ಮಾಜಿ ಸಿಎಂ ಧರಂಸಿಂಗ್‌ ಅವರ ಸಂಬಂಧಿ ಅಪಹರಣ-ಹತ್ಯೆ: ಒಬ್ಬ ಆರೋಪಿ ಬಂಧನ!

ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ಧರಂಸಿಂಗ್‌ ಅವರ ಸಂಬಂಧಿಯನ್ನು ಅಪಹರಿಸಿ ಆಂಧ್ರಪ್ರದೇಶದ ನಲ್ಲೂರಿನಲ್ಲಿ  ದುಷ್ಕರ್ಮಿಗಳು  ಕೊಲೆಗೈದಿದ್ದಾರೆ ಎಂದು ವರದಿಯಾಗಿದೆ.

ಧರಂಸಿಂಗ್‌ ಅವರ ಸಂಬಂಧಿ ಸಿದ್ದಾರ್ಥ ಸಿಂಗ್ ಅವರನ್ನು ಅಮೃತಹಳ್ಳಿ ಠಾಣಾ ವ್ಯಾಪ್ತಿಯಿಂದ ಅಪಹರಿಸಿಲಾಗಿದ್ದು, ಅವರನ್ನು  ದುಷ್ಕರ್ಮಿಗಳ ತಂಡ ಆಂಧ್ರಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾರೆ. ಆರೋಪಿಯೊಬ್ಬನನ್ನು ಬಂಧಿಸಲಾಗಿದ್ದು, ಸಿದ್ದಾರ್ಥ್ ಸಿಂಗ್‌ ಅವರ ಮೃತದೇಹ ತರಲು ಪೊಲೀಸರ ತಂಡ ಆಂಧ್ರಪ್ರದೇಶದ ತಿರುಪತಿಗೆ ತೆರಳಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ದಾಸರಹಳ್ಳಿಯಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಸಿದ್ದಾರ್ಥ್ ಸಿಂಗ್‌ ಉದ್ಯಮಿಯಾಗಿದ್ದು, ಜನವರಿ 19ರಂದು ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಅಮೆರಿಕಾಕ್ಕೆ ತೆರಳುತ್ತಿರುವುದಾಗಿ ವಾಟ್ಸ್‌ಆ್ಯಪ್ ಮೂಲಕ ಮೆಸೇಜ್‌ ಕಳಿಸಿದ್ದರು. ಕೆಲ ದಿನಗಳ ನಂತರ ಅವರಿಗೆ ಮತ್ತೆ ಕರೆ ಮಾಡಿದಾಗ ಫೋಸ್‌ ಸ್ವಿಚ್‌ಆಫ್‌ ಅಗಿರುವುದಾಗಿ ಬಂತು. ಫ್ಲಾಟ್‌ನಲ್ಲೂ ಅವರು ಇರಲಿಲ್ಲ. ಹೀಗಾಗಿ ತಮ್ಮ ಮಗ ನಾಪತ್ತೆಯಾಗಿದ್ದಾರೆ ಎಂದು ಸಿದ್ಧಾರ್ಥ್ ತಂದೆ ಸಿ.ಆರ್‌.ದೇವೇಂದರ್‌ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅಪಾರ್ಟ್‌ಮೆಂಟ್ ಸಮುಚ್ಚಯದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ, ಸಿದ್ದಾರ್ಥ್ ಮೊಬೈಲ್‌ ಕರೆಗಳ ವಿವರಗಳನ್ನೂ ಸಂಗ್ರಹಿಸಿದ್ದರು ಎಂದು ತಿಳಿದು ಬಂದಿದೆ.

ಅವರ ಅಪಾರ್ಟ್‌ಮೆಂಟ್‌ ಬಳಿಯೇ ಅವರನ್ನು ಅಪಹರಿಸಲಾಗಿದ್ದು, ಅವರನ್ನು ಕಾರಿನಲ್ಲಿಯೇ ಹತ್ಯೆ ಮಾಡಿರುವ ಆರೋಪಿಗಳು ಆಂಧ್ರಪ್ರದೇಶದ ತಿರುಪತಿ ಸಮೀಪದ ನಲ್ಲೂರಿನ ಅರಣ್ಯ ಪ್ರದೇಶದ ಬಳಿ ಶವವನ್ನು ಹೂತು ಹಾಕಿದ್ದಾರೆ. ಸದ್ಯ ಮೃತದೇಹ ಪತ್ತೆಯಾಗಿದ್ದು, ತಹಶೀಲ್ದಾರ್‌ ಸಮ್ಮುಖದಲ್ಲಿ ಮುಂದಿನ ಕಾನೂನು ಪ್ರಕ್ರಿಯೆ ನಡೆಸಬೇಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ ವರದಿ ಮಾಡಿದ ಪತ್ರಕರ್ತೆ; ABVP ಕಾರ್ಯಕರ್ತನಿಂದ ಅತ್ಯಾಚಾರ-ಕೊಲೆ ಬೆದರಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights