ಅರ್ಹತೆ ಪಡೆದ ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ..? ಯಾರಿಗೆ ಅರ್ಧ ಚಂದ್ರ..?

ಉಪಚುನಾವಣೆ ಗೆದ್ದ 11 ಮಂದಿ ಶಾಸಕರಿಗೆ ಸಚಿವ ಸ್ಥಾನ ಸಿಗುವುದಿಲ್ಲ. ಬದಲಾಗಿ 8 ಮಂದಿ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ ಸೂಚಿಸಿದೆ. ಸಚಿವ ಸ್ಥಾನದಿಂದ ಕೈ ಬಿಟ್ಟ ಆ ಮೂರು ಶಾಸಕರ ಮಾಹಿತಿ ಇಲ್ಲಿದೆ.

ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರ ಪೈಕಿ ಮೊದಲ 6 ಮಂದಿ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ನಿರ್ಧಾರಿಸಿತ್ತು.  ನಂತರ 6 ಶಾಸಕರ ಬದಲಿಗೆ 8 ಮಂದಿ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲು ಹೈಕಮಾಂಡ ಒಪ್ಪಿಗೆ ಸೂಚಿಸಿದೆ.

ಇನ್ನೂ ಮೂರು ಜನ ಶಾಸಕರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿದೆ. ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲರಿಗೆ ಸಚಿವ ಸ್ಥಾನದಿಂದ ಕೈಬಿಡಲಾಗಿದೆ. ಇನ್ನೊಬ್ಬ ಶಾಸಕರ ಹೆಸರನ್ನ ಗುಪ್ತವಾಗಿ ಇಡಲಾಗಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ಇದರ ಬಗ್ಗೆ ಖಚಿತ ಪಡಿಸಿವೆ. ಇವು ಪಕ್ಷದ ಒಳಗಡೆ ಚರ್ಚೆಯಾದ ಅಂಶಗಳಾಗಿವೆ.

ಸಿಎಂ ಯಡಿಯೂರಪ್ಪ ಉಪಚುನಾವಣೆಯಲ್ಲಿ 15 ಕ್ಷೇತ್ರದಲ್ಲಿ ಗೆಲ್ತೀವಿ ಅಂತ ಹೇಳಿಕೊಂಡು ಬಂದಿದ್ರು. ಜೊತೆಗೆ ಅವರೆಲ್ಲರೂ ಸಚಿವರಾಗ್ತಾರೆ ಅನ್ನೋ ಮಾತನ್ನ ಸಿಎಂ ಯಿಡಿಯೂರಪ್ಪ ಹೇಳಿದ್ರು. ಆದರೆ ಉಪಚುನಾವಣೆಯಲ್ಲಿ 11 ಜನ ಮಾತ್ರ ಗೆಲುವು ಸಾಧಿಸಿದ್ದರು. ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡುವ ಲೆಕ್ಕಚಾರವೇ ಬದಲಾಗಿದೆ. ಯಾಕೆಂದರೆ ಬಿಜೆಪಿ ಹೈಕಮಾಂಡ ಪ್ರಾರಂಭದಲ್ಲಿ 6 ಜನ ಶಾಸಕರಿಗೆ ಮಂತ್ರಿಗಿರಿ ನೀಡಲು ಒಪ್ಪಿತ್ತು. ಒತ್ತಾಯದ ಬಳಿಕ 8 ಜನ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ಒಪ್ಪಿದೆ ಎನ್ನಲಾಗುತ್ತಿದೆ. ಈ ಅಂಶ ಸದ್ಯ ಬಿಜೆಪಿ ರಾಜಕೀಯ ವಲಯದಲ್ಲಿ ಸಂಕಷ್ಟಕ್ಕೆ ತಂದಿದೆ.

ಕೊಟ್ಟ ಮಾತನ್ನ ಈಡೇರಿಸ್ತಾರಾ ಸಿಎಂ ಅನ್ನೋ ಅನುಮಾನ ಶುರುವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights