ತಾಲಿಬಾನಿಗಳ ಬಂದೂಕಿಗೆ ಎದೆಯೊಡ್ಡಿ ನಿಂತ ದಿಟ್ಟ ಮಹಿಳೆ : ಫೋಟೋ ವೈರಲ್!

ಆಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡು ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಂಡ ತಾನಿಬಾನಿಗಳ ಬಂದೂಕಿಗೆ ಎದೆಯೊಡ್ಡಿ ನಿಂತ ದಿಡ್ಡ ಮಹಿಳೆಯರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ತಮ್ಮ ಹಕ್ಕುಗಳಿಗಾಗಿ ಆಫ್ಘಾನಿಸ್ತಾನದಲ್ಲಿ ತಾನಿಬಾನಿಗಳ ವಿರುದ್ಧ ಪ್ರತಿಭಟನೆಗಿಳಿದ ಮಹಿಳೆರು ಎದೆಗುಂದದೆ ಗಟ್ಟಿತನ ಪ್ರದರ್ಶಿಸಿದ್ದಾರೆ. ಭಯವಿಲ್ಲದ ಅಫಘಾನ್ ಮಹಿಳೆಯರು ತಮ್ಮ ವೈಯಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಎತ್ತಿಹಿಡಿಯಲು ತಾಲಿಬಾನ್ ವಿರುದ್ಧ ದೃಢವಾಗಿ ನಿಂತು ಹೋರಾಡುತ್ತಿದ್ದಾರೆ.

ಮಂಗಳವಾರ ಪಾಕಿಸ್ತಾನ ವಿರೋಧಿ ಪ್ರತಿಭಟನೆಗಳ ನಡುವೆ ಕಾಬೂಲ್‌ನ ಬೀದಿಗಳಲ್ಲಿ ಸೆರೆಹಿಡಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಬೂಲ್‌ನಲ್ಲಿ ಪಾಕಿಸ್ತಾನದ ರಾಯಭಾರ ಕಚೇರಿಯ ಬಳಿ ಹಲವಾರು ಅಫ್ಘಾನಿಸ್ತಾನರು ಘೋಷಣೆಗಳನ್ನು ಕೂಗುತ್ತಿದ್ದಾಗಲೂ ತಾಲಿಬಾನ್ ಪಡೆಗಳ ಸದಸ್ಯರು ಹಿಜಾಬ್ ಧರಿಸಿದ ಮಹಿಳಾ ಪ್ರತಿಭಟನಾಕಾರರತ್ತ ತನ್ನ ಬಂದೂಕು ಗುರಿ ಇಟ್ಟಿದ್ದಾರೆ. ಈ ವೇಳೆ ಪ್ರತಿಭಟನಾನಿರತ ಮಹಿಳೆಯೊಬ್ಬಳು ಅಂಜದೆ ಅಳುಕದೆ ಕದಲದೆ ನಿಂತುರುವ ಫೋಟೋ ಭಾರೀ ವೈರಲ್ ಆಗಿದೆ.

ರಾಯಿಟರ್ಸ್ ಪತ್ರಕರ್ತರೊಬ್ಬರು ಕ್ಲಿಕ್ಕಿಸಿದ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಗಸ್ಟ್ 15 ರಂದು ಆಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ಇಸ್ಲಾಮಿಕ್ ಉಗ್ರಗಾಮಿ ಗುಂಪಿನ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಮಹಿಳೆಯರು  ಹಲವಾರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಅಫ್ಘಾನಿಸ್ತಾನ ಪ್ರಾಂತ್ಯವಾದ ಪಂಜಶೀರ್ ಅನ್ನು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನ್ ಸೋಮವಾರ ಹೇಳಿದೆ.

ಇದರ ಬೆನ್ನಲ್ಲೇ, ಹಲವಾರು ಪುರುಷರು ಮತ್ತು ಮಹಿಳೆಯರು ಮಂಗಳವಾರ ಬೃಹತ್ ಪ್ರತಿಭಟನೆಗಳನ್ನು ನಡೆಸಿ ಪಂಜಶೀರ್ ಪ್ರಾಂತ್ಯದಲ್ಲಿ “ಪಾಕಿಸ್ತಾನಕ್ಕೆ ಸಾವು””ತಾಲಿಬಾನ್ ಸಾವು” ಎಂದು ಘೋಷಣೆ ಕೂಗಿದರು. ಈ ವೇಳೆ ತಾಲಿಬಾನಿಗಳು ಪ್ರತಿಭಟನಾ ನಿರತ ಮಹಿಳೆಯರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆನ್ನಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights