ಕೃಷಿ ನೀತಿಗಳ ವಿರುದ್ಧ ಪ್ರತಿಭಟಿಸುತ್ತಿರುವ ಹಲವು ರೈತ ಮುಖಂಡರ ಟ್ವಿಟರ್‌ ಖಾತೆ ತಾತ್ಕಾಲಿಕ ಅಮಾನತು!

ಕಿಸಾನ್‌ ಏಕ್ತಾ ಮೋರ್ಚಾ ಸೇರಿದಂತೆ ಹಲವು ಪ್ರಮುಖ ಸಂಸ್ಥೆ, ಸಂಘಟನೆ ಹಾಗೂ ಸಾರ್ವಜನಿಕ ವ್ಯಕ್ತಿಗಳ ಟ್ವಿಟರ್‌ ಖಾತೆಯನ್ನು ನಿರ್ದಿಷ್ಟ ಕಾರಣ ನೀಡದೆಯೇ ಟ್ವಿಟರ್ ಇಂಡಿಯಾ ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿದೆ. ಹೀಗಾಗಿ ಟ್ವಿಟರ್‌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ದೆಹಲಿ ರೈತ ಹೋರಾಟಕ್ಕೆ ಸಂಬಂಧಿಸಿದ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ @kisanEktaMorcha ವನ್ನು ತಾತ್ಕಾಲಿಕವಾಗಿ ಅಮಾನತನಲ್ಲಿಟ್ಟಿದೆ.

ಜೊತೆಗೆ ಕಾರವಾನ್‌ ಪತ್ರಿಕೆಯ ಟ್ವಿಟರ್‌ ಖಾತೆಯನ್ನು ಅಮಾನತಿನಲ್ಲಿಟ್ಟಿದ್ದು, ಕಾನೂನಾತ್ಮಕ ಬೇಡಿಕೆಯ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇವುಗಳ ಜೊತೆಗೆ ಹನ್ಸಾರ್‌ ಮೀನಾ, ಟ್ರ್ಯಾಕ್ಟರ್‌2ಟ್ವಿಟರ್‌, ನಟ ಸುಶಾಂತ್‌ ಸಿಂಗ್‌ ಅವರ ಖಾತೆಗಳನ್ನು ಟ್ವಿಟರ್‌ ನಿಷ್ಕ್ರಿಯಗೊಳಿಸಿದೆ.

ಯುವ ನಾಯಕ ಕನ್ಹಯ್ಯ ಕುಮಾರ್‌ ಅವರ ಖಾತೆಯನ್ನು ಕೆಲ ಕಾಲ ಅಮಾನತನಲ್ಲಿಡಲಾಗಿತ್ತು, ಆದರೆ ಈಗ ಸಕ್ರಿಯವಾಗಿದೆ ಎಂದು ಸ್ವತಃ ಕನ್ಹಯ್ಯ ಕುಮಾರ್‌ ತಿಳಿಸಿದ್ದಾರೆ.

https://twitter.com/kanhaiyakumar/status/1356164232010600449?s=20

ಟ್ವಿಟರ್‌ನ ಈ ಕ್ರಮವನ್ನು ವಿರೋಧಿಸಿ ಹಲವರು ಕಿಸಾನ್‌ ಏಕ್ತಾ ಮೋರ್ಚಾ ಟ್ವಿಟರ್‌ ಖಾತೆ ಅಮಾನತನ್ನು ಹಿಂಪಡೆಯಲು ಆಗ್ರಹಿಸಿ ಟ್ವೀಟ್‌ ಮಾಡುತ್ತಿದ್ದಾರೆ.

ಸರ್ಕಾರದ ವಿರುದ್ಧ ತೀವ್ರ ವಿಮರ್ಶಾತ್ಮಕವಾಗಿರುವ ಪತ್ರಿಕೆ, ಪತ್ರಕರ್ತ, ಸಂಸ್ಥೆ, ಸಾರ್ವಜನಿಕ ವ್ಯಕ್ತಿಗಳನ್ನು ಹಲವು ರೀತಿಯಲ್ಲಿ ಗುರಿಯಾಗಿಸಿ, ಬಾಯಿ ಮುಚ್ಚಿಸುವ ಪ್ರಯತ್ನವನ್ನು ಆಡಳಿತಾರೂಢ ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್‌ ಇಂಡಿಯಾ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ರೈತರು ದೆಹಲಿ ತಲುಪದಂತೆ ತಡೆಯಲು ರೈಲನ್ನೇ ತಿರುಗಿಸಿದ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights