ರಮೇಶ್ ಸಿಡಿ ಕೇಸ್ : ಓರ್ವ ಯುವತಿ ಸೇರಿ ಐವರನ್ನು ವಶಕ್ಕೆ ಪಡೆದ ಎಸ್ಐಟಿ!

ರಾಜ್ಯ ರಾಜಕೀಯಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಸ್ಐಟಿ ಐದು ಜನರನ್ನು ವಶಕ್ಕೆ ಪಡೆದಿದೆ.

ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ 10 ದಿನಗಳ ಹಿಂದೆ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಯನ್ನು ಬಿಡುಗಡೆ ಮಾಡಿ ದೂರು ನೀಡಿದ್ದರು. ಬಳಿಕ ದೂರನ್ನು ವಾಪಸ್ಸು ಪಡೆದುಕೊಂಡಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಅವರು ಸಿಡಿ ಬಿಡುಗಡೆಯಾಗುತ್ತಿದ್ದಂತೆ ಭಾರೀ ಚರ್ಚೆಗೆ ಗ್ರಾಸವಾಗಿ ಕೊನೆಗೆ ರಮೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಮಾಡಿತು.

ಆದರೆ ದೂರುದಾರ ದಿನೇಶ್ ದೂರು ವಾಪಸ್ಸು ಪಡೆದರೂ ಕೂಡ ಸಿಡಿ ಬಗ್ಗೆ ತನಿಖೆಯಾಗಬೇಕು ಎನ್ನುವ ಒತ್ತಾಯದ ಮೇರೆಗೆ ಸಿಡಿ ಬಗ್ಗೆ ಮಾಹಿತಿ ಪಡೆಯಲು ಎಸ್ಐಟಿ ಗೆ ವಹಿಸಲಾಗಿತ್ತು. ಎಸ್ಐಟಿಗೆ ಈ ಪ್ರಕರಣ ವಹಿಸಿದ ಒಂದೇ ದಿನದಲ್ಲಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.

ಈ ಐವರದಲ್ಲಿ ಓರ್ವ ಯುವತಿ ಇದ್ದಾಳೆ. ವಶಕ್ಕೆ ಪಡೆದವರ ಪೈಕಿ ವಿಜಯನಗರದಲ್ಲಿ ರೂಮ್ ಮಾಡಿಕೊಂಡ ಯುವಕನ್ನು ವಶಪಡಿಸಿಕೊಳ್ಳಲಾಗಿದೆ. ಈತನೊಂದಿಗೆ ಈತನ ರಾಮನಗರದ ಸ್ನೇಹಿತೆ ಹಾಗೂ ಚಾಮರಾಜಪೇಟೆಯಲ್ಲಿ ಇದ್ದ ಮತ್ತೋರ್ವ ವ್ಯಕ್ತಿ ಹಾಗೂ ಚಿಕ್ಕಮಗಳೂರಿನ ಆಲ್ದೂರಿನ ಯುವಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನೊಬ್ಬ ಸಿಡಿಯಲ್ಲಿರುವ ಯುವತಿಯ ಬಾಯ್ ಫ್ರೆಂಡ್ ಎಂದು ಹೇಳಲಾಗುತ್ತಿದೆ.

ಇದರಲ್ಲಿ ಯುವತಿಯೇ ದಿನೇಶ್ ಕಲ್ಲಹಳ್ಳಿಗೆ ಸಿಡಿ ಕೊಟ್ಟಳಾ? ಅಥವಾ ಯುವಕ ಕೊಟ್ಟನಾ? ಅನ್ನೋ ವಿಚಾರಣೆ ನಡೆಯುತ್ತಿದೆ.

ಸಿಡಿ ಮೇಕಿಂಗ್ ಗ್ಯಾಂಗ್ ಅನುಮಾನದ ಮೇಲೆ ಐವರನ್ನು ವಶಕ್ಕೆ ಪಡೆದಿದೆ. ನಾಲ್ವರ ಕಾಲ್ ರೆಕಾರ್ಡ್ಸ್ ಆಧಾರದ ಮೇಲೆ ಇವರನ್ನು ಎಸ್ಐಟಿ ಬಂಧಿಸಿದೆ. ನಾಲ್ವರಲ್ಲಿ ಒಬ್ಬ ಯುವಕ ಹ್ಯಾಕಿಂಗ್ ನಲ್ಲಿ ಎಕ್ಸಪರ್ಟ್ ಎನ್ನಲಾಗುತ್ತಿದೆ.

ಐವರಲ್ಲಿ ಇರುವ ಓರ್ವ ಯುವತಿಯೇ ದಿನೇಶ್ ಕಲ್ಲಹಳ್ಳಿಗೆ ಸಿಡಿ ಕೊಟ್ಟಿದಿಯಾ ಅನ್ನೋ ಅನುಮಾನ ಶುರುವಾಗಿದೆ. ಮಾತ್ರವಲ್ಲದೇ ಯಾರು ಅಪ್ಲೋಡ್ ಮಾಡಿದ್ದು? ಯಾವಾಗ ಮಾಡಿದ್ದು? ಎಲ್ಲಿ ಮಾಡಿದ್ದು? ರಮೇಶ್ ಜಾರಕಿಹೊಳಿ ಕೊಟ್ಟಂತ 9 ಜನರಲ್ಲಿ ಇವರೇ ಐದು ಜನನಾ?  ಹೀಗೆ ನಾನಾ ಆಯಾಮದಲ್ಲಿ ಎಸ್ಐಟಿ ಇನ್ನೂ ತನಿಖೆ ನಡೆಸುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights