ಬೆಂಗಳೂರಿನಲ್ಲೇ ವಿಡಿಯೋ ಅಪ್ಲೋಡ್ ಮಾಡಿ ರಷ್ಯಾದ ಅಡ್ರೆಸ್ ಹಾಕಿದ ರಮೇಶ್ ಸಿಡಿ ಗ್ಯಾಂಗ್!

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಎಸ್ಐಟಿಗೆ ವಹಿಸುತ್ತಿದ್ದಂತೆ ಮೊದಲ ದಿನವೇ ರೋಚಕ ಸತ್ಯಗಳು ಬಯಲಾಗುತ್ತಿವೆ. ಈ ಪ್ರಕರಣದಲ್ಲಿ ಐವರನ್ನು ವಶಕ್ಕೆ ಪಡೆದ ಎಸ್ಐಟಿ ವಿಚಾರಣೆಯನ್ನು ಚುರುಕುಗೊಳಿಸಿದೆ.

ಈ ವಿಚಾರಣೆಯಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿದ್ದು ಬೆಂಗಳೂರಿನಲ್ಲೇ ಎನ್ನಲಾಗುತ್ತಿದೆ. ಸಿಡಿ ಕ್ರಿಯೇಟ್ ಗ್ಯಾಂಗ್ ಸಿಡಿಯನ್ನು ಬೆಂಗಳೂರಿನಲ್ಲೇ ಅಪ್ಲೋಡ್ ಮಾಡಿ ಐಪಿ ಅಡ್ರೆಸ್ ಚೇಂಜ್ ಮಾಡಿದೆ. ಜೊತೆಗೆ ರಷ್ಯದ ಸರ್ವರ್ ನಿಂದ ಅಪ್ಲೋಡ್ ಮಾಡಿದ್ದಾರೆ. ಮೇಲ್ನೋಟಕ್ಕೆ ರಷ್ಯದಲ್ಲಿ ಈ ಸಿಡಿ ಬಿಡುಗಡೆಯಾಗಿದೆ ಎನ್ನುವಂತೆ ಈ ಕೆಲಸ ಮಾಡಲಾಗಿದೆ. ಪರಿಣಾಮ ತಾವು ಈ ಕೇಸ್ ನಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ ಎನ್ನುವ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ತನಿಖೆ ಮಾಹಿತಿ ಮೇಲೆ ಆಂದ್ರಕ್ಕೆ ತೆರಳಿರೋ ಇನ್ನಿಬ್ಬರು. ಮಾಹಿತಿ ಆಧಾರದ ಮೇಲೆ ಇನ್ನಿಬ್ಬರ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ. ತಲೆಮರಿಸಿಕೊಂಡವರೇ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದೆ. ಎಸ್ಐಟಿ ಮೊದಲ ದಿನವೇ ಐದು ಜನರನ್ನು ವಶಕ್ಕೆ ಪಡೆದು ವಿಚಾರಣೆ ಚುರುಕುಗೊಳಿಸಿದೆ.

ಬಂಧಿತರಲ್ಲಿ ಓರ್ವ ಸಿಡಿಯಲ್ಲಿರುವ ಯುವತಿಯ ಬಾಯ್ ಫ್ರೆಂಡ್ ಎನ್ನಲಾಗುತ್ತಿದೆ. ಈತನಿಗೆ ಈ ಸಿಡಿಯ ಸಂಪೂರ್ಣ ಮಾಹಿತಿ ಇದೆ ಎನ್ನಲಾಗುತ್ತಿದೆ. ಆತನನ್ನು ವಿಚಾರಣೆ ಮಾಡಲಾಗುತ್ತಿದ್ದು ಎಲ್ಲಾ ಆಯಾಮಗಳಿಂದ ಪ್ರಶ್ನಿಸಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights