ಜಾನ್ಸನ್ ಆ್ಯಂಡ್ ಜಾನ್ಸನ್ ಕೊರೊನಾ ಲಸಿಕೆ ಗುಣಮಟ್ಟದ ಪರಿಶೀಲನೆಯಲ್ಲಿ ವಿಫಲ!

ಜಾನ್ಸನ್ ಮತ್ತು ಜಾನ್ಸನ್ ಕೋವಿಡ್ -19 ಲಸಿಕೆ ಗುಣಮಟ್ಟದ ಪರಿಶೀಲನೆಯಲ್ಲಿ ವಿಫಲವಾಗಿದ್ದು ಬಳಕೆಗೆ ಅನರ್ಹವಾಗಿವೆ.

ಹೌದು… ಅಬ್ಯಾಚ್ ಆಫ್ ಜಾನ್ಸನ್ ಮತ್ತು ಜಾನ್ಸನ್‌ರ ಕೋವಿಡ್ -19 ಲಸಿಕೆ ಗುಣಮಟ್ಟದ ಮಾನದಂಡಗಳಲ್ಲಿ ವಿಫಲವಾಗಿದೆ. ಅದನ್ನು ಬಳಸಲಾಗುವುದಿಲ್ಲ ಎಂದು ಔಷಧ ದೈತ್ಯ ಬುಧವಾರ ಹೇಳಿದೆ.

JNJ-78436735 ಅಥವಾ Ad26.COV2.S. ಎಂದು ಕರೆಯಲ್ಪಡುವ ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಯನ್ನು ಕಂಪನಿಯ ಬೆಲ್ಜಿಯಂ ಮೂಲದ ಜಾನ್ಸೆನ್ ಫಾರ್ಮಾಸ್ಯುಟಿಕಾ ಅಭಿವೃದ್ಧಿಪಡಿಸಿದೆ. ಬೋಸ್ಟನ್​ನಲ್ಲಿರುವ ಹಾರ್ವರ್ಡ್ ವೈದ್ಯಕೀಯ ಶಾಲೆಯ ಬೋಧನಾ ಆಸ್ಪತ್ರೆಯಾದ ಬೆತ್ ಇಸ್ರೇಲ್ ಡಿಕಾನೆಸ್ ಮೆಡಿಕಲ್ ಸೆಂಟರ್ ಸಹಯೋಗದೊಂದಿಗೆ ಲಸಿಕೆ ಸಿದ್ಧಪಡಿಸಲಾಗಿದೆ.

ಯುಎಸ್​ನಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಮಿಲಿಯನ್​ಗಟ್ಟಲೆ ಅಮೆರಿಕನ್ನರು ಲಸಿಕೆ ಪಡೆಯಲು ವೇಟಿಂಗ್ ಲಿಸ್ಟ್​ನಲ್ಲಿದ್ದರು. ಜಾನ್ಸನ್ ಆ್ಯಂಡ್ ಜಾನ್ಸನ್ ಜೂನ್ ಅಂತ್ಯದ ವೇಳೆಗೆ 100 ಮಿಲಿಯನ್ ಡೋಸ್ ನೀಡುವುದಾಗಿ ಅಮೆರಿಕಕ್ಕೆ ವಾಗ್ದಾನ ಮಾಡಿತ್ತು.

ಆದರೀಗ ಜಾನ್ಸನ್ ಆ್ಯಂಡ್ ಜಾನ್ಸನ್ ಕೊರೊನಾ ಲಸಿಕೆ ಗುಣಮಟ್ಟದ ಪರಿಶೀಲನೆಯಲ್ಲಿ ವಿಫಲವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights