FACT CHECK | Parle-G ಬಿಸ್ಕೆಟ್‌ ಪ್ಯಾಕ್‌ ಮೇಲೆ ಇರುವ ಮಗುವಿನ ಚಿತ್ರ ನನ್ನದೇ ಎಂದು ಹುಡುಗಿಯೊಬ್ಬಳ ಕ್ಲೈಮ್ ನಿಜವೇ?

Parle-G ಬಿಸ್ಕತ್ ಪ್ಯಾಕೆಟ್‌ನ ಮೇಲಿರು ಚಿತ್ರದಲ್ಲಿರುವ ಮಗು ನಾನೇ ಎಂದು ಹುಡಿಗಿಯೊಬ್ಬಳು ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಇರುವ ಪ್ರಕಾರ Parle-G ಬಿಸ್ಕೆಟ್‌ನಲ್ಲಿರುವ ಮಗು ನಾನೇ, ಅದು ನನ್ನ ಚಿಕ್ಕ ವಯಸ್ಸಿನ ಫೋಟೊ ಎಂದು ಬಾಲಕಿಯೊಬ್ಬಳು ಹೇಳುತ್ತಿದ್ದಾಳೆ. ಅಲ್ಲಾ ಪಾರ್ಲೆ-ಜಿ ಬಿಸ್ಕೆಟ್‌ನಲ್ಲಿರೋದು ಸುಧಾ ಮೂರ್ತಿ ಅವರ ಫೋಟೊ ಅಲ್ವಾ? ಎಂಬ ಬರಹದೊಂದಿಗೆ ಪೋಸ್ಟ್‌ ಮಾಡಲಾಗಿದೆ.

vishvasnews

ಫೇಸ್‌ಬುಕ್ ಬಳಕೆದಾರ ಪಾಯೆಲ್ ದಾಸ್ ಎಂಬುವವರು Parle-G ಪ್ಯಾಕೆಟ್ ಹಿಡಿದಿರುವ ಹುಡುಗಿಯ ವೈರಲ್ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು “ಬಿಹಾರದ ಮಹಿಳೆಯೊಬ್ಬರು ತಮ್ಮ ಮಗಳು Parle-G ಪ್ಯಾಕ್‌ ಮೇಲೆ ಅದೇ ಹುಡುಗಿ ಎಂದು ಹೇಳಿಕೊಂಡಿದ್ದಾರೆ ಮತ್ತು ಕಂಪನಿಯು ಯಾವುದೇ ಪುರಾವೆಗಳಿಲ್ಲದೆ ತನ್ನ ಮಗಳ ಚಿತ್ರವನ್ನು ಬಳಸಿದೆ ಮತ್ತು ಪ್ರತಿಯಾಗಿ ಆಕೆಗೆ ಒಂದೇ ರೂಪಾಯಿ ಸಿಕ್ಕಿಲ್ಲ” ಎಂದು ಬರೆದಿದ್ದಾರೆ.

ಪಾರ್ಲೆ-ಜಿ ಪ್ಯಾಕ್‌ನಲ್ಲಿ ಇರುವ ಮಗುವಿನ ಚಿತ್ರದ ಕುರಿತಾಗಿ ಇರುವ ವಿವಾದ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಹೊರಟಾಗ ಹಿಂದೆಯೂ ಇದೇ ಅರ್ಥದಲ್ಲಿ ಬೇರೆ ಬೇರೆ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು, ಆದರೆ ಇದ್ಯಾವುದು ವಾಸ್ತವವಲ್ಲ ಎಂಬುದು ಸ್ಪಷ್ಟವಾಗಿದೆ.

Parle-G baby: Parle – G's mascot enhances the biscuit eating culture in India, Marketing & Advertising News, ET BrandEquity

ಪಾರ್ಲೆ ಉತ್ಪನ್ನಗಳ ಗುಂಪಿನ ಉತ್ಪನ್ನ ನಿರ್ವಾಹಕ ಮಯಾಂಕ್ ಷಾ ಕೆಲವು ವರ್ಷಗಳ ಹಿಂದೆ ಈ ಕಥೆಗಳನ್ನು ನಿರಾಕರಿಸಿದ್ದರು, Parle-G ಪ್ಯಾಕ್‌ನಲ್ಲಿರುವ ಮಗುವಿನ ಫೋಟೋ 60 ರ ದಶಕದಲ್ಲಿ ಎವರೆಸ್ಟ್ ಕ್ರಿಯೇಟಿವ್ ನಿಂದ ಇಲ್ಲೂಸ್ಟ್ರೇಷನ್‌ ಮೂಲಕ ರಚಿಸಿಲ್ಪಟ್ಟ ಕಾಲ್ಪನಿಕ ಚಿತ್ರವಾಗಿದೆ ಎಂದು ಹೇಳಿದ್ದಾರೆ.

ಎಕನಾಮಿಕ್ ಟೈಮ್ಸ್ ಪ್ರಕಾರ, ಪಾರ್ಲೆ ಪ್ರಾಡಕ್ಟ್ಸ್‌ನ ಗ್ರೂಪ್ ಪ್ರಾಡಕ್ಟ್ ಮ್ಯಾನೇಜರ್ ಮಯಾಂಕ್ ಷಾ, ಮಗುವಿನ ಚಿತ್ರವು ವಾಸ್ತವವಾಗಿ 1960 ರ ದಶಕದಲ್ಲಿ ಎವರೆಸ್ಟ್ ಕ್ರಿಯೇಟಿವ್‌ನಿಂದ ರಚಿಸಿದ ವಿವರಣೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಇತರ ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಹಿಂದೆಯೂ ಇಂತಹದ್ದೆ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾರಂಭವಾದಾಗ, ಏನ್‌ಸುದ್ದಿ.ಕಾಂ ಇದನ್ನು ಸುಳ್ಳು ಪ್ರತಿಪಾದನೆ ಎಂದು ಫ್ಯಾಕ್ಟ್‌ಚೆಕ್ ಸ್ಟೋರಿ ಮೂಲಕ ವಾಸ್ತವ ಪರಿಶೀಲನೆ ನಡೆಸಿತ್ತು ಅದನ್ನು ನೀವು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್: Parle-G ಬಿಸ್ಕೆಟ್‌ನ ಕವರ್ ಫೋಟೋದಲ್ಲಿರುವ ಮಗು ಚಿತ್ರ ಸುಧಾಮೂರ್ತಿಯವರದ್ದೇ?

ಒಟ್ಟಾರೆಯಾಗಿ ಹೇಳುವುದಾದರೆ, Parle-G ಬಿಸ್ಕೆಟ್ ಪ್ಯಾಕ್‌ನಲ್ಲಿ ಕಾಣಿಸಿಕೊಂಡಿರುವ ಮಗು ಸುಧಾ ಮೂರ್ತಿಯೂ ಅಲ್ಲ, ಅಥವಾ ಪೋಸ್ಟ್‌ನಲ್ಲಿ ಹೇಳಿರುವ ಮಗುವಿನದ್ದು ಅಲ್ಲ. ಇದು  1960 ರ ದಶಕದಲ್ಲಿ ರಚಿಸಲಾದ ಚಿತ್ರವಾಗಿದ್ದು, ಯಾವುದೇ ಜೀವಂತ ವ್ಯಕ್ತಿಯ ಚಿತ್ರವಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕಾಂಗ್ರೆಸ್‌ ನಾಯಕರು ಆರೋಪಿಸುತ್ತಿರುವಂತೆ ಭಾರತೀಯರಿಗೆ ಸೌದಿ ವೀಸಾವನ್ನು ನಿಷೇಧಿಸಿದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights