ಮತ್ತೊಂದು ವಿವಾದಕ್ಕೆ ಸಿಲುಕಿದ ಮೈಸೂರು ಹೆಲಿಟೂರಿಸಂ; ಜಾಗ ನಮ್ಮದು ಎಂದ ರಾಜವಂಶಸ್ಥೆ!

ಮೈಸೂರಿನಲ್ಲಿ ಹೆಲಿಟೂರಿಸಂ ಅನ್ನು ಅಭಿವೃದ್ಧಿ ಮಾಡಲು ಲಲಿತ ಮಹಲ್‌ ಬಳಿ ಮರಗಳನ್ನು ಕತ್ತರಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಇದು ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಮರಗಳನ್ನು ಕಡಿಯಬಾರದು ಎಂದು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವೇಳೆ ಹೆಲಿಟೂರಿಸಂ ವಿಚಾರದಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗಿದ್ದು, ಹೆಲಿಪ್ಯಾಡ್‌ ನಿರ್ಮಾಣಕ್ಕೆ ಮುಂದಾಗಿರುವ ಜಾಗ ರಾಜಮನೆತನಕ್ಕೆ ಸೇರಿದ್ದು ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ.

ಈ ಬಗ್ಗೆ ಪ್ರಮೋದಾ ದೇವಿ ಅವರು ಅರಣ್ಯ ಇಲಾಖೆಗೆ ಪತ್ರ ಒಂದನ್ನು ಬರೆದಿದ್ದು, ಅದರಲ್ಲಿ ಮೈಸೂರಿನಲ್ಲಿ ಹೆಲಿಟೂರಿಸಂಗಾಗಿ ಮರಗಳನ್ನು ಕಡಿಯಲು ಗುರುತು ಮಾಡಿರುವ ಜಾಗ ರಾಜಮನೆತನಕ್ಕೆ ಸೇರಿದ್ದು. ಇದು ನಮ್ಮ ಕುಟುಂಬಕ್ಕೆ ಸೇರಿದ ಜಾಗ. ಈ ಬಗ್ಗೆ ಹೈಕೋರ್ಟ್ ನಲ್ಲಿ ಕೂಡ ನಮ್ಮ ಪರವಾಗಿ ತೀರ್ಪು ಬಂದಿದೆ. ಹೀಗಿರುವಾಗ ಮರ ಕಡಿಯಲು ಸಾರ್ವಜನಿಕ ಆಕ್ಷೇಪಣಾ ಅರ್ಜಿ ಕರೆದಿರುವುದು ಕಾನೂನು ಬಾಹಿರ ಹಾಗೂ ಅತಿಕ್ರಮ ಪ್ರವೇಶವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಕ್ಷೇಪಣ ಅರ್ಜಿ ಪ್ರಕ್ರಿಯೆ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಅಲ್ಲದೆ, ತಮ್ಮ ಜಾಗದಲ್ಲಿನ ಮರಗಳನ್ನು ಉಳಿಸಿಕೊಳ್ಳಲು ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಬಂಡಾಯದ ವಿರುದ್ದ BJP ಕ್ರಮ: ಸ್ವತಂತ್ರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಪಕ್ಷದಿಂದ ಉಚ್ಛಾಟನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights