ರಾಜ್ಯದಲ್ಲಿ ಕೊರೊನಾ ಸೆಕೆಂಡ್ ಅಟ್ಯಾಕ್ : ದೇಹ ಬಿಟ್ಟು ಹೋದ ಮೇಲೆ ಮತ್ತೆ ಬರುತ್ತೆ ಮಹಾಮಾರಿ!

ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಜನ ಬೇಸತ್ತು ಹೋಗಿದ್ದಾರೆ. ಪ್ರತಿ ನಿತ್ಯ ಭಯದಿಂದಲೇ ಕಾಲ ಕಳೆಯುವಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾ ಕೊರೊನಾ ಬಗ್ಗೆ ಮತ್ತೊಂದು ಆಂತಕಕಾರಿ ವಿಷಯ ಹೊರಬಿದ್ದಿದೆ.

ಹೌದು. ಒಂದು ಬಾರಿ ಕೊರೊನಾ ಬಂದರೆ ಮತ್ತೆ ಕೊರೊನಾ ಸೋಂಕು ಬರೋದಿಲ್ಲ ಎಂದು ನೆಮ್ಮದಿಯ ನಿಟ್ಟುಸಿರುವ ಬಿಡುವ ಜನರಿಗೆ ಶಾಕ್ ಕೊಡುವಂತ ವಿಷಯ ತಜ್ಞರಿಂದ ಬಹಿರಂಗಪಡಿಸಿದ್ದಾರೆ. ಒಂದು ವೇಳೆ ಕೊರೊನಾ 2ನೇ ಬಾರಿಗೆ ಅಟ್ಯಾಕ್ ಆದರೆ ಸಾವಿನ ಹತ್ತಿರಕ್ಕೆ ತೆರಳಿದಂತೆ ಎಂದು ಹೇಳಲಾಗುತ್ತಿದೆ. ಒಂದು ಬಾರಿ ಕೊರೊನಾದಿಂದ ಗುಣಮುಖರಾದರೆ ಅಂತವರಲ್ಲಿ ಇಮ್ಯೂನಿಟಿ ಪವರ್ ಅಧಿಕವಾಗಿರುತ್ತದೆ.

ಈ ಇಮ್ಯೂನಿಟಿ ಪವರ್ ದೇಹದಲ್ಲಿ 4 ರಿಂದ 6 ತಿಂಗಳವರೆಗೆ ಇರುತ್ತದೆ. ಒಂದು ವಾರ, ಒಂದು ತಿಂಗಳ ಬಳಿಕ ಮತ್ತೆ ಕೊರೊನಾ ಬಾರದೇ ಇರಬಹುದು ಆದರೆ 4 ರಿಂದ 6 ತಿಂಗಳಿಗೆ ಮತ್ತೆ ಕೊರೊನಾ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಈ ವೇಳೆ 2ನೇ ಬಾರಿ ಕೊರೊನಾ ರೀ ಇನ್ಫೆಕ್ಷನ್ ಆದ್ರೆ ತೀವ್ರತೆ ಹೆಚ್ಚು ಇರುತ್ತದೆ. ಒಂದು ವೇಳೆ ಮೊದಲ ಬಾರಿಗೆ ಬಂದು ಹೆಚ್ಚು ಬಾಧಿಸಿದರೆ ಎರಡನೇ ಬಾರಿಗೆ ತೀವ್ರತೆ ಇರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಒಟ್ಟು 84,11,034 ಪ್ರಕರಣಗಳು ದಾಖಲಾಗಿವೆ. 5,19,507 ಸಕ್ರಿಯ ಪ್ರಕರಣಗಳು ಇದ್ದರೆ, 77,64,763 ಸೋಂಕಿತರು ಗುಣಮುಖರಾಗಿದ್ದಾರೆ. 1,25,029 ಜನ ಸಾವನ್ನಪ್ಪಿದರೆ, ಕಳೆದ 24 ಗಂಟೆಯಲ್ಲಿ 670 ಜನ ಸಾವನ್ನಪ್ಪಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights