ಮಮತಾ V/S ಸುವೆಂದು: ಸಿಎಂ ಮತ್ತು BJP ನಾಯಕನ ಭವಿಷ್ಯಕ್ಕೆ ಇಂದು ಮತದಾನ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ಬಂಗಾಳದ ನಂದಿಗ್ರಾಮ ಇದೀಗ ಪ್ರತಿಷ್ಟೆಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಮತ್ತು ಈ ಹಿಂದೆ ಅವರ ಆಪ್ತನಾಗಿದ್ದ ಸುವೇಂದು ಅಧಿಕಾರಿ ಪರಸ್ಪರ ವಿರೋಧಿಗಾಗಿ ಕಣಕ್ಕಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತವೂ ನಂದಿಗ್ರಾಮದತ್ತ ನೆಟ್ಟಿದೆ.

2016 ಮತ್ತು 2011ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರು ಅಧಿಕಾರಕ್ಕೆ ಬರಲು ಶ್ರಮಿಸಿದ್ದ ಸುವೇಂದು ಅಧಿಕಾರಿ ಈ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದಾರೆ. ತನ್ನ ಆಪ್ತನಾಗಿದ್ದ ಬೆನ್ನಿಗೆ ಚೂರಿ ಇರಿದು ಹೋಗಿರುವ ಸುವೇಂದು ಅವರನ್ನು ಸೋಲಿಸಲು ಸ್ವತಃ ಮಮತಾ ಅವರೇ ನಂದಿಗ್ರಾಮದಲ್ಲಿ ಸುವೆಂದು ವಿರುದ್ಧ ಕಣಕ್ಕಿಳಿದಿದ್ದಾರೆ. ಆದರೆ, ಟಿಎಂಸಿ ಭದ್ರಕೋಟೆಯಾಗಿರುವ ನಂದಿಗ್ರಾಮ ಮತ್ತು ಸುತ್ತಲಿನ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಅರಳಿಸುವುದಾಗಿ ಸುವೇಂದು ಸವಾಲು ಹಾಕಿದ್ದಾರೆ. ಇದೀಗ ಈ ಇಬ್ಬರೂ ನಾಯಕರಿಗೂ ನಂದಿಗ್ರಾಮ ಅಳಿವು-ಉಳಿವಿನ ಕ್ಚೇತ್ರವಾಗಿದೆ. ಇಂದಿನ ಮತದಾನ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.

ನಂದಿಗ್ರಾಮದ ಮನೆ ಮಗನಂತಿರುವ ಸುವೇಂದು ಅಧಿಕಾರಿ, ಮಮತಾ ಅವರಿಗೆ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಒಂದೊಮ್ಮೆ, ಮಮತಾ ಅವರು ಸುವೇಂದು ಅವರನ್ನು ಸೋಲಿಸಿದರೆ, ಪ್ರಬಲ ಪೈಪೋಟಿ ನೀಡಿದ ಹೆಮ್ಮೆ ಉಳಿಯಲಿದೆ. ಮಮತಾ ಸೋತರೆ, ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಿದ್ದರೂ ಇದೊಂದು ದೊಡ್ಡ ಕಿರೀಟವೆಂಬಂತೆ ಪ್ರಚಾರ ಪಡೆದುಕೊಳ್ಳಲಿದೆ.

ನಂದಿಗ್ರಾಮದ ಪ್ರದೇಶದಲ್ಲಿ 2007ರಲ್ಲಿ ವಿಶೇಷ ಆರ್ಥಿಕ ವಲಯ ನಿರ್ಮಾಣಕ್ಕೆ ಜಮೀನು ವಶಪಡಿಸಿಕೊಂಡಿದ್ದನ್ನು ವಿರೋಧಿಸಿ ನಡೆದಿದ್ದ ಹಿಂದೆ ಚಳವಳಿ ದೇಶದಾದ್ಯಂತ ಭಾರೀ ಸುದ್ದಿಯಾಗಿತ್ತು. ‘ತೋಮರ್‌ ನಾಮ್‌, ಅಮರ್‌ ನಾಮ್‌, ನಂದಿಗ್ರಾಮ, ನಂದಿಗ್ರಾಮ’ (ನಿನ್ನ ಹೆಸರು, ನನ್ನ ಹೆಸರು, ನಂದಿಗ್ರಾಮ, ನಂದಿಗ್ರಾಮ) ಎನ್ನುವ ಘೋಷಣೆಯೊಂದಿಗೆ ಟಿಎಂಸಿ ನೇತೃತ್ವದಲ್ಲಿ ಹೋರಾಟ ಆರಂಭವಾಗಿತ್ತು. ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ಎಡರಂಗ ಸರ್ಕಾರದ ವಿರುದ್ಧ ಸಾಮಾಜಿಕವಾಗಿಯೂ ಮತ್ತು ರಾಜಕೀಯವಾಗಿಯೂ ಒಗ್ಗೂಡಿ ಪ್ರಬಲ ಹೋರಾಟ ನಡೆದಿತ್ತು.

ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ನೇತೃತ್ವವಹಿಸಿದ್ದ ಈ ಹೋರಾಟ ಯಶಸ್ಸು ಕಂಡಿತ್ತು, ಇದು ಇಡೀ ಬಂಗಾಳದಲ್ಲಿ ಟಿಎಂಸಿಯ ಅಲೆಯನ್ನು ಎಬಿಸಿ, 2011ರ ಚುನಾವಣೆಯಲ್ಲಿ ಟಿಎಂಸಿ ಅಧಿಕಾರಕ್ಕೆ ಬರಲು ಕಾರಣವಾಯಿತು. ಇದಾದ ನಂತರ ಬಂಗಾಳದಲ್ಲಿ ಕಾಂಗ್ರೆಸ್‌ ಮತ್ತು ಎಡರಂಗ ಮೂಲೆಗುಂಪಿಗೆ ಸೇರಿದ್ದವು. ಇದೀಗ ಬಂಗಾಳ ಬಿಜೆಪಿ ವರ್ಸಸ್‌ ಟಿಎಂಸಿಯಾಗಿ ಮಾರ್ಪಟ್ಟಿದೆ. ಈ ನಡುವೆ ತಮ್ಮ ಪ್ರಸ್ತುತತೆಯನ್ನು ಹೆಚ್ಚಿಸಿಕೊಳ್ಳಲು ಎಡರಂಗ-ಕಾಂಗ್ರೆಸ್‌ ಪ್ರಯತ್ನಿಸುತ್ತಿವೆ.

ಇದನ್ನೂ ಓದಿ: ಬಂಗಾಳ: 2009ರ CPM ನಾಯಕನ ಹತ್ಯೆ ಪ್ರಕರಣ; TMC ಮುಖಂಡ ಛತ್ರಧರ್‌ ಮಹತೊ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights