ಪಂಚ ‘ಸಿಡಿ’ಗೇಡಿಗಳು ಎಸ್ಐಟಿ ಬಲೆಗೆ : ಇವರೇನಾ ಅವರು..?

ನಾನವನಲ್ಲ.. ನಾನವನಲ್ಲ… ಎನ್ನುತ್ತಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಕ್ರಿಯೇಟಿಂಗ್ ಗ್ಯಾಂಗ್ ನ್ನು ಎಸ್ಐಟಿ ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದು ಇವರೇನಾ ಅವರು ಎನ್ನುವ ಪ್ರಶ್ನೆಗೆ ಸದ್ಯದ್ರಲ್ಲೇ ಉತ್ತರ ಸಿಗಲಿದೆ.

ಈಗಾಗಲೇ ಎಸ್ಐಟಿ ಐದು ‘ಸಿಡಿ’ಗೇಡಿಗಳನ್ನು ವಶಕ್ಕೆ ಪಡೆದಿದ್ದು ಇವರಲ್ಲಿ ಓರ್ವ ಯುವತಿ ಸೇರಿದ್ದಾಳೆ. ಈಕೆ ರಾಮನಗರದಲ್ಲಿ ಸರ್ಕಾರಿ ನೌಕರಿಯಲ್ಲಿದ್ದಾಳೆ ಎನ್ನಲಾಗುತ್ತಿದೆ. ಜೊತೆಗೆ ಈಕೆ ಸಿಡಿ ಲೇಡಿಯೊಂದಿಗೆ ರೂಂ ಶೇರ್ ಮಾಡಿದ್ದಳು ಎನ್ನಲಾಗುತ್ತಿದೆ. ಈ ಐವರಲ್ಲಿ ಚಿಕ್ಕಮಗಳೂರಿನ ಆಲ್ದೂರಿನ ಯುವಕ, ಬೆಂಗಳೂರಿನ ವಿಜಯನಗರದಲ್ಲಿ ವಾಸವಾಗಿದ್ದ  ಓರ್ವ ಯುವಕ ಹಾಗೂ ಚಾಮರಾಜಪೇಟೆಯಲ್ಲಿದ್ದ ಮತ್ತೋರ್ವ ಯುವಕ, ಮತ್ತೋರ್ವ ಸಿಡಿ ಲೇಡಿಯ ಬಾಯ್ ಫ್ರೆಂಡ್ ಎನ್ನಲಾಗುತ್ತಿದೆ.

ಸದ್ಯ ಇವರನ್ನು ವಶಪಡಿಸಿಕೊಂಡ ಎಸ್ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಈ ಹಿಂದೆ ರಮೇಶ್ ಜಾರಕಿಹೊಳಿ ಆರೋಪಿಸಿದಂತೆ ” ಸಿಡಿ ಕ್ರಿಯೇಟರ್ಸ್ ಗೆ ಕೋಟಿ ಕೋಟಿ ಹಣ ಕೊಡಲಾಗಿದೆ. ಸಿಡಿ ಲೇಡಿಗೆ ವಿದೇಶದಲ್ಲಿ ಪ್ಲಾಟ್ ಕೊಡಲಾಗಿದೆ” ಎಂದು ಹೇಳಿದ್ದರು. ಇದು ನಿಜಾನಾ? ಎನ್ನುವ ತನಿಖೆ ಕೂಡ ನಡೆಯುತ್ತಿದೆ. ಇದನ್ನು ಬಿಟ್ಟು ಇರುವ ನೆಟ್ ವರ್ಕ್ ಏನು ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ.

ಮಾತ್ರವಲ್ಲದೇ ಸಿಡಿ ಲೇಡಿ ಕುಟುಂಬದ ಬಗ್ಗೆ ಮಾಹಿತಿ ಕೂಡ ಲಭ್ಯವಾಗಿದೆ ಎನ್ನಲಾಗುತ್ತಿದೆ. ಸದ್ಯದಲ್ಲೇ ಸಿಡಿ ಗ್ಯಾಂಗ್ ಯಲ್ಲಿರುವವರ ಬಗ್ಗೆ ಎಸ್ಐಟಿ ಸಂಪೂರ್ಣ ಮಾಹಿತಿ ಕಲೆ ಹಾಕಲಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights