ಗುಜರಾತ್ ನಲ್ಲಿ ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಪ್ರಕರಣಗಳು 110% ರಷ್ಟು ಹೆಚ್ಚಳ..!
ಗುಜರಾತ್ ನಲ್ಲಿ ಜನವರಿಯಿಂದ ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಪ್ರಕರಣಗಳು 110% ಹೆಚ್ಚಾಗಿದೆ.
ಕೋವಿಡ್ -19 ವಿರುದ್ಧ ಹೋರಾಟದ ಮಧ್ಯೆ ಗುಜರಾತ್ನ ಕೆಲವು ಭಾಗಗಳು ಡೆಂಗ್ಯೂ, ಚಿಕೂನ್ ಗುನ್ಯಾ ಮತ್ತು ಮಲೇರಿಯಾ ಪ್ರಕರಣಗಳನ್ನು ಎದುರಿಸುತ್ತಿವೆ. ಇತ್ತೀಚಿನ ಮಾಹಿತಿಯ ಪ್ರಕಾರ, ಜನವರಿ 20 ರಿಂದ ಸೆಪ್ಟೆಂಬರ್ 4 ರವರೆಗೆ ರಾಜ್ಯದಲ್ಲಿ ಡೆಂಗ್ಯೂ, ಚಿಕೂನ್ ಗುನ್ಯಾ ಮತ್ತು ಮಲೇರಿಯಾ ಪ್ರಕರಣಗಳು ಶೇ 110 ರಷ್ಟು ಹೆಚ್ಚಾಗಿದೆ.
ಅಹಮದಾಬಾದ್ ಪುರಸಭೆಯ ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಜನವರಿ 20 ರಿಂದ ಸೆಪ್ಟೆಂಬರ್ 4 ರವರೆಗೆ ನಗರದಲ್ಲಿ 255 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಆದರೆ ಈ ವರ್ಷ ಅದೇ ಅವಧಿಯ ಅಂಕಿ ಅಂಶವನ್ನು ನೋಡಿದಾಗ ಪ್ರಕರಣಗಳ ಸಂಖ್ಯೆ 684ರಷ್ಟಿದೆ. ಚಿಕೂನ್ ಗುನ್ಯಾ ಪ್ರಕರಣಗಳು, ಕಳೆದ ವರ್ಷ 196 ದಾಖಲಾಗಿದ್ದರೆ ಈ ವರ್ಷಕ್ಕೆ 412ರಷ್ಟು ದಾಖಲಾಗಿವೆ.
ಕಳೆದ ವರ್ಷದ ಅಂಕಿಅಂಶಗಳಿಗೆ ಹೋಲಿಸಿದರೆ ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಡೆಂಗ್ಯೂ ಪ್ರಕರಣಗಳು ಶೇಕಡಾ 58.3 ರಷ್ಟು ಹೆಚ್ಚಾಗಿದೆ. ಎಎಮ್ಸಿ ಅಂಕಿಅಂಶಗಳು ತೋರಿಸಿದಂತೆ ಈ ಅವಧಿಯಲ್ಲಿ ನೀರಿನಿಂದ ಬರುವ ರೋಗಗಳು ಕೂಡ ಹೆಚ್ಚಾಗಿದೆ. ಜನವರಿ 21 ರಿಂದ ಸೆಪ್ಟೆಂಬರ್ 4 ರವರೆಗೆ ನಗರದಲ್ಲಿ ಒಟ್ಟು 64 ಕಾಲರಾ ಪ್ರಕರಣಗಳು ದಾಖಲಾಗಿವೆ. ಆದರೆ ಕಳೆದ ವರ್ಷ ಯಾವುದೇ ಕಾಲರಾ ಪ್ರಕರಣಗಳು ಇರಲಿಲ್ಲ.
ಅಹಮದಾಬಾದ್, ಜಾಮ್ ನಗರ, ರಾಜಕೋಟ್ ಮತ್ತು ವಡೋದರಾ ಸೇರಿದಂತೆ ಗುಜರಾತಿನ ಕೆಲವು ಭಾಗಗಳಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಹೆಚ್ಚುತ್ತಿವೆ.
ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಸೋಂಕು ಹೆಚ್ಚುತ್ತಿರುವುದು ರಾಜ್ಯದ ಕೆಲವು ಭಾಗಗಳಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಗೆ ಎದ್ದು ಕಾಣುತ್ತಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
200 ಕ್ಕೂ ಹೆಚ್ಚು ರೋಗಿಗಳು ಪ್ರಸ್ತುತ ಕಾಲೋಚಿತ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು ವಡೋದರಾ, ಸಯಾಜಿ ಆಸ್ಪತ್ರೆಯಲ್ಲಿ ಹಾಸಿಗೆಗಳು ಲಭ್ಯವಿಲ್ಲ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಅಹಮದಾಬಾದ್ನ ಮೆಡಿಸಿಟಿ ಸಿವಿಲ್ ಹಾಸ್ಪಿಟಲ್ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ರಾಕೇಶ್ ಜೋಶಿ ಅವರು ಮಾತನಾಡಿ, ಜ್ವರ ಮತ್ತು ವೈರಲ್ ಸೋಂಕಿನಿಂದ ಅನೇಕ ರೋಗಿಗಳು ಏಕಾಏಕಿ ಆಸ್ಪತ್ರೆಗಳಿಗೆ ಬರುತ್ತಿರುವುದರಿಂದ ದಾಖಲಾತಿ ಸಮಸ್ಯೆಯಾಗುತ್ತಿದೆ. ಜನರು ರೋಗಗಳ ಬಗ್ಗೆ ಹೆಚ್ಚು ಜಾಗೃತರಾಗಬೇಕು. ಡೆಂಗ್ಯೂ ಮತ್ತು ಚಿಕೂನ್ ಗುನ್ಯಾಗೆ ಮುನ್ನೆಚ್ಚರಿಕೆಯಾಗಿ ತಮ್ಮ ಮನೆಗಳನ್ನು ಮತ್ತು ಪ್ರದೇಶಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದರು.

