ಮಾಸ್ಕ್‌ ಹಾಕಳಿ – ದೂರ ನಿಂತ್ಕಳಿ; ಹೇಳೋದೊಂದು ಮಾಡೋದು ಇನ್ನೊಂದು; BJP ರಾಜ್ಯಾಧ್ಯಕ್ಷ ನಳಿನ್‌ ಫೋಟೋ ಟ್ರೋಲ್‌!

ದೇಶಾದ್ಯಂತ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಪ್ರತಿದಿನ ಲಕ್ಷಕ್ಕೂ ಅಧಿಕ ಹೊಸ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಾಸ್ಕ್‌ ಹಾಕಿಕೊಳ್ಳುವುದು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂದು ಕೇಂದ್ರ ಸರ್ಕಾರ ಮನವಿ ಮಾಡುತ್ತಿದೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲೆಯ ಸಂದಸ ನಳಿನ್‌ ಕುಮಾರ್‌ ಕಟೀಲ್‌ ಅವರ ಒಂದು ಫೋಟೋ ಭಾರೀ ಟ್ರೋಲ್‌ ಆಗುತ್ತಿದೆ.

ಕೋವಿಡ್‌ ವಾರ್ಗಸೂಚಿಯನ್ನು ಸೂಚಿಸುವ ಫೋಟೋದಲ್ಲಿ ‘ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ನಿಮ್ಮನ್ನು ಮತ್ತು ಇತರರನ್ನು ರಕ್ಷಿಸಿ’ ಎನ್ನುವ ಬರಹವಿರುವ ಬ್ಯಾನರ್‌ ಕಟ್ಟಲಾಗಿದೆ. ಅದರ ಮುಂದೆ ಬರೋಬರಿ 18 ಜನರು ಮಾಸ್ಕ್‌ ಹಾಕದೇ, ಸಾಮಾಜಿಕ ಅಂತರವೂ ಇಲ್ಲದೆ ಕಳಿತಿದ್ದಾರೆ. ಅವರಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಕುಮಾರ್‌ ಕೂಡ ಒಬ್ಬರು.

ಕೋವಿಡ್‌ ಮಾರ್ಗಸೂಚಿಯುಳ್ಳ ಬ್ಯಾನರ್‌ ಎದುರೇ ಮಾರ್ಗಸೂಚಿಗೆ ವಿರುದ್ಧವಾಗಿ ಕುಳಿತಿರುವ ಕಟೀಲ್‌ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ.

ಮಾಸ್ಕ್ ಹಾಕಿಕೊಳ್ಳುವ ಬಗ್ಗೆ ಜನರಿಗೆ ತಿಳಿಹೇಳಬೇಕಾದ ಜನಪ್ರತಿನಿಧಿಗಳಾದ ಮಾನ್ಯ ಕಟೀಲ್ ಮತ್ತವರ ಅಕ್ಕಪಕ್ಕ ಕೂತವರು ಹಾಕಿಕೊಂಡಿದ್ದಾರಾ? ಕಟೀಲ್ ಮಾಸ್ಕ್ ಮುಖಕ್ಕೆ ಹಾಕಿಕೊಂಡಿದ್ದಾರಾದರೂ, ಅದು ಎಲ್ಲಿ ಇರಬೇಕೋ ಅಲ್ಲಿಲ್ಲ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ಇನ್ನಯ ಮಾಸ್ಕ್‌ ಹಾಕಿಕೊಳ್ಳದೇ ಸಾಲುಗಟ್ಟಿ ಕುಳಿತಿರುವ ಇವರೆಲ್ಲರಿಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ದಂಡ ಏನಾದರೂ ವಿಧಿಸಿದೆಯಾ ಅಥವಾ ಈ ದಂಡ ಎನ್ನುವುದು ಬರೀ ಬಡಪಾಯಿ ಜನಸಾಮಾನ್ಯರಿಗಾ ಮಾತ್ರನಾ. ಎಂಥ ಅವಸ್ಥೆ ಮಾರ್ರೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಚುನಾವಣಾ ಪ್ರೋಮೋದಲ್ಲಿ ಶ್ರೀನಿಧಿ ಚಿದಂಬರಂ ಅವರ ವಿಡಿಯೋ ಬಳಿಸಿಕೊಂಡ ಬಿಜೆಪಿ; ಜಾಲತಾಣದಲ್ಲಿ ಟ್ರೋಲ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights