ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳ ಜಂಟಿ ತರಬೇತಿಗೆ ಭಾರತೀಯ ಮಿಲಿಟರಿ ಚಿಂತನೆ

ಭಾರತೀಯ ಮಿಲಿಟರಿ ಪಡೆಯು ತನ್ನ ಮೂರು ಶಾಖೆಗಳಾದ ನೌಕಾಪಡೆ, ಭೂಸೇನೆ ಮತ್ತು ವಾಯುಪಡೆಗಳಿಗೆ ಒಂದೇ ಸ್ಥಳದಲ್ಲಿ ತರಬೇತಿ ನಡೆಸುವ ಹೊಸ ಕಾರ್ಯತಂತ್ರದ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಎಂದು ದಿ ಪ್ರಿಂಟ್ ವರದಿ ಮಾಡಿದೆ.

ತ್ರಿ-ಸರ್ವಿಸ್‌ ಕಮಾಂಡ್‌ಗೆ ಸ್ಥಳವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ನಾಗ್‌ಪುರವನ್ನು ಆಯ್ಕೆಯಾಗಿ ಚರ್ಚಿಸಲಾಗುತ್ತಿದೆ ಎಂದು ಉನ್ನತ ಸ್ಥಾನದಲ್ಲಿರುವ ರಕ್ಷಣಾ ಮೂಲಗಳು ತಿಳಿಸಿವೆ.

ಸೈನ್ಯವು ತನ್ನ ತರಬೇತಿ ನೆಲೆಯಾದ ಎಆರ್‌ಟಿಆರ್‌ಎಸಿಯನ್ನು ಶಿಮ್ಲಾದಿಂದ ಮೀರತ್‌ಗೆ ಸ್ಥಳಾಂತರಿಸುವ ಪ್ರಸ್ತಾಪವನ್ನು ಸದ್ಯಕ್ಕೆ ಕೈಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

“ಮೂರು ಪಡೆಗಳಿಗೆ ಜಂಟಿ ತರಬೇತಿ ನೀಡುವ ಸಾಧ್ಯತೆಯನ್ನು ಚರ್ಚಿಸಲಾಗುತ್ತಿದೆ. ಹೊಸ ತರಬೇತಿ ಕೇಂದ್ರವನ್ನು ರೂಪಿಸಲು ಈಗ ಇರುವ ತರಬೇತಿ ಕೇಂದ್ರಗಳನ್ನು ಹೇಗೆ ವಿಲೀನಗೊಳಿಸಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಸಮಯದಲ್ಲಿ ಶಿಮ್ಲಾದಿಂದ ARTRAC ಅನ್ನು ಸ್ಥಳಾಂತರಿಸುವುದು ಸಾಧ್ಯವಾಗದಿರಬಹುದು.”  ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂ ಸೇನೆಯ ತರಬೇತಿ ಕೇಂದ್ರವು ಶಿಮ್ಲಾದಲ್ಲಿದ್ದರೆ, ವಾಯುಪಡೆಯ ತರಬೇತಿ ಕೇಂದ್ರವು ಬೆಂಗಳೂರಿನಲ್ಲಿದೆ. ನೌಕಾಪಡೆಗೆ ಪ್ರತ್ಯೇಕ ತರಬೇತಿ ಕೇಂದ್ರ ಇಲ್ಲ. ನೌಕಾಪಡೆಯ ಎಲ್ಲಾ ತರಬೇತಿ-ಸಂಬಂಧಿತ ಸಂಸ್ಥೆಗಳು ದಕ್ಷಿಣ ನೌಕಾಪಡೆಯ ವ್ಯಾಪ್ತಿಗೆ ಬರುತ್ತವೆ.

ಜಂಟಿ ತರಬೇತಿ ನೀಡುವ ಕ್ರಮವು 2018ರಲ್ಲಿ ಪ್ರಾರಂಭವಾದ ಪ್ರಕ್ರಿಯೆಯ ಮುಂದುವರಿಕೆಯಾಗಿದ್ದು, ಸೇವೆಗಳ ಜಂಟಿ ಸಿದ್ಧಾಂತವನ್ನು ಸಿಬ್ಬಂದಿ ಮುಖ್ಯಸ್ಥರ ಸಮಿತಿಯ (ಸಿಒಎಸ್ಸಿ) ಮಾಜಿ ಅಧ್ಯಕ್ಷರಾದ ಅಡ್ಮಿರಲ್ ಸುನಿಲ್ ಲನ್ಬಾ ಅವರು ಆಗಿನ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಐಎಎಫ್ ಮುಖ್ಯಸ್ಥ ಬಿ.ಎಸ್ ಧನೋವಾ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದರು.

ಮೂರು ಸೇವೆಗಳ ಆಧುನೀಕರಣಕ್ಕಾಗಿ ತ್ರಿ-ಸೇವಾ ವಿಧಾನದ ಹೊರತಾಗಿಯೂ, ಜಂಟಿ ಸಿದ್ಧಾಂತವು ಸಿಬ್ಬಂದಿಗಳ ಜಂಟಿ ತರಬೇತಿ, ಏಕೀಕೃತ ಕಮಾಂಡ್‌ ಮತ್ತು ನಿಯಂತ್ರಣ ರಚನೆಯನ್ನು ಪ್ರಸ್ತಾಪಿಸಿತ್ತು.

ಜಂಟಿ ತರಬೇತಿಯ ಎಲ್ಲಾ ನೀತಿಗಳು, ವಿಧಾನಗಳು ಮತ್ತು ಸಂಬಂಧಿತ ವಿದೇಶಿ ತರಬೇತಿಯನ್ನು ಒಂದೇ ಕಚೇರಿಯಡಿಯಲ್ಲಿ ತರಲಿದೆ ಎಂದು ಹಿರಿಯ ನೌಕಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಜಂಟಿ ತರಬೇತಿ ಸೇವೆಗಳಿಗೆ ಸಾಮಾನ್ಯ ನೀತಿಯನ್ನು ಮೂರು ಸೇನೆಗಳಿಗೆ ತಲುಪಿಸಲು ಸಹಾಯ ಮಾಡುತ್ತದೆ. ಹೀಗಾಗಿ ದಕ್ಷತೆಯನ್ನು ಹೆಚ್ಚಿಸುತ್ತದೆ, ಹಣವನ್ನು ಉಳಿಸುತ್ತದೆ ಮತ್ತು ಅಂತರ-ಸೇವೆಗಳ ಆಡಳಿತಾತ್ಮಕ ಸುಲಭತೆಯನ್ನು ಹೆಚ್ಚಿಸುತ್ತದೆ” ಎಂದು ಅಧಿಕಾರಿ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights