ಪೂನಂ ಪಾಂಡೆ ಅರೆನಗ್ನ ಫೋಟೋಶೂಟ್ಗೆ ಅವಕಾಶ : ಗೋವಾ ಪೊಲೀಸ್ ಇನ್ಸ್‌ಪೆಕ್ಟರ್ ಅಮಾನತು!

ಮಾಡೆಲ್ ಪೂನಮ್ ಪಾಂಡೆ ಅರೆ ನಗ್ನ ಫೋಟೋಶೂಟ್ ಆಯೋಜಿಸಲು ಅವಕಾಶ ನೀಡಿದ್ದಕ್ಕಾಗಿ ಗೋವಾ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಲಾಗಿದೆ. ಚಿತ್ರೀಕರಣದ ಸಮಯದಲ್ಲಿ ಸೈಟ್ನಲ್ಲಿ ಒಂದು ಸಣ್ಣ ವೀಡಿಯೊವನ್ನು ಸಹ ರೆಕಾರ್ಡ್ ಮಾಡಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲತೆ) ಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ವರದಿಯ ಪ್ರಕಾರ, ಪೊಲೀಸರು ಶೂಟಿಂಗ್ ಬಗ್ಗೆ ಆರು ದೂರುಗಳನ್ನು ದಾಖಲಿಸಿದ್ದು, ಇದರಲ್ಲಿ ಪಾಂಡೆ ಅವರನ್ನು ಅಪರಾಧಿ ಎಂದು ಹೆಸರಿಸಲು ಕೋರಿದ್ದಾರೆ. ನಿವಾಸಿಗಳು ಬೀದಿಗಿಳಿದು ವಿರೋಧಿಸಿದ್ದರಿಂದ, ಚಿತ್ರೀಕರಣಕ್ಕೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಲಾಗಿದೆ.

ನಿರ್ಬಂಧಿತ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರದ ವಿರುದ್ಧ ವಿರೋಧ ಪಕ್ಷದವರು ಟೀಕಾಪ್ರಹಾರ ನಡೆಸಿದರು. ಕೆಲವು ಸಂಘಟನೆಗಳು ಪ್ರತಿಭಟನೆ ಸಹ ಮಾಡಿವೆ. ಈ ಸಂಬಂಧ ಗೋವಾ ಫಾರ್ವರ್ಡ್ ಪಾರ್ಟಿ ದೂರು ದಾಖಲಿಸಿದ್ದು, ನಟಿ ವಿರುದ್ಧ ಎಫ್ಐಆರ್ ನಮೂದಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights