ಉತ್ತರ ಪ್ರದೇಶ ಚುನಾವಣೆ: ಯೋಗಿ ಆದಿತ್ಯಾನಾಥ್ ವಿರುದ್ದ ಕಣಕ್ಕಿಳಿಯಲಿದ್ದಾರೆ ಮಾಜಿ ಐಎಎಸ್ ಅಧಿಕಾರಿ!
ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಆ ಚುನಾವಣೆಯಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ವಿರುದ್ದ ಮಾಜಿ ಐಎಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರಿಗೆ ಬೆದರಿಕೆ ಹಾಕಿದ ಆರೋಪ ಹೊತ್ತಿದ್ದ ಅಮಿತಾಬ್ ಠಾಕೂರ್ ಅವರಿಗೆ ಕೇಂದ್ರ ಗೃಹ ಸಚಿವಾಲಯವು ಮಾರ್ಚ್ 23 ರಂದು ಕಡ್ಡಾಯ ನಿವೃತ್ತಿ ನೀಡಿತ್ತು. ಅಲ್ಲದೆ, ಠಾಕೂರ್ ಅವರು ಸೇವೆಯಲ್ಲಿ ಮುಂದುವರೆಯಲು ಯೋಗ್ಯವಾಗಿಲ್ಲ. ಅವರಿಗೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಕಾಲಿಕ ನಿವೃತ್ತಿ ನೀಡಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ಹೇಳಿತ್ತು.
ಕಡ್ಡಾಯ ನಿವೃತ್ತಿ ಪಡೆದು ಸೇವೆಯಿಂದ ಹೊರಬಂದಿರುವ ಅಮಿತಾಬ್ ಠಾಕೂರ್ ಅವರು ಯೋಗಿ ಆಧಿತ್ಯಾನಾಥ್ ವಿರುದ್ದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಅಮಿತಾಬ್ ಠಾಕೂರ್ ಅವರ ಪತ್ನಿ ನೂತನ್ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಉತ್ತರ ಪ್ರದೇಶ ಸಿ-ವೋಟರ್ ಸಮೀಕ್ಷೆ: ಮತ್ತೆ ಅಧಿಕಾರ ಹಿಡಿಯಲಿದೆ ಬಿಜೆಪಿ; ಕಾಂಗ್ರೆಸ್ ಕಳಪೆ ಪ್ರದರ್ಶನ ಸಾಧ್ಯತೆ!
ಇದು ತತ್ವಗಳಿಗಾಗಿ ಹೋರಾಟ. ಆದಿತ್ಯನಾಥ್ ಅವರು ತಮ್ಮ ಅವಧಿಯಲ್ಲಿ ಅನೇಕ ಅನುಚಿತ, ದಮನಕಾರಿ, ಕಿರುಕುಳ ಮತ್ತು ತಾರತಮ್ಯದ ಕ್ರಮಗಳನ್ನು ಕೈಗೊಂಡಿದ್ದಾರೆ. ಅವರನ್ನು ಚುನಾವಣೆಯಲ್ಲಿ ಮಣಿಸಬೇಕು. ಹೀಗಾಗಿ ಅಮಿತಾಬ್ ಅವರು ಆದಿತ್ಯನಾಥ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ” ಎಂದು ಅವರು ಹೇಳಿದ್ದಾರೆ.
ಅಮಿತಾಬ್ ಠಾಕೂರ್ ಅವರ ಸೇವಾವಧಿ 2028 ರಲ್ಲಿ ಅಂತ್ಯಗೊಳ್ಳಿತ್ತು. ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಅಧಿಕಾರಿಯನ್ನು ಜುಲೈ 13, 2015 ರಂದು ಅಮಾನತುಗೊಳಿಸಲಾಗಿತ್ತು. ಆದಾಗ್ಯೂ, ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ ಲಕ್ನೋ ಪೀಠವು 2016 ರ ಏಪ್ರಿಲ್‌ನಲ್ಲಿ ಅವರ ಅಮಾನತಿಗೆ ತಡೆ ನೀಡಿತು. ಅಲ್ಲದೆ, ಅಕ್ಟೋಬರ್ 11, 2015 ರಿಂದ ಜಾರಿಗೆ ಬರುವಂತೆ ಪೂರ್ಣ ವೇತನದೊಂದಿಗೆ ಅವರನ್ನು ಮತ್ತೆ ಸೇವೆಯಲ್ಲಿ ಮುಂದುವರೆಸುವಂತೆ ಆದೇಶಿಸಿತ್ತು. ಇದೆಲ್ಲದರ ನಡುವೆ ಇದೂಗ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಕಾಂಗ್ರೆಸ್‌ಗೆ ಚುನಾವಣಾ ಯುದ್ದ; ಪ್ರಿಯಾಂಕಾ ಗಾಂಧಿಗೆ ಕಠಿಣ ಪರೀಕ್ಷೆ!

