ಸೌಹಾರ್ದತೆಯ ಕರ್ನೂಲ್: ಪ್ರತಿ ಯುಗಾದಿಯಲ್ಲೂ ದೇವಸ್ಥಾನದಲ್ಲಿ ಮುಸ್ಲಿಮರ ಪ್ರಾರ್ಥನೆ!

ಕೇರಳದ ಕರ್ನೂಲ್‌ ಜಿಲ್ಲೆಯ ಕಡಪ ಎಂಬ ಊರು ಕೋಮು ಸೌಹಾರ್ದತೆಯನ್ನು ಸಂಕೇತವಾಗಿ ಬೆಳೆದು ಬಂದಿದೆ. ಹಳಯೆ ಸಂಪ್ರದಾಯವೆಂಬಂತೆ ಅಲ್ಲಿನ ಮುಸ್ಲಿಮರು ಪ್ರತಿ ಯುಗಾದಿ ಹಬ್ಬದ ದಿನದಂದು ದೇವನಿಕದಪದಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಅದೇ ರೀತಿಯಲ್ಲಿ ಮಂಗಳವಾರ ನಡೆದ ಉಗಾದಿ ಹಬ್ಬದ ದಿನ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರು, ಮಕ್ಕಳು ಮತ್ತು ಪುರುಷರು ವೆಂಕಟೇಶ್ವರ ಸ್ವಾಮಿ ಮತ್ತು ಪದ್ಮಾವತಿ ದೇವಿ ದರ್ಶನವನ್ನು ಪಡೆದು, ತೆಂಗಿನಕಾಯಿ, ಹಣ್ಣುಗಳು, ಅಕ್ಕಿ, ಸಿರಿಧಾನ್ಯ ಮತ್ತು ಕರ್ಪೂರವನ್ನು ದೇವತೆಗಳಿಗೆ ಅರ್ಪಿಸಿದ್ದಾರೆ.

ಅವರು ಗರ್ಭಗುಡಿ, ಧ್ವಾಜಾ ಸ್ತಂಭ ಮತ್ತು ಬಲಿಪೀಠದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಪುರೋಹಿತರಿಂದ ತೀರ್ಥ-ಪ್ರಸಾದವನ್ನು ಪಡೆದರು. ಅರ್ಚಕರು ಅವರಿಗೆ ಆಶೀರ್ವದಿಸಿದರು. ದೇವಿಗೆ ಒಂದು ವಿಶಿಷ್ಟವಾದ ಅರ್ಪಣೆಯಾಗಿ ಬೆಲ್ಲ ಮತ್ತು ಕಬ್ಬಿನಿಂದ ಮಾಡಿದ ವೆಪಪತಿಯನ್ನು ನೀಡಿ ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

ಮುಸ್ಲಿಮರು ಭಗವಂತ ಮತ್ತು ಅವರ ಪತ್ನಿ ಬೀಬಿ ನಂಚರಮ್ಮರಿಗೆ ಸಾಂಪ್ರದಾಯಿಕ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಇದು ಯುಗ-ಯುಗಗಳಿಂದದಲೂ ಪ್ರಚಲಿತದಲ್ಲಿದೆ ಎಂದು ಅವರ ಕುಟುಂಬ ಸದಸ್ಯರೊಂದಿಗೆ ಬಂದಿದ್ದ ಬಾಷಾ ಅವರು ಹೇಳಿದರು.

ಇದು ರಾಯಲಸೀಮಾ ಪ್ರದೇಶದಾದ್ಯಂತ ಪ್ರಚಲಿತದಲ್ಲಿರುವ ಅಭ್ಯಾಸವಾಗಿದ್ದು, ಚಿತ್ತೂರು, ಕರ್ನೂಲ್ ಮತ್ತು ಅನಂತಪುರ ಜಿಲ್ಲೆಯ ಅನೇಕ ಮುಸ್ಲಿಮರು ಕೂಡ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವೆಂಕಟೇಶ್ವರ ಸ್ವಾಮಿಯು ಬೀಬಿ ನಂಚರಮ್ಮನನ್ನು ಮದುವೆಯಾದರು ಎಂಬು ನಂಬಿರುವ ಮುಸ್ಲಿಮರು ಆತನನ್ನು ತಮ್ಮ ಅಳಿಯನಂತೆ ಪರಿಗಣಿಸುತ್ತಾರೆ.

ಇದನ್ನೂ ಓದಿ: ಕುಂಭಮೇಳದಲ್ಲಿ ಕೊರೊನಾ ಅಬ್ಬರ; ಹರಿದ್ವಾರಕ್ಕೆ ತೆರಳಿದ್ದ 1700 ಜನರಿಗೆ ಕೋವಿಡ್‌ ಪಾಸಿಟಿವ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights