ಅತ್ಯಾಚಾರಿ ತಂದೆಯಿಂದ ತಪ್ಪಿಸಿಕೊಂಡು ಮತ್ತೋರ್ವ ಕಾಮುಕನ ಕಣ್ಣಿಗೆ ಬಿದ್ದ ಬಾಲಕಿ!
ಅತ್ಯಾಚಾರಿ ತಂದೆಯಿಂದ ತಪ್ಪಿಸಿಕೊಂಡು ಮತ್ತೋರ್ವ ಕಾಮುಕನ ಕಣ್ಣಿಗೆ ಬಿದ್ದ ಬಾಲಕಿ ಮೇಲೆ ಒಂದು ತಿಂಗಳ ಕಾಲ ಅತ್ಯಾಚಾರ ನಡೆದ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ.
ತನ್ನ ಮೇಲೆ ಅತ್ಯಾಚಾರ ಮಾಡಿದ ತಂದೆಯಿಂದ ತಪ್ಪಿಸಿಕೊಂಡ 15 ವರ್ಷದ ಬಾಲಕಿ ಮೇಲೆ 28 ದಿನಗಳ ಕಾಲ ಮತ್ತೋರ್ವ ಕಾಮುಕ ಅತ್ಯಾಚಾರ ಎಸಗಿದ್ದಾನೆ. ಆಕೆಯ ಮೇಲೆ ದೈಹಿಕ ಹಲ್ಲೆಯಿಂದಾಗಿ ಬಾಲಕಿಯ ಅಜ್ಜ ಪೊಲೀಸ್ ಠಾಣೆಗೆ ಕರೆದೊಯ್ದಾಗ ಈ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೌನ್ಸೆಲಿಂಗ್ ನಲ್ಲಿ, ಹುಡುಗಿ ತನ್ನ ಅಗ್ನಿಪರೀಕ್ಷೆಯನ್ನು ವಿವರಿಸಿದ್ದಾಳೆ ಮತ್ತು ಕಳೆದ ಎರಡು ವರ್ಷಗಳಿಂದ ತನ್ನ ತಂದೆ ಪದೇ ಪದೇ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಹೇಳಿದ್ದಾಳೆ. ಪಾಪಿ ತಂದೆ ಹುಡುಗಿ 13 ವರ್ಷ ತುಂಬಿದಾಗ ಅವಳ ಮೇಲೆ ಲೈಂಗಿಕ ದೌರ್ಜನ್ಯವನ್ನು ಪ್ರಾರಂಭಿಸಿದ್ದಾನೆ.
ಈ ವಿಚಾರ ತಿಳಿದ ಬಾಲಕಿಯ ಅಜ್ಜ ಅವಳನ್ನು ಹಳ್ಳಿಯ ಬಳಿ ಒಂದು ಪ್ರತ್ಯೇಕ ಮನೆಯಲ್ಲಿರಿಸುತ್ತಾನೆ. ಆದರೆ ಪ್ರತಿದಿನ ಅವಳನ್ನು ಪಾಪಿ ತಂದೆ ಬೇಟಿ ಮಾಡಲು ಅಲ್ಲಿಗೆ ತೆರಳುತ್ತಿದ್ದನು ಎಂದು ಬಾಲಕಿ ಹೇಳಿಕೊಂಡಿದ್ದಾಳೆ.
ಬಳಿಕ ಹುಡುಗಿಯ ಚಿಕ್ಕಪ್ಪ ಇನ್ನೊಬ್ಬ ವ್ಯಕ್ತಿಯನ್ನು ಬಾಲಕಿ ಮನೆಗೆ ಕಳುಹಿಸಿದ್ದಾನೆ. ಆ ವ್ಯಕ್ತಿ ಬಾಲಕಿ ಮೇಲೆ 28 ದಿನಗಳ ಸೆರೆಯಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅವಳು ಆ ಮನೆಯಿಂದ ತಪ್ಪಿಸಿಕೊಂಡು ಅಜ್ಜಿಯ ಮನೆಗೆ ಬಂದಾಗ, ಅವಳ ತಂದೆ ಮತ್ತೆ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಹುಡುಗಿ ತನ್ನ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಅಜ್ಜಿಯರೊಂದಿಗೆ ವಾಸಿಸುತ್ತಿದ್ದಳು. ಚಿಕ್ಕಪ್ಪ ಮತ್ತು ಚಿಕ್ಕಮ್ಮ ಕೂಡ ಅವಳನ್ನು ನಿಂದಿಸಿದರು ಆದರೆ ಅವಳು ಅಜ್ಜಿಯರ ಬೆಂಬಲದೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.
ಸದ್ಯ ಬಾಲಕಿ ತನ್ನ ತಂದೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ದೂರು ದಾಖಲಿಸಿದ್ದಾಳೆ. ಜೊತೆಗೆ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.