ಕೇಂದ್ರ ಸರ್ಕಾರದ 2021ರ ಬಜೆಟ್‌ ಮಂಡನೆ: ಆಯವ್ಯಯದ ಪ್ರಮುಖ ಅಂಶಗಳು ಹೀಗಿವೆ!

2021 ಮತ್ತು 2022ನೇ ಸಾಲಿನ ಕೇಂದ್ರ ಬಜೆಟ್‌ಅನ್ನು ಇಂದು (ಸೋಮವಾರ) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡನೆ ಮಾಡಿದ್ದಾರೆ. ಕೊರೊನಾ ನಂತರದಲ್ಲಿ ಮಂಡನೆಯಾದ ಮೊದಲ ಬಜೆಟ್ ಇದಾಗಿದ್ದು, ಈ ಮೂಲಕ ದೇಶದಲ್ಲಿ ಅಧಿಕವಾಗಿರುವ ನಿರುದ್ಯೋಗ, ಆರ್ಥಿಕ ಕುಸಿತವನ್ನು ಸುಧಾರಿಸುವ ಯೋಜನೆಗಳನ್ನು ದೇಶದ ಜನರು ನಿರೀಕ್ಷಿಸಿದ್ದಾರೆ.

2021-2022ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು 12 ಲಕ್ಷ ಕೋಟಿ ರೂ ಮೊತ್ತದಷ್ಟು ಸಾಲ ಪಡೆಯಲು ಮುಂದಾಗಿದೆ.  ಸದ್ಯ ಸಂಸತ್‌ನಲ್ಲಿ ಮಂಡನೆಯಾದ ಬಜೆಟ್‌ನ ಪ್ರಮುಖ ಅಂಶಗಳು ಹೀಗಿವೆ:

  • ಗ್ರಾಮೀಣ ಮೂಲ ಅಭಿವೃದ್ಧಿ ನಿಧಿಗೆ 30,000 ಕೋಟಿಯಿಂದ 40,000 ಕೋಟಿ ರೂ. ಮತ್ತು ಐದು ಪ್ರಮುಖ ಮೀನುಗಾರಿಕೆ ಬಂದರುಗಳನ್ನು ಆರ್ಥಿಕ ಚಟುವಟಿಕೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ.
  • ಕೃಷಿ ಸಾಲ ಗುರಿಯನ್ನು 16.5 ಲಕ್ಷ ಕೋ.ಗೆ ಹೆಚ್ಚಿಸಲು ವಿತ್ತ ಸಚಿವರ ಪ್ರಸ್ತಾವ
  • ಕೃಷಿ ಕ್ಷೇತ್ರದ ಸಂವರ್ಧನೆಗಾಗಿ 2022 ರ ಹಣಕಾಸು ವರ್ಷದಲ್ಲಿ ಕೃಷಿ ಸಾಲದ ಗುರಿಯನ್ನು ವಿಸ್ತರಿಸಲಾಗುತ್ತದೆ. ಇದಕ್ಕಾಗಿ ಹಲವು ಕಲ್ಯಾಣ ಯೋಜನೆಗಳನ್ನು ನವೀಕರಣ.
  • 2022 ರ ಹಣಕಾಸು ವರ್ಷದಲ್ಲಿ 2 ಪಿಎಸ್‌ಯು ಬ್ಯಾಂಕುಗಳು ಮತ್ತು ಒಂದು ಸಾಮಾನ್ಯ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸಲು ಸರ್ಕಾರ ನಿರ್ಧಾರ.
  • 1 ಕೋಟಿ ಜನರಿಗೆ ಉಜ್ವಲಾ ಯೋಜನೆ ವಿಸ್ತರಣೆ. ಮುಂದಿನ ಮೂರು ವರ್ಷಗಳಲ್ಲಿ 100 ಜಿಲ್ಲೆಗಳು ಯೋಜನೆ ವ್ಯಾಪ್ತಿಗೆ.
  • 1.15 ಲಕ್ಷ ಕೋಟಿ ರೂ. ರೈಲ್ವೆ ಇಲಾಖೆ ಮತ್ತು ವಿಮಾನಗಳ ಖಾಸಗೀಕರಣಕ್ಕೆ ವಿನಿಯೋಗ 2 ಮತ್ತು ಮೂರನೇ ಹಂತದ ನಗರಗಳಲ್ಲಿ ವಿಮಾನಗಳ ಖಾಸಗೀಕರಣ.
  • ಮಾರ್ಚ್‌ 2022ರ ಹೊತ್ತಿಗೆ 8500 ಕಿ.ಮೀ. ಹೆದ್ದಾರಿ ನಿರ್ಮಾಣ, ತಮಿಳುನಾಡಿನಲ್ಲಿ 3500 ಕಿ.ಮೀ. ಕಾರಿಡಾರ್‌, ಕೇರಳದಲ್ಲಿ 65,000 ಕೋಟಿ ರೂ.ಗಳ 1100 ಕಿ.ಮೀ. ಉದ್ದದ ಹೆದ್ದಾರಿ, ಪಶ್ಚಿಮ ಬಂಗಾಳದಲ್ಲಿ 95,000 ಕೋಟಿ ರೂ. ವೆಚ್ಚದ 675 ಕಿ.ಮೀ. ಹೆದ್ದಾರಿ ಮತ್ತು ಮುಂದಿನ 3 ವರ್ಷಗಳಲ್ಲಿ ಅಸ್ಸಾಮ್‌ನಲ್ಲಿ 1300. ಕಿ.ಮೀ.
  • 61,000 ಕೋಟಿ ರೂ.ಗಳ ಹೊಸ ಆರೋಗ್ಯ ಮೂಲ ಸೌಕರ್ಯಗಳ ಯೋಜನೆ
  • 17,000 ಗ್ರಾಮೀಣ ಮತ್ತು 11000 ನಗರ ಆರೋಗ್ಯ ಕೇಂದ್ರಗಳ ಆರಂಭ.
  • ಮುಂದಿನ ಆರು ವರ್ಷಗಳಿಗೆ ಆರೋಗ್ಯ ಸೇವೆಗೆ 64,180 ಕೋಟಿ ರೂ.ಗಳು ಈ ಮೊತ್ತ ಮೂರು ಹಂತಗಳಲ್ಲಿ ವಿನಿಯೋಗಿಸಲಾಗುತ್ತದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ ಆಡಿಯಲ್ಲಿ ಕಾರ್ಯಚಟುವಟಿಕೆಗಳು
  • ಇಲ್ಲಿಯವರೆಗೆ ಕೋವಿಡ್‌ ಪರಿಹಾರಕ್ಕೆ 27.1 ಲಕ್ಷ ಕೋಟಿ ಘೋಷಣೆ
  • ಆಹಾರಧಾನ್ಯಗಳ ಖರೀದಿಗೆ 1.41 930 ಕೋಟಿ ವೆಚ್ಚ
  • ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಂಡವಾಳ ಹಿಂತೆಗೆತ
  • ಎಲ್ಐಸಿ ನಿಗಮದಲ್ಲಿ ಬಂಡವಾಳ ಹಿಂತೆಗೆತ
  • ಬೇಳೆಕಾಳು ಖರೀದಿಗೆ10530ಕೋಟಿ ವೆಚ್ಚ
  • ಕೃಷಿ ಸಾಲ ಗುರಿ 6.7 ಲಕ್ಷ ಕೋಟಿ ರೂ.
  • 22 ಬೆಳೆಗಳಿಗೆ ವಿಮೆ ವಿಸ್ತರಣೆ
  • ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ 40 ಸಾವಿರ ಕೋಟಿ
  • ಕೃಷಿ ನೀರಾವರಿಗೆ ಹೆಚ್ಚುವರಿ 5000 ಕೋಟಿ
  • ರೈತರಿಗೆ ಒಂದುವರೆ ಪಟ್ಟು ಹೆಚ್ಚು ಬೆಂಬಲ ಬೆಲೆ
  • ಭತ್ತ 63928 ಕೋಟಿ ಬೆಂಬಲ ಬೆಲೆ
  • 1000 ಕೃಷಿ ಮಾರುಕಟ್ಟೆಯಲ್ಲಿ ಇನಾಂ ವಿಸ್ತರಣೆ
  • 5 ಮೀನುಗಾರಿಕಾ ಬಂದರುಗಳ ಅಭಿವೃದ್ಧಿ
  • ಆಹಾರಧಾನ್ಯ ಖರೀದಿಗೆ 1.72 ಕೋಟಿ ಮೀಸಲು
  • ಇಲ್ಲ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಕಾನೂನು ಅನ್ವಯ
  • ಕೃಷಿ ಕ್ಷೇತ್ರ ಮೂಲಸೌಕರ್ಯಕ್ಕೆ 40 ಸಾವಿರ ಕೋಟಿ ಮೀಸಲು
  • ತಮಿಳುನಾಡಿನಲ್ಲಿ ಮೀನುಗಾರಿಕೆಗೆ ವಿಶೇಷ ಯೋಜನೆ
  • ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಇಎಸ್ಐ ಕಡ್ಡಾಯ
  • ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ
  • 100 ಸೈನಿಕ ಶಾಲೆ ಸ್ಥಾಪನೆ
  • 15000 ಹೊಸ ಶಾಲೆಗಳ ಸ್ಥಾಪನೆ
  • ಲೇಹ್ ನಲ್ಲಿ ಕೇಂದ್ರ ವಿದ್ಯಾಲಯ ಸ್ಥಾಪನೆ
  • ಬುಡಕಟ್ಟು ಪ್ರದೇಶಗಳಲ್ಲಿ ಮಾದರಿ ಶಾಲೆಗಳ ಸ್ಥಾಪನೆ
  • ಗೃಹ ಸಾಲದ ಮೇಲಿನ ತೆರಿಗೆ ವಿನಾಯಿತಿ ಇನ್ನೊಂದು ವರ್ಷ ವಿಸ್ತರಣೆ
  • ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಂಡವಾಳ ಹಿಂತೆಗೆತ.
  • ಚಾರಿಟೇಬಲ್ ಟ್ರಸ್ಟ್ ಗಳಿಗೆ ವಿನಾಯಿತಿ
  • ಕಾರ್ಮಿಕರಿಗೆ ಬಾಡಿಗೆ ಮನೆ ನೀಡುವ ಮನೆಮಾಲೀಕರಿಗೆ ತೆರಿಗೆ ವಿನಾಯಿತಿ.
  • ಸ್ಟಾರ್ಟ ಅಪ್ ಗಳಿಗೆ ತೆರಿಗೆ ರಜೆ ಘೋಷಣೆ.
  • ಅಬಕಾರಿ ಸುಂಕದಲ್ಲಿ ಬದಲಾವಣೆ
  • ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಅಬಕಾರಿ ಸುಂಕ ಹೆಚ್ಚಳ 2. 5 ರಷ್ಟು ಹೆಚ್ಚಳ
  • ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ದುಬಾರಿ ಮಾಡಿದ ಕೇಂದ್ರ ಸರ್ಕಾರ
  • ಟಿವಿ ಹವಾನಿಯಂತ್ರಿತ ಮತ್ತು ಮೊಬೈಲ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ಸ್ ವಸ್ತುಗಳು ದುಬಾರಿ
  • ಜವಳಿ ಉಕ್ಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಹೆಚ್ಚಳ
  • ಚಿನ್ನದ ಒಡವೆಗಳ ಮೇಲೆ 12.5 ಅಬಕಾರಿ ಸುಂಕ ಮುಂದುವರಿಕೆ
  • ಆಟೋಮೊಬೈಲ್ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಳ
  • ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಳ
  • ಚಿನ್ನದ ಬೆಲೆ ಕೊಂಚ ಕಡಿಮೆ
  • ಚಿನ್ನದ ಆಭರಣಗಳ ಮೇಲೆ ಅಬಕಾರಿ ಸುಂಕ ಇಳಿಕೆ
  • ಮನೆಗೆ ಖರೀದಿಸುವ ವಿವಿಧ ಬಣ್ಣಗಳು ಅಗ್ಗ
  • ಕೃಷಿ ಸೆಸ್ ಷೋಷಣೆ
  • ಹತ್ತಿ ಉತ್ಪನ್ನದ ಮೇಲೆ ಅಬಕಾರಿ ಸುಂಕ ಹೆಚ್ಚಳ
  • ಡಿಸೆಂಬರ್ನಲ್ಲಿ ಮಾನವರಹಿತ ಬಾಹ್ಯಾಕಾಶ ಯಾನ
  • 75 ಏಕಲವ್ಯ ಮಾದರಿ ಶಾಲೆಗಳ ಸ್ಥಾಪನೆ
  • ಭಾರತ ಜಪಾನ್ ನಡುವೆ ವಿದ್ಯಾರ್ಥಿಗಳಿಗೆ ತರಬೇತಿ
  • ರಾಷ್ಟ್ರೀಯ ಭಾಷಾಂತರ ನೀತಿ ಜಾರಿ
  • ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ
  • ಟೀ ಕಾರ್ಮಿಕರಿಗೆ 300 ಕೋಟಿ ರೂ ಘೋಷಣೆ
  • ಹೆದ್ದಾರೆ ಸಂಪರ್ಕವಾಗಿ ಯೋಜನೆ ವಿಸ್ತರಣೆ
  • ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ ಜಾರಿ
  • ಅಸ್ಸಾಂ ಪಶ್ಚಿಮ ಬಂಗಾಳಕ್ಕೆ ಮತ್ತೆ ಬಂಪರ್
  • ಚುನಾವಣೆ ಇರುವ ರಾಜ್ಯಗಳಿಗೆ ಬಂಪರ್ ಕೊಡುಗೆ ನೀಡಿದ ನಿರ್ಮಲಾ ಸೀತಾರಾಮ್
  • ದೇಶದಲ್ಲಿ ಮೊದಲ ಡಿಜಿಟಲ್ ಗಣತಿಗಾಗಿ 3700 ಸಾವಿರ ಕೋಟಿ ಘೋಷಣೆ
  • ವಿತ್ತೀಯ ಕೊರತೆ ಜಿಡಿಪಿಯ 9.5ರಷ್ಟು ಇಳಿಯಲಿದೆ
  • 20 ವರ್ಷ ಮೇಲ್ಪಟ್ಟ ವಾಹನಗಳು ಗುಜರಿಗೆ
  • ಕೇಂದ್ರ ಸರ್ಕಾರದ ಮೇಲೆ 12 ಲಕ್ಷ ಕೋಟಿ ರು ಮೊತ್ತದಷ್ಟು ಸಾಲ.
  • ವಿಮಾ ಕಂಪನಿಗಳಿಗೆ ವಿದೇಶಿ ಬಂಡವಾಳ ಹೆಚ್ಚಳ
  • ಬಂಡವಾಳ ಹಿಂತೆಗೆತ ದಿಂದ ಆದಾಯ ಹೆಚ್ಚಳ
  • ಭಾರತೀಯ ವಿಮಾ ಸಂಸ್ಥೆಯನ್ನು ಖಾಸಗೀಕರಣದಿಂದ ಹೆಜ್ಜೆ.
  • ಆಹಾರ ನಿಗಮಕ್ಕೆ ಕೊಡುತ್ತಿದ್ದ ಸಾಲ ರದ್ದು
  • ರಾಷ್ಟ್ರೀಯ ಸಾಮಾಜಿಕ ಭದ್ರತಾ ನಿಧಿಯಿಂದ ಕೊಡಲಾಗುತ್ತಿದ್ದ ಸಾಲ ರದ್ದು
  • ರಷ್ಯಾದಲ್ಲಿ ಭಾರತದ ಗಗನಯಾನಿ ಗಳಿಗೆ ತರಬೇತಿ
  • 17 ನೂತನ ಮೊಬೈಲ್ ಹೆಲ್ತ್ ಯೂನಿಟ್ ಸ್ಥಾಪನೆ
  • ನೇರ ತೆರಿಗೆಯಲ್ಲಿ ಬದಲಾವಣೆ
  • 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ, ಬಡ್ಡಿ ಆದಾಯಕ್ಕೆ ತೆರಿಗೆ ಇಲ್ಲ
  • 15ಲಕ್ಷ ಮೇಲ್ಪಟ್ಟ ತೆರಿಗೆ ವಂಚನೆಗೆ ಮಾತ್ರ ಕೇಸ್
  • ಅನಿವಾಸಿ ಭಾರತೀಯರಿಗೆ ದ್ವಿ ತೆರಿಗೆ ಇಲ್ಲ
  • ಎಲ್ಐಸಿಯಲ್ಲಿಯೂ ಬಂಡವಾಳ ಹಿಂತೆಗೆತ

ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಮುಖ್ಯವಾಗಿ ಏನಿರಬೇಕು: ರಾಹುಲ್‌ಗಾಂಧಿ ಹೇಳಿದ ಮೂರು ಅಂಶಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights