮಾಡಿದೆ.