ಕಾಂಗ್ರೆಸ್ ಪಕ್ಷವನ್ನು ಕೊರೊನಾ ಕಾಂಗ್ರೆಸ್ ಎಂದು ಕರೆಯಬೇಕು – ಬಿ.ಸಿ. ಪಾಟೀಲ್ ಕಿಡಿ

ರಾಜ್ಯದಲ್ಲಿ  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ. ಪಾಟೀಲ್  ಕೈ ನಾಯಕರ ವಿರುದ್ದು ಹರಿಹಾಯ್ದಿದ್ದಾರೆ.

ತಬ್ಲಿಘಿಗಳಿಂದಲೇ ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚಾಗಿದ್ದು, ಕಾಲಿಟ್ಟಿದ್ದು. ಕಾಂಗ್ರೆಸ್ ಅವರ ಪರವಾಗಿಯೇ ಮಾತನಾಡುತ್ತದೆ. ಕಾಂಗ್ರೆಸ್ ತಬ್ಲಿಘಿಗಳ ಪರವಾಗಿ ಮಾತನಾಡುವುದರಿಂದಲೇ ಕೊರೊನಾ ರಾಜ್ಯದಲ್ಲಿ ಅಧಿಕವಾಗುತ್ತಿದೆ. ಕಾಂಗ್ರೆಸ್​ನಿಂದಲೇ ಕೊರೋನಾ ಜಾಸ್ತಿಯಾಗಿದೆ. ಕಾಂಗ್ರೆಸ್ ಪಕ್ಷವನ್ನು ಕೊರೋನಾ ಕಾಂಗ್ರೆಸ್ ಎಂದು ಕರೆಯಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಲೆಕ್ಕಕೊಡಿ ಅಭಿಯಾನ ಶುರು ಮಾಡಿದೆ. ನಾವು ಲೆಕ್ಕ ಕೊಡುತ್ತೇವೆ. ಲೆಕ್ಕ ಕೊಡದೆ ಎಲ್ಲೂ ಹೋಗುವುದಿಲ್ಲ. ಇದನ್ನ ಬಿಟ್ಟು ಕಾಂಗ್ರೆಸ್ ಸರ್ಕಾರದ ಜೊತೆಗೆ ನಿಲ್ಲಲಿ ಎಂದು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಕೈ ನಾಯಕರ ವಿರುದ್ಧ ಗುಡುಗಿದ್ದಾರೆ.

ಕೊಪ್ಪಳಕ್ಕೆ ಹೊರಗಿನಿಂದ ಬರುವವರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಸಲಾಗುತ್ತದೆ. ಅಂಥವರು ಕೊರೊನಾ ಟೆಸ್ಟ್ ರಿಪೋರ್ಟ್ ಬರುವವರೆಗೂ ಸ್ವಯಂ ಕ್ವಾರಂಟೈನ್ ಗೆ ಒಳಪಟ್ಟಿರಬೇಕು. ಅವರ ವರದಿ ನೆಗೆಟಿವ್ ಬಂದ ಬಳಿಕ ಅವರನ್ನು ಹೊರಬಿಡಲಾಗುವುದು ಎಂದು ಕೊಪ್ಪಳ ಜಿಲ್ಲಾ‌ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights